ಗುಣಮುಖರಾದ ಐವರಿಗೆ ಹಾಗೂ 452 ಜನರಿಗೆ ಬಿಡುಗಡೆ ಬಳ್ಳಾರಿಯಲ್ಲಿ ಲಾಕ್‌ಡೌನ್ ಸಡಿಲಿಕೆ: ಡಿಸಿ ನಕುಲ್

ಜೀಲ್ಲಾ ಸುದ್ದಿಗಳು

ಬಳ್ಳಾರಿ,ಏ.28(ಅಂಬಿಗ ನ್ಯೂಸ್ ): ಬಳ್ಳಾರಿ ಜಿಲ್ಲೆಯಲ್ಲಿ ಈ ಮುಂಚೆ ವಿಧಿಸಲಾಗಿದ್ದ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದ್ದು, ಸಮಯ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ನರೇಗಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ ಮತ್ತು ಜಿಲ್ಲೆಯೊಳಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೋಟಲ್‌ಗಳ ಪಾರ್ಸಲ್ ಸೇವೆಗೆ ಅವಕಾಶ ಮಾಡಿಕೊಡಲಾಗಿದೆ. ಕಾಲುವೆಗಳ ನಿರ್ಮಾಣದಂತ ದೊಡ್ಡ ದೊಡ್ಡ ಕಾಮಗಾರಿಗಳ ನಿರ್ಮಾಣಕ್ಕೆ ಅನುಮತಿ ಪಡೆದು ಪ್ರಾರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ರಾಜ್ಯ ಸರಕಾರ ಏ.22ರಂದು ಲಾಕ್‌ಡೌನ್ ಸಡಿಲಿಕೆ ಮಾಡಿದ್ದರೂ ಅದನ್ನು ಎರಡು ದಿನಗಳಿಂದ ಸಡಿಲಗೊಳಿಸಲಾಗಿದೆ. ಸಾರ್ವಜನಿಕ ಸಾರಿಗೆಗೆ ನಿರ್ಬಂಧ ವಿಧಿಸಲಾಗಿದ್ದು, ನಗರದಲ್ಲಿ ಸೋಮವಾರ ನಿಯಮ ಉಲ್ಲಂಘಿಸಿದ 48 ಆಟೋಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ 304 ಹೆಕ್ಟೇರ್ ಬೆಳೆಹಾನಿಯಾಗಿತ್ತು; ಸಮೀಕ್ಷೆ ಮಾಡಿಸಲಾಗಿದ್ದು, ಈ ವಾರದಲ್ಲಿ ಪರಿಹಾರ ಬಾಧಿತ ರೈತರ ಖಾತೆಗೆ ಜಮಾ ಆಗಲಿದೆ ಎಂದು ವಿವರಿಸಿದ ಅವರು ಇತ್ತೀಚೆಗೆ ಸುರಿದ ಮಳೆಯಿಂದ ಭತ್ತ 2361 ಹೆಕ್ಟೇರ್ ಹಾನಿಯಾಗಿದ್ದು, ಸಿರಗುಪ್ಪವೊಂದರಲ್ಲಿಯೇ 2014 ಹೆಕ್ಟೇರ್ ಹಾನಿಯಾಗಿದ್ದು, ಸಮೀಕ್ಷೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ 2019ರ ಮಾರ್ಚ್ನಿಂದ ಇಲ್ಲಿಯವರೆಗೆ 129 ಡೆಂಘೆ ಪ್ರಕರಣಗಳು ದೃಢಪಟ್ಟಿದ್ದು, ಅಧಿಕ ಪ್ರಮಾಣದಲ್ಲಿ ಡೆಂಘೆ ಪ್ರಕರಣಗಳು ಕಂಡುಬAದೆಡೆ ಮನೆ-ಮನೆ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ನೀರು ಶೇಖರಣೆ, ಲಾರ್ವಾ ಉತ್ಪತ್ತಿ ಹಾಗೂ ಡೆಂಘೆ ರೋಗದ ಕುರಿತು ಜಾಗೃತಿ ಮೂಡಿಸಲು ತಾಲೂಕು ಆಡಳಿತಗಳಿಗೆ ಹಾಗೂ ಆರೋಗ್ಯ ಇಲಾಖೆಗೆ ಸೂಚಿಸಲಾಗಿದ್ದು, ಡೆಂಘೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ತಿಳಿಸಲಾಗಿದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ 13 ಕೊರೊನಾ ಸೊಂಕಿತರಲ್ಲಿ 5 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದ 8 ಜನರು ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂಬುದನ್ನು ತಿಳಿಸಿದ ಡಿಸಿ ನಕುಲ್ ಅವರು, ಸೊಂಕಿತರೊAದಿಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕದ ಮೂಲಕ ಕ್ವಾರಂಟೈನ್‌ನಲ್ಲಿದ್ದ 452 ಜನರಿಗೆ ಈಗಾಗಲೇ ಎರಡು ಬಾರಿ ಪರಿಶೀಲನೆ ನಡೆಸಿ ನೆಗೆಟಿವ್ ವರದಿ ಬಂದ ನಂತರ ಅವರನ್ನು ಬಿಡುಗಡೆ ಮಾಡಲಾಗಿದ್ದು, ಸದ್ಯ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದರು.
241 ಜನರ ಗಂಟಲುದ್ರವ್ಯ ಸಂಗ್ರಹ: ಜಿಲ್ಲೆಯಲ್ಲಿ ದುರ್ಬಲ ಗುಂಪುಗಳಾದ ಗರ್ಭಿಣಿ ಮಹಿಳೆಯರು, ಕ್ಷಯರೋಗ ಪೀಡಿತರು, ಎಚ್‌ಐವಿ, ಡಯಾಲಿಸಿಸ್ ರೋಗಿಗಳು ಮತ್ತು ವಯೋವೃದ್ಧ 40354 ಜನರಲ್ಲಿ ಮನೆ-ಮನೆ ಭೇಟಿ ಸಮೀಕ್ಷೆ ನಡೆಸಲಾಗಿ ಅವರಲ್ಲಿ 241 ಜನರಿಗೆ ಕೆಮ್ಮು, ಶೀತ, ಜ್ವರದಂತ ಲಕ್ಷಣಗಳು ಕಂಡುಬAದ ಹಿನ್ನೆಲೆ ಅವರ ಗಂಟಲು ಮತ್ತು ಮೂಗು ದ್ರವ್ಯವನ್ನು ಸಂಗ್ರಹಿಸಲಾಗುತ್ತಿದೆ ಎಂದು ವಿವರಿಸಿದ ಡಿಸಿ ನಕುಲ್ ಅವರು, ಪ್ರತಿನಿತ್ಯ ಫೀವರ್ ಕ್ಲಿನಿಕ್‌ನಲ್ಲಿ 100 ಜನರ ಗಂಟಲು ಮತ್ತು ಮೂಗು ದ್ರವ್ಯವನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ಬಳ್ಳಾರಿ ನಗರದ ವಿವಿಧೆಡೆ ತಾತ್ಕಾಲಿಕವಾಗಿ ಮಾಡಲಾಗಿರುವ ತರಕಾರಿ ಮಾರಾಟ ವ್ಯವಸ್ಥೆ ಮೇ 3ರವರೆಗೆ ಮುಂದುವರಿಯಲಿದ್ದು, ನಂತರ ಸರಕಾರದ ಸೂಚನೆ ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಸಿ.ಕೆ.ಬಾಬಾ, ಅಪರ ಜಿಲ್ಲಾಧಿಕಾರಿ ಮಂಜುನಾಥ ಮತ್ತು ಡಿಎಚ್‌ಒ ಡಾ.ಜನಾರ್ಧನ್ ಮತ್ತಿತರರು ಇದ್ದರು.

Be the first to comment

Leave a Reply

Your email address will not be published.


*