ಮಿನುಗಾರಿಕೆ ಸುದ್ದಿಗಳು
ಹಸಿರು ನ್ಯಾಯಮಂಡಳಿಯಿಂದ ನಿಷೇಧಿತ ತಳಿಯಾದ ಆಫ್ರಿಕನ್ ಕ್ಯಾಟ್ ಫಿಶ್ ಮೀನುಗಳನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಎಳೆಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಹಳ್ಳಿ ಗ್ರಾಮದ ಸರ್ವೆ ನಂಬರ್ 19ಮತ್ತು21/1ರ ಸುಮಾರು 10ಎಕರೆ 37 ಗುಂಟೆ ಪ್ರದೇಶದಲ್ಲಿ ಕಳೆದ ಹದಿನೈದು ವರ್ಷದಿಂದ ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಸಾಕಾಣಿಕೆ ಮಾಡುತ್ತಿದ್ದರು .ಇದರ ಬಗ್ಗೆ ಸ್ಥಳೀಯ ಗ್ರಾಮಸ್ಥರು ಧ್ವನಿ ಎತ್ತಿದಾಗ ಸಂಬಂಧಿಸಿದ ಪ್ರಭಾವಿ ವ್ಯಕ್ತಿಗಳು ಅವರ ಧ್ವನಿಯನ್ನು ಹಣಬಲ ತೋಳ್ಬಲದಿಂದ ಹತ್ತಿಕ್ಕುವ ಪ್ರಯತ್ನವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದರು .ಕೆಲವರು ಈ ಪ್ರಭಾವಿ ವ್ಯಕ್ತಿಗಳ ಒತ್ತಡ ಹಾಗೂ ಬೆದರಿಕೆಗೆ ಹೆದರಿ ತಮಗೆ ಅದರ ಉಸಾಬರಿ ಬೇಡವೇ ಬೇಡ ಎಂದು ಹೆದರಿ ಹಿಂದೆ ಸರಿದರು.
ಅವರ ಆದೇಶ ಮೇರೆಗೆ ಉಪವಿಭಾಧಿಕಾರಿ ಮಮತಾ ಹೊಸಗೌಡರ ಹಾಗೂ ತಾಲ್ಲೂಕು ದಂಡಾಧಿಕಾರಿ ರಾಮಚಂದ್ರಪ್ಪ ಕೆಬಿ ನೇತೃತ್ವದ ತಂಡ ನಿನ್ನೆ ದಿನ ನಿಷೇಧಿತ ಕ್ಯಾಟ್ಫಿಶ್ ನಾಶ ಮಾಡುವ ಕ್ರಿಯೆಗೆ ಚಾಲನೆ ನೀಡಿದರು.
ಸುಮಾರು ಹತ್ತು ಎಕರೆ ಪ್ರದೇಶದ ಒಂಬತ್ತು ನೀರು ತುಂಬಿದ ಮೀನು ಸಾಕಾಣಿಕೆಯ ಕೊಳಗಳನ್ನು ಒಡೆದು ನಿಷೇಧಿತ ಮೀನುಗಳನ್ನು ನಾಶ ಮಾಡಿದರು .
ಈ ನಿಷೇಧಿತ ಮೀನು ಸಾಕಾಣಿಕೆಯಿಂದ ಎಳೆಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಅನೇಕ ಜನರು ಅನೇಕ ಬಗೆಯ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದರೂ.
ಇಲ್ಲಿನ ಕೊಳಚೆ ನೀರು ಪಕ್ಕದಲ್ಲೇ ಇದ್ದ ತುಂಗಭದ್ರಾ ನದಿಗೆ ಸೇರಿ ನೀರನ್ನು ಕಲುಷಿತಗೊಲಿಸಿತ್ತು.ಇದರ ಜೊತೆಗೆ ಈ ಮೀನುಗಳಿಗೆ ಆಹಾರವಾಗಿ ಕೋಳಿಯ ಮಾಂಸವನ್ನು ಹಾಗೂ ಇತರ ಪ್ರಾಣಿಯ ಮಾಂಸವನ್ನು ಹಾಕುತ್ತಿದ್ದರು. ಈ ಮಾಂಸದ ವಾಸನೆಗೆ ನಾಯಿಗಳು ಜಮೀನಿನ ಪಕ್ಕದಲ್ಲೇ ಜಮಾಯಿಸುತ್ತಾ,ಆಡು, ಕುರಿ ಮತ್ತು ನಾಗರಿಕರಿಗೆ ತೊಂದರೆ ನೀಡುತ್ತಿದ್ದು ಇದರಿಂದ ಬೇಸತ್ತ ಜನರು ನ್ಯಾಯಾಲಯದ ಮೊರೆ ಹೋದರು .
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು(NGT) ನವದೆಹಲಿ ತೀರ್ಪು ನೀಡಿ .ನಿಷೇಧಿತ ಕ್ಯಾಟ್ ಫಿಶ್ ಅನ್ನು ಪಾಲನಾ ಕೊಳದಿಂದ ತೆಗೆದು ಅದರ ಪಕ್ಕದಲ್ಲಿ ಯಂತ್ರಗಳ ಸಹಾಯದಿಂದ ಆಳವಾದ ಗುಂಡಿಯನ್ನು ನಿರ್ಮಾಣ ಮಾಡಿ ಅದರಲ್ಲಿ ನಿಷೇಧಿತ ಆಫ್ರಿಕನ್ ಕ್ಯಾಟ್ ಫಿಶ್ ಹಾಕಿ ಮುಚ್ಚುವಂತೆ ಆದೇಶ ನೀಡಿರುತ್ತಾರೆ.
