ಅಂಬಿಗ ಸಮುದಾಯದವರಲ್ಲಿ ಸುಗ್ಗಿಯ ಸಂಭ್ರಮ

ಅಂಬಿಗ ಸಮುದಾಯದವರಲ್ಲಿ ಸುಗ್ಗಿಯ ಸಂಭ್ರಮ
ಮಾಜಾಳಿಯ ದಾಂಡೇಬಾಗ-ಹಿಪ್ಪಳ್ಳಿ ಹಾಗೂ ನೆಚಕನಬಾಗ ಅಂಬಿಗ ಸಮುದಾಯದ ಮೀನುಗಾರರಿಂದ ನಾಳೆ ದಿನಾಂಕ 15 ಮಾರ್ಚ 2019 ಬೆಳಿಗ್ಗೆ 11:00 ಗಂಟೆಗೆ ಕರಿನಾಸ ದೇವರ ಸುಗ್ಗಿ ಮೇಳವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಗುವುದು.

ನಾಳೆಯಿಂದ ಆರು ದಿನಗಳ ಕಾಲ ಸಂಪ್ರದಾಯದದಂತೆ ಹನ್ನೊಂದು ತುರಾಯಿ ಬಣ್ಣಬಣ್ಣದ ವೇಷಭೂಷಣ ಧರಿಸಿಮೆಯ ದಿನ ರಾತ್ರಿ ಸಮುದ್ರ ಸ್ನಾನ ಮಾಡಿ ಅಗ್ನಿ ಹಾಯ್ದು ಪೂಜೆ ಮಾಡುವ ಮೂಲಕ ಆಚರಣೆ ಸಂಪನ್ನವಾಗುತ್ತದೆ

.

 

ನಾಳೆಯಿಂದ ಆರು ದಿನಗಳ ಕಾಲ ಸಂಪ್ರದಾಯದದಂತೆ ಹನ್ನೊಂದು ತುರಾಯಿ ಬಣ್ಣಬಣ್ಣದ ವೇಷಭೂಷಣ ಧರಿಸಿ ವಿವಿಧ ರೀತಿಯ ವಾದ್ಯ ತಾಳಕ್ಕೆ ತಕ್ಕಂತೆ ನರ್ತನ ಮಾಡುತ್ತ, ನಮನ ಹಾಗೂ ಹಾಡು ಸೇರಿದಂತೆ ಅಂಬಿಗ ಸಮುದಾಯದ ಒಟ್ಟು ಒಂಬತ್ತು ಹಳ್ಳಿಗಳಾದ ದೇವಬಾಗ, ಅಸ್ನೋಟಿ, ಕಿನ್ನರ. ಹಳಗಾ. ಹಣಕೋಣ, ಕಣಸಗಿರಿ, ಭಾವಳ ನೇಚಕನಭಾಗ ಹಾಗೂ ದಾಂಡೇಬಾಗ-ಹಿಪ್ಪಳ್ಳಿ ಗ್ರಾಮದ ಎಲ್ಲ ಬುದಂತ, ಪಡದಾರ, ಕೋಲಕರ, ಸಮುದಾಯದ ಮುಖಂಡರು ಹಾಗೂ ಸಮಸ್ಥ ಅಂಬಿಗರು ಸೇರಿ, ಪ್ರತಿ ಮನೆ ಮನೆಗೆ ತೆರಳಿ ಆರತಿ ಸ್ವೀಕರಿಸಿ, ನ್ರತ್ಯವನ್ನು ಮಾಡುತ್ತ ಮದ್ಯಾಹ್ನ ಹಾಗೂ ರಾತ್ರಿ ಮಾಂಸಆಹಾರ ಸ್ವೀಕರಿಸಿ ಆರು ದಿನಗಳಲ್ಲಿ ಆಯಾ ಊರಲ್ಲಿ ವಾಸ್ತವ್ಯ ಮಾಡಿ, ಹಿರಿಯರ ಮಾರ್ಗದರ್ಶನದಂತೆ ಸಮಾಜದ ಮೀನುಗಾರರು ಸಂಪೂರ್ಣ ಮೀನುಗಾರಿಕೆ ಸ್ತಗಿತಗೊಳಿಸಿ ಅಂತಿಮ ದಿನವಾದ ಹುಣ್ಣಿಮೆಯ ರಾತ್ರಿ ಕರಿನಾಸ ದೇವರ ಸಮ್ಮುಖದಲ್ಲಿ ಅಗ್ನಿಪ್ರವೇಶ ಹಾಗೂ ಸಮುದ್ರ ಸ್ನಾನ ಮಾಡಿ ಸಮಾಪ್ತಿ ಮಾಡಲಾಗುವುದು.

ಈ ಕಾರ್ಯಕ್ರಮಕ್ಕೆ ಸಮಸ್ತ ಅಂಬಿಗ ಸಮುದಾಯದ ಮೀನುಗಾರ ಬಾಂಧವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ

*ಸ್ಥಳ : ಕರಿನಾಸ ದೇವಸ್ಥಾನ ದಾಂಡೇಬಾಗ, ಮಾಜಾಳಿ*
ಸ್ವಾಗತ ಕೋರುವರು: ಮುರಳಿ (ಬುದಂತ) ಮಾಜಾಳಿಕರ, ಜ್ಞಾನೇಶವರ (ಪಡದಾರ) ಖೊಬ್ರೇಕರ, ಸಂತೋಷ (ಕೋಲಕಾರ) ತಡಡಿಕರ ಹಾಗೂ ಉದಯ (ಪೂಜಾರಿ) ಮಾಜಾಳಿಕರ.

­https://youtu.be/MdO07cW3Hro https://www.facebook.com/306386910220416/posts/342875303238243/

 

Be the first to comment

Leave a Reply

Your email address will not be published.


*