ಜೀಲ್ಲಾ ಸುದ್ದಿಗಳು
ಬಾಗಲಕೋಟೆ :ಖಾಯಂ ವೈದ್ಯರಿಗೆ ಸರಿಸಮನಾಗಿ ಕಾರ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರ ಬೇಡಿಕೆಗಳಿಗೆ ಸರಕಾರ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಸಾಮೂಹಿಕವಾಗಿ ಸೇವೆ ಸ್ಥಗಿತಗೊಳಿಸಲು ಆಯುಷ್ ವಿಭಾಗದ ಎಲ್ಲವೈದ್ಯರು ನಿರ್ಧರಿಸಿದ್ದೇವೆ ಎಂದು ಆಯುಷ್ ಫೆಡರೇಷನ್‌ನ ಜಿಲ್ಲಾಘಟಕದ ಖಜಾಂಚಿ ಡಾ.ಆನಂದ ಕಿರಿಶ್ಯಾಳ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಕಾರ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರುಗಳಿಗೆ ತುರ್ತು ಸಂದರ್ಭದಲ್ಲಿರೋಗಿಗಳಿಗೆ ಅಲೋಪತಿ ಔಷಧ ನೀಡಲು ಅನುಮತಿ ನೀಡಿದೆ. ಈ ಆದೇಶವನ್ನು ರಾಜ್ಯದಲ್ಲಿನ ಖಾಸಗಿ ಆಯುಷ್ ವೈದ್ಯರುಗಳಿಗೆ ವಿಸ್ತರಿಸಬೇಕೆಂಬ ಮನವಿಯೂ ಹಾಗೇ ಉಳಿದಿದೆ. ಕೋವಿಡ್-19 ತುರ್ತು ಸಮಯದಲ್ಲಿಖಾಸಗಿ ಆಯುಷ್ ವೈದ್ಯರು ಫೆವರ್ ಕ್ಲಿನಿಕ್ ಹಾಗೂ ಕ್ವಾರಂಟೈನ್‌ನಲ್ಲಿಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಸಂಘದ ಪರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ಡಿಎಚ್‌ಒ ಡಾ.ಅನಂತ ದೇಸಾಯಿ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ಆಯುಷ್ ವೈದ್ಯರ ವೇತನ ಹೆಚ್ಚಳಕ್ಕಾಗಿ ಈಗಾಗಲೆ ಮನವಿ ಸಲ್ಲಿಸಲಾಗಿದೆ. ಮೇ 5 ರಿಂದ ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಸೇವೆ ಮುಂದುವರೆಸಿದ್ದೇವೆ.
ಶಿಷ್ಯ ವೇತನದಲ್ಲೂಸಹ ಆಯುಷ್ ವಿದ್ಯಾರ್ಥಿಗಳಿಗೆ ಕಡಿಮೆ ಶಿಷ್ಯ ವೇತನ ದೊರೆಯುತ್ತಿದೆ.
ಹೀಗಾಗಿ ಸರಕಾರಿ ಆಯುಷ್ ವೈದ್ಯರಿಗೆ ನೀಡಿರುವ ಆದೇಶವನ್ನು ಖಾಸಗಿ ಆಯುಷ್ ವೈದ್ಯರಿಗೂ ವಿಸ್ತರಿಸಬೇಕು. ಆಯುಷ್ ಶಿಷ್ಯ ವೇತನ ತಾರತಮ್ಯ ನಿವಾರಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಎಲ್ಲಸರಕಾರಿ ಗುತ್ತಿಗೆ ಆಯುಷ್ ವೈದ್ಯರು, ಖಾಸಗಿ ಆಯುಷ್ ವೈದ್ಯರು ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಲಿದ್ದೇವೆ. ಸರಕಾರ ಕೂಡಲೆ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಡಾ.ಎಸ್.ಎಲ್.ಬಾಲರಡ್ಡಿ, ಡಾ.ಗಿರೀಶ ನಾಯಕ, ಡಾ.ಎಸ್.ಎಂ.ಅಂಗಡಿ, ಡಾ.ಸುಧೀರ ಕೆ, ಡಾ.ಸಂತೋಷ ಸಿ, ಡಾ.ಬೆವರಡ್ಡಿ, ಡಾ.ಅಯ್ಯನಗೌಡ ಇತರರು ಇದ್ದರು.
Be the first to comment