ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಯಾದಗಿರಿ
ಯಾದಗಿರಿ: ಗ್ರೀನ್ ಝೋನ್ ಲಿಸ್ಟ್ನಲ್ಲಿರುವ ಜಿಲ್ಲೆಗೆ ಇದೀಗ ಕೊರೊನಾ ಕಂಟಕ ಎದುರಾಗಿದೆ.
ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕು ಪತ್ತೆಯಾಗದಿದ್ರೂ, ಕೊರೊನಾ ಸೋಂಕಿತನ ಟ್ರಾವೆಲ್ ಹಿಸ್ಟರಿಯಲ್ಲಿ ಯಾದಗಿರಿ ಹೆಸರು ಕೇಳಿ ಬಂದಿರೋದು ಇದೀಗ ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.
P-413ನೇ ಕೊರೊನಾ ಸೋಂಕಿತ ಕಲಬುರಗಿಯಿಂದ ಯಾದಗಿರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಿರೋದ್ರ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಆತನಿಗೆ ಯಾದಗಿರಿಯಲ್ಲಿ ಕನ್ನಡಕದ ಅಂಗಡಿ ಇದ್ದು, ಆತ ಕೊರೊನಾ ಸೋಂಕಿರೋದು ಗೊತ್ತಾಗುವವರೆಗೂ ಅಂದ್ರೆ ಏಪ್ರಿಲ್ 15ರಿಂದ 22 ರ ವರೆಗೂ ಆತ ಅಂಗಡಿಯನ್ನ ತೆರೆದು ಮಾರಾಟ ಮಾಡಿದ್ದ ಅನ್ನೋದು ಟ್ರಾವೆಲ್ ಹಿಸ್ಟರಿಯಿಂದ ತಿಳಿದು ಬಂದಿದೆ.
ಇನ್ನು ಈತನ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರನ್ನು ಪತ್ತೆ ಹಚ್ಚಿದ ಜಿಲ್ಲಾಡಳಿತ ಅವರನ್ನ ಕ್ವಾರಂಟೈನ್ನಲ್ಲಿರಿಸಿದೆ. ದ್ವಿತೀಯ ಸಂಪರ್ಕದಲ್ಲಿರುವವರಿಗಾಗಿ ಈಗ ತೀವ್ರ ಶೋಧ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಅಧಿಕೃತ ಮಾಹಿತಿ ನೀಡಿದೆ.
Be the first to comment