ಜೀಲ್ಲಾ ಸುದ್ದಿಗಳು
ಪ್ರಮುಖ ಸುದ್ದಿ ಅಂಬಿಗ ನ್ಯೂಸ್
ಯಾದಗಿರಿಃ ಲಾಕ್ ಡೌನ್ ಸಡಿಲಿಕೆ ಏನಿದೆ.? ಎಷ್ಟು ಗಂಟೆವರೆಗೆ .?
ಬೆಳಗ್ಗೆ 4 ರಿಂದ ಮದ್ಯಾಹ್ನ 3 ಗಂಟೆಯವರೆಗೆ ದಿನಸಿ, ತರಕಾರಿ, ಹಣ್ಣು, ಹಂಪಲು ವ್ಯಾಪಾರಕ್ಕೆ ಅಸ್ತು
ಯಾದಗಿರಿಃ ಏಪ್ರೀಲ್ 22 ಮಧ್ಯರಾತ್ರಿಯಿಂದಲೇ ಲಾಕ್ ಡೌನ್ ಸರಳೀಕರಣಗೊಳಿಸಿ ಹೊಸ ಆದೇಶವನ್ನು ಸರ್ಕಾರ ಹೊರಡಿಸಿದೆ.
ಅದರಂತೆ ಯಾದಗಿರಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳು ಹೊಸ ಆದೇಶ ಜಾರಿಗೆ ತಂದಿದ್ದಾರೆ.
ಬೆಳಗ್ಗೆ 4 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೂ ದಿನಸಿ, ತರಕಾರಿ, ಹಾಲು ಹಣ್ಣು ಹಂಪಲು ಮಾರಾಟ ಸೇರಿದಂತೆ ಇತರೆ ಅಗತ್ಯ ಸಾಮಾಗ್ರಿಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
ಅದರಂತೆ ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 3 ಗಂಟೆವರೆಗೆ ಕೃಷಿ ಚಟುವಟಿಕೆಗೆ ಬೇಕಾದ ರಸಗೊಬ್ಬರ, ಕ್ರಿಮಿನಾಶಕ ಇತರೆ ಯಂತ್ರೋಪಕರಣ, ದುರಸ್ಥಿ ಅಂಗಡಿಗಳು ಸೇರಿದಂತೆ ಇತರೆ ಸಾಮಾಗ್ರಿ ಮಾರಾಟಮಾಡುವ, ಚಿಲ್ಲರೆ ಅಂಗಡಿಗಳ ವಹಿವಾಟು ನಡೆಸಲು ಅನುಮತಿಸಲಾಗಿದೆ.
ಆದರೆ ಈಗಾಗಲೆ ಕಂಟೈನ್ಮೆಂಟ್ ಝೋನ್ ಹೊಂದಿರುವ ವಲಯಕ್ಕೆ ಈ ಆದೇಶ ಅನ್ವಯವಾಗುವದಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಲಾಕ್ ಡೌನ್ ನಿಯಮ ಎಲ್ಲರು ಪಾಲಿಸಬೇಕು.
ಅಗತ್ಯ ಎನಿಸಿದಲ್ಲಿ ಮಾತ್ರ ಒರ್ವರು ಹೊರಗಡೆ ಬರಬೇಕು. ಅನಗತ್ಯ ಸಂಚಾರ ಮಾಡಕೂಡದು. ಅಂತರ ಜಿಲ್ಲಾ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Be the first to comment