ಜೀಲ್ಲಾ ಸುದ್ದಿಗಳು
ಚೀನಾದಲ್ಲಿ ಜನ್ಮ ತಾಳಿದ ಕರೋನಾ ವೈರಸ್ ಇಡೀ ಜಗತ್ತನ್ನೇ ಅಯೋಮಯ ಗೊಳಿಸಿದೆ .ಈ ವೈರಸ್ ನಿಯಂತ್ರಣಕ್ಕಾಗಿ ಪ್ರಪಂಚದ ಹಲವು ದೇಶಗಳು ತಮ್ಮ ದೇಶದ ಜನರ ರಕ್ಷಣೆಗಾಗಿ ಹಲವು ರೀತಿಯ ಪ್ರಯೋಗಗಳನ್ನು ನಡೆಸುವುದರ ಮೂಲಕ ತಮ್ಮ ಜನರ ರಕ್ಷಣೆಗೆ ಮುಂದಾಗಿದ್ದಾರೆ .
ಭಾರತವೂ ಸಹ ಕರೋನಾ ವೈರಸ್ ಹರಡಿ ವಿಕ್ಕಿ ಹಾಗೂ ಅದರ ನಿಯಂತ್ರಣಕ್ಕಾಗಿ ,ಹಾಗೂ ದೇಶದ ಜನರ ರಕ್ಷಣೆಗಾಗಿ ಇಡೀ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದೆ .
ಲಾಕ್ ಡೌನ್ ಘೋಷಣೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದೆ. ಜನರು ಅನೇಕ ಸಂಕಷ್ಟಕ್ಕೆ ಸಿಲುಕಿದ್ದಾರೆ .
ಕಾರಣ ವೈರಸ್ ನಿಯಂತ್ರಣಕ್ಕಾಗಿ ಘೋಷಣೆ ಮಾಡಿದ್ದ ಲಾಕ್ ಡೌನ್ನಿಂದ ಜನರು ಅನ್ನವಿಲ್ಲದೆ ಸಾಯಬಾರದು ಎಂದು ಅನೇಕ ಯೋಜನೆಗಳನ್ನು ಘೋಷಣೆ ಮಾಡಿ ಸಮರ್ಪಕವಾಗಿ ಅವರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ .
ದೇಶದ ಪ್ರಧಾನಿಯವರು ಜನರ ಸಂಕಷ್ಟಕ್ಕೆ ದಾನಿಗಳು, ಸಮಾಜ ಸೇವಕರು, ಸಂಘಸಂಸ್ಥೆಯವರು ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಕರೆ ನೀಡಿದ್ದಾರೆ .
ಪ್ರಧಾನಿಯವರ ಮಾತಿಗೆ ಓಗೊಟ್ಟು ದೇಶದ ಅನೇಕ ಸಮಾಜ ಸೇವಕರು ,ದಾನಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಿ ಅವರಿಗೆ ತಮ್ಮ ಕೈಲಾದ ಸಹಾಯ ಹಸ್ತವನ್ನು ಚಾಚುತ್ತಿದ್ದಾರೆ .
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಕರಿಬಸಪ್ಪ ಇಟಗಿ ,ಶಿವಕುಮಾರ್ ಇವರು ಸದ್ದಿಲ್ಲದೆ ತಾಲ್ಲೂಕಿನ ಜನರ ಹಸಿವನ್ನು ನೀಗಿಸುವ ಕೆಲಸವನ್ನು ತೆರೆಯ ಮರೆಯಲ್ಲಿ ಇದ್ದು ಮಾಡುತ್ತಾ ಬಂದಿದ್ದಾರೆ .
ಈಗಾಗಲೇ ಇವರು ತಾಲ್ಲೂಕಿನ ಬಡ ಹಾಗೂ ಮಧ್ಯಮ ವರ್ಗದವರಿಗೆ ಸರಿ ಸುಮಾರು ಎರಡು ಸಾವಿರ ಆಹಾರದ ಕಿಟ್ಟುಗಳನ್ನು ತಾವೇ ಸ್ವತಃ ಮನೆ ಮನೆಗೆ ತೆರಳಿ ತಾಲ್ಲೂಕಿನ ಅಧಿಕಾರಿಗಳ ಸಮ್ಮುಖದಲ್ಲಿ ನೀಡಿದ್ದಾರೆ ಹಾಗೂ ಇದನ್ನು ಇನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ .
ತಾಲ್ಲೂಕಿನ ಜನರಿಗೆ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮುಖ್ಯ ,ನಾವು ನಿಮ್ಮೊಂದಿಗೆ ಇದ್ದೇವೆ .ಯಾರೂ ಭಯ ಬೀಳುವ ಅವಶ್ಯಕತೆಯಿಲ್ಲ ತಾಲ್ಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನಮ್ಮ ಕೈಲಾದ ಸೇವೆಯನ್ನು ಮಾಡುತ್ತೇವೆ ಎಂಬ ಭರವಸೆಯ ಮಾತುಗಳೊಂದಿಗೆ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ .
ಕರಿಬಸಪ್ಪ ಇಟಗಿ ಹಾಗೂ ಶಿವಕುಮಾರ್ ವೃತ್ತಿಯಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಯಿಂದ ಬಂದ ಆದಾಯವನ್ನು ಕ್ರೋಡೀಕರಣ ಮಾಡಿಕೊಂಡು ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯ ನೀಡುತ್ತಿರುವುದು ಇತರ ಜನಪ್ರತಿನಿಧಿಗಳು ನೋಡಿ ಕಲಿಯಬೇಕಾಗಿದೆ .
ಪ್ರಚಾರಕ್ಕಾಗಿ ಮಾಡುವ ಕಾಯಕ ಬೇರೆ, ಮಾನವೀಯತೆಗೆ ಮಿಡಿದು ಮಾಡುವ ಕಾಯಕವೇ ಬೇರೆ.ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡವರು ಪ್ರಚಾರದ ಹಿಂದೆ ಬೀಳುವುದಿಲ್ಲ .ಅವರು ತಮ್ಮ ಕಾಯಕವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗುತ್ತಾರೆ ಎಂಬುದಕ್ಕೆ ಈ ಇಬ್ಬರು ಮಾಡುತ್ತಿರುವ ಸಮಾಜ ಸೇವೆಯೇ ನಿದರ್ಶನವಾಗಿದೆ .
ಎಷ್ಟು ಹಣ ಇದ್ದರೇನು, ಬಿಟ್ಟರೇನು, ಆ ಹಣ ಸಂಕಷ್ಟದ ಸಮಯದಲ್ಲಿ ಇನ್ನೊಬ್ಬರ ಸಹಾಯಕ್ಕೆ ಬರುವಂತಿರಬೇಕು ಅಲ್ಲವೇ .
ಬೇರೆಯವರಿಗಾಗಿ ಮಿಡಿಯುವುದೇ ಸಂಸ್ಕೃತಿ.
ಕರಿಬಸಪ್ಪ ಇಟ್ಟಿಗೆ ಹಾಗೂ ಶಿವಕುಮಾರ್ ಇವರ ಸೇವೆ ಇತರ ದಾನಿಗಳಿಗೆ ಸ್ಫೂರ್ತಿ .
ಇವರ ಸೇವೆ ಹೀಗೆ ನಿರಂತರವಾಗಿ ಸಾಗುತ್ತಿರಲಿ .ಹಾಗೂ ಇವರ ಸೇವೆಯನ್ನು ನಮ್ಮ ವಾಹಿನಿಯ ತುಂಬು ಹೃದಯದಿಂದ ಅಭಿನಂದಿಸುತ್ತದೆ.
Be the first to comment