ಲಾಕ್ ಡೌನ್ ಸಡಿಲಿಕೆ:ನೇಗಿಲಯೋಗಿಯ ಚುರುಕುಗೊಂಡ ಚಟುವಟಿಕೆಗಳು

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಯ ಹಲವೆಡೆಗಳಲ್ಲಿ ಹದವಾದ ಮಳೆಯಾಗಿದೆ,ಲಾಕ್ ಡೌನ್ ಸಡಿಲಿಕೆಯಿಂದಾಗಿ ರೈತರು ತಮ್ಮ ಕಾಯ೯ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.ಪ್ರಾಥಮಿಕವಾಗಿ ಹೊಲಗಳನ್ನು ಹಸನು ಮಾಡುವ ಹಾಗೂ ಬಿತ್ತಲು ಅಗತ್ಯ ತಯಾರಿ ನಡೆಸುತ್ತಿದ್ದಾರೆ.ಸಕಾ೯ರ ಘೋಷಿಸಿರುವ ಲಾಕ್ ಡೌನ್ ಸಡಿಲಿಕೆಯಿಂದಾಗಿ ರೈತರ ಮೊಗದಲ್ಲಿ ನಗೆಬೀರಿದೆ.ಹೊಲ ಗದ್ದೆಗಳಲ್ಲಿ ತಮ್ಮ ಕಾಯ೯ಚಟುವಟಿಕೆಗಳನ್ನ ಪ್ರಾರಂಭಿಸಿದ್ದಾರೆ,ಬೀಜ ಗೊಬ್ಬರ,ಅಗತ್ಯ ಸಲಕರಣೆಗಳ ಖರೀದಿ ಭರಾಟೆಯಿಂದ ಸಾಗಿದೆ.ಲಾಕ್ ಡೌನ್ ರಿಲೀಫ್ ನಿಂದಾಗಿ ರೈತರು,ರೈತಕೃಷಿಕರು,ಕೃಷಿ ಆಧಾರಿತ ಸಲಕರಣೆಗಳ ಮಾರಾಟಗಾರರಿಗೆ,ಕುಶಲಕಮಿ೯ಗಳಿಗೆ ಪೂರಕವಾಗಲಿದೆ.ಕೃಷಿಯಿಂದಾಗಿ ಭೂಮಿ ಹಾನಾಗಲಿದೆ,ಕೃಷಿಕರ ಕೃಷಿಕಾಮಿ೯ಕರ ಜೀವನವೂ ಹಸನಗಾಲಿದೆ.ಸಕಾ೯ರದ ಲಾಕ್ ಡೌನ್ ಸಡಿಲಿಕೆ ಸಮಯೋಚಿತ ನಿಧಾ೯ರನೂ ಸಾಥ೯ಕವಾಗಿದೆ.ನೇಗಿಲಯೋಗಿ ತನ್ನ ಕಾಯಕದೊಂದಿಗೆ ಕೊರೋನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಪಾಲಿಸಬೇಕಿದೆ,ಈ ಮೂಲಕ ಸಕಾ೯ರದ ಕೊರೋನಾದ ವಿರುದ್ಧದ ಸಮರದಲ್ಲಿ ಭಾಗಿಯಾಗಬೇಕಿದೆ.ಅಂದಾಗಮಾತ್ರ ಹಸಿರು ಸೇನೆಯಿಂದ ರಾಜ್ಯದ ಜನತೆಯ ಜೀವನ ಹಸನಾಗಿರಲು ಸಾಧ್ಯ.

Be the first to comment

Leave a Reply

Your email address will not be published.


*