ಹರಿ ಹರ:-ರಾಜ್ಯ ಸರ್ಕಾರವೇ ರೈತರು ಬೆಳೆದ ಭತ್ತವನ್ನು ಬೆಂಬಲ ಬೆಲೆಯಡಿಯಲ್ಲಿ ನೇರವಾಗಿ ಖರೀದಿ ಮಾಡಬೇಕು,ಟೆಕ್ಕಿ ತಾಲ್ಲೂಕಿನ ಹೋಬಳಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್ ಓಂಕಾರಪ್ಪ ನಮ್ಮ ಮಾಧ್ಯಮ ಪ್ರತಿನಿಧಿಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು .
ಹರಿಹರದ ತಾಲ್ಲೂಕು ಕಚೇರಿ ಆವರಣದಲ್ಲಿ ಕೆಲ ಹೊತ್ತು ಮೌನ ಪ್ರತಿಭಟನೆ ನಡೆಸಿ ತಾಲ್ಲೂಕು ದಂಡಾಧಿಕಾರಿ ರಾಮಚಂದ್ರಪ್ಪ ಕೆಬಿ ಇವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿಯಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು ಬೇಸಿಗೆ ಹಂಗಾಮಿನ ಬೆಳೆಯೂ ಈಗಾಗಲೇ ಕಟಾವಿಗೆ ಬಂದಿದ್ದು ಬಹುತೇಕ ರೈತರು ಭತ್ತವನ್ನು ಕಟಾವು ಮಾಡಿ ಮಾರಾಟ ಮಾಡುವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಬೆಲೆಯೂ ಸಂಪೂರ್ಣವಾಗಿ ನೆಲಕಚ್ಚಿದೆ .ಇದರಿಂದ ರೈತರು ತಾವು ಬೆಳೆದ ಭತ್ತವನ್ನು ಮಾರಾಟ ಮಾಡಲು ಹಾಗೂ ಇಟ್ಟುಕೊಳ್ಳಲು ಸಾಧ್ಯವಾಗದೆ ಅಡ್ಡ ಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ .
ಕಳೆದ ಬಾರಿ ಇದೇ ಹಂಗಾಮಿನಲ್ಲಿ ಭತ್ತದ ಬೆಳೆಯು 2000-2200 ವರೆಗೆ ಮಾರಾಟವಾಗಿತ್ತು ಆದರೆ ಈ ಹಂಗಾಮಿನಲ್ಲಿ ಕೇವಲ1400ರಿಂದ1500 ವರೆಗೆ ಮಾತ್ರ ಮಾರಾಟವಾಗುತ್ತಿದೆ .ಇದರಿಂದ ರೈತರು ಬೆಳೆದ ಬೆಳೆ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಸಾಲದ ಸುಳಿಯಲ್ಲಿ ಸಿಲುಕಿ ಮೇಲೆ ಬಾರದೆ ನರಳುತ್ತಿದ್ದಾನೆ .
ಈಗಾಗಲೇ ಕರೋನಾ ಲಾಕ್ ಡೌನ್ನಿಂದ ರೈತ ತಾನು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸರಿಯಾಗಿ ಮಾರಾಟ ಮಾಡಲು ಸಾಧ್ಯವಾಗದೆ ತಾನು ಬೆಳೆದ ಜಮೀನಿನಲ್ಲಿ ಮಣ್ಣು ಪಾಲಾಗಿದೆ ಈ ದೇಶದ ಬೆನ್ನೆಲುಬು ,ಆದರೆ ಅದೇ ಅನ್ನ ನೀಡುವ ರೈತ ಈಗ ಸಂಪೂರ್ಣವಾಗಿ ಕಂಗಾಲಾಗಿ ಹೋಗಿದ್ದಾರೆ .ಮುಂದೆ ಯಾವ ರೀತಿಯಲ್ಲಿ ಬದುಕು ಸಾಗಿಸಬೇಕು ಎಂಬ ಚಿಂತೆಯಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ,
ಕೇಂದ್ರ, ರಾಜ್ಯ ಸರ್ಕಾರಗಳು ರೈತ ಬೆಳೆದ ಬೆಳೆಯನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಬೇಕು .ಖರೀದಿಸುವ ಅವಧಿಯನ್ನು ಮುಂದುವರಿಸಬೇಕು ಎಂದು ಇದೇ ಸಂದರ್ಭದಲ್ಲಿ ಆಳುವಂಥಹ ಸರ್ಕಾರಗಳನ್ನು ಒತ್ತಾಯಿಸುತ್ತೇನೆ.ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು .
ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ ಎಂಎನ್ಸಿ ಕಂಪನಿಗಳಿಂದ ರೈತರಿಗೆ ನ್ಯಾಯ ಸಿಗಲು ಸಾಧ್ಯವೇ ಇಲ್ಲ ,ಎಪಿಎಂಸಿ ವರ್ತಕರಿಂದ ರೈತರಿಗೆ ತೊಂದರೆ ಆಗುತ್ತಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಎಂಎನ್ಸಿ ಕಂಪೆನಿಗಳಿಗೆ ಕೊಡುತ್ತಿದ್ದಾರೆ ಇದುವರೆಗೂ ಎಪಿಎಂಸಿ ವರ್ತಕರಿಂದಲೇ ನ್ಯಾಯ ಪಡೆಯಲು ಸಾಧ್ಯವಾಗಿಲ್ಲ ,ಇನ್ನು ಎಂಎಲ್ಸಿ ಕಂಪನಿಯಿಂದ ರೈತರಿಗೆ ನ್ಯಾಯ ಸಿಗಲು ಸಾಧ್ಯವೇ .?ಆಳುವಂತಹ ಸರ್ಕಾರಗಳು ಇರುವಂತಹ ಎಪಿಎಂಸಿ ಆಡಳಿತವನ್ನೇ ಇನ್ನಷ್ಟು ಬಲಿಷ್ಠಗೊಳಿಸಿ ರೈತರಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಮಾಡಲಿ ರೈತರು ಬೆಳೆದ ಎಲ್ಲ ರೀತಿಯ ಬೆಳೆಗಳನ್ನು ತಂದು ಮಾರಾಟ ಮಾಡುವಂಥಹ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ದೇಶದ ರೈತರ ಹಿತ ಕಾಪಾಡಲಿ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ರಾಮಚಂದ್ರಪ್ಪ ಕೆಬಿ ,ರೈತ ಮುಖಂಡ ಪ್ರಭುಗೌಡ ,ಮಹೇಶ್ವರಪ್ಪ ದುಗ್ಗಳ್ಳಿ ,ಎಂಪಿ ಮಂಜುನಾಥ್, ಲೋಕೇಶ್, ಶಂಭುಲಿಂಗಪ್ಪ ಪಿ,ಶಿವಶಂಕರಪ್ಪ ತಾಲ್ಲೂಕಿನ ಎಲ್ಲಾ ರೈತ ಮುಖಂಡರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು .
Be the first to comment