ಈ ನಿಷೇಧಿತ ಮೆನುಗಳು ಸಾಕಾಣಿಕೆಗೆ ಭಾರತದಲ್ಲಿ ನಿಷೇಧವಿದ್ದರೂ ಪ್ರಭಾವಿ ವ್ಯಕ್ತಿಗಳು ಕದ್ದು ಮುಚ್ಚಿ ಈ ಮೀನಿನ ಸಾಕಾಣಿಕೆಯನ್ನು ಮಾಡಿಕೊಂಡು ಬಂದಿರುತ್ತಾರೆ .ಅಧಿಕಾರಿಗಳಿಗೆ ಈ ಎಲ್ಲಾ ವಿಚಾರದ ಬಗ್ಗೆ ಗೊತ್ತಿದ್ದರೂ ತಮಗೆ ಏನೂ ಗೊತ್ತಿಲ್ಲ ಎನ್ನುವಂತೆ ಇದುವರೆಗೂ ನಾಟಕ ಮಾಡಿಕೊಂಡು ಬಂದಿರುತ್ತಾರೆ .
ಇಲ್ಲಿ ಸಾಕಾಣಿಕೆ ಮಾಡುತ್ತಿದ್ದ ಮೀನುಗಳನ್ನು ಕೇರಳ ಮಾರ್ಗವಾಗಿ ವಿದೇಶಕ್ಕೆಿ ಸಾಗಿಸುತ್ತಿದ್ದರು .ಹಾಗೂ ಈ ಮೀನುಗಳಿಂದ ಔಷಧವನ್ನು ತಯಾರಿಸುತ್ತಿದ್ದರು ಎಂದು ಅಲ್ಲಿ ನೆರೆದಿದ್ದ ಸಾರ್ವಜನಿಕರ ವಲಯದಿಂದ ಕೇಳಿ ಬಂದ ಮಾತಾಗಿದೆ .
ಇಲ್ಲಿನ ಮೀನು ಸಾಕಾಣಿಕೆ ವಲಯದಿಂದ ಪಕ್ಷಿ ಸಂಕುಲಕ್ಕೂ ಆಪತ್ತು ಒದಗಿ ಬಂದಿತ್ತು .ಹೇಗೆಂದರೆ ಇವರು ಮೀನು ಸಾಕಾಣಿಕೆ ಕೊಳದ ಎಡ ಮತ್ತು ಬಲ ಬದಿಯಿಂದ ಉದ್ದವಾದ ಬಲೆಯನ್ನು ನದಿಯ ಮಧ್ಯದಲ್ಲಿ ಕಟ್ಟುತ್ತಿದ್ದರು ಪಕ್ಷಿಗಳು ಈ ಮೀನನ್ನು ತಿನ್ನಲು ಬಂದಾಗ ಆ ಬಲೆಯಲ್ಲಿ ಸಿಕ್ಕಿಕೊಂಡು ಸಾಕಾಣಿಕೆಯ ಮೀನುಗಳಿಗೆ ಆಹಾರವಾಗುತ್ತಿದ್ದವು .ಇದರಿಂದ ಅನೇಕ ಪಕ್ಷಿಗಳು ಸಾವನ್ನು ಕಂಡಿವೆ .ಮೀನುಗಳಿಗೆ ಆಹಾರವಾಗಲಿ ಎಂದೇ ಬೇಕೆಂದು ಬಲೆಯನ್ನು ಕಟ್ಟಿದ್ದರು ಎಂಬ ಅನುಮಾನ ಮೂಡಿ ಬರುತ್ತದೆ .
ಭಾರತದಲ್ಲಿ ಈ ಮೀನುಗಳ ಸಾಕಾಣಿಕೆಗೆ ನಿಷೇಧವಿದ್ದರೂ ಅಧಿಕಾರಿಗಳಿಗೆ ಏಕೆ ಅನುಮತಿ ನೀಡಿದರೂ .ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಎಲ್ಲ ಮಾಹಿತಿ ಇದ್ದರೂ ಮೇಲಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ .ಹಾಗೂ ಇದುವರೆಗೂ ತಾಲ್ಲೂಕು ದಂಡಾಧಿಕಾರಿಯಾಗಿ ಆಗಮಿಸಿದ ಅಧಿಕಾರಿಗಳಾಗಲಿ ಇತರ ಮೇಲಧಿಕಾರಿಗಳಾಗಲಿ ಈ ಹದಿನೈದು ವರ್ಷದಿಂದ ಈ ಮೀನು ಸಾಕಾಣಿಕೆ ಕೇಂದ್ರದ ಮೇಲೆ ಕ್ರಮಕ್ಕೆ ಏಕೆ ಮುಂದಾಗಲಿಲ್ಲ .ಅವರ ಮೇಲೆ ಯಾವುದಾದರೂ ಪ್ರಭಾವಿ ವ್ಯಕ್ತಿಗಳ ಪ್ರಭಾವ ಬೀರುತ್ತೆ ಎಂಬ ಅನುಮಾನಗಳು ಹುಟ್ಟು ಹಾಕುತ್ತದೆ.
ಒಟ್ಟಿನಲ್ಲಿ ಬಹು ವರ್ಷದಿಂದ ಸ್ಥಳೀಯರು ಮಾಡಿಕೊಂಡು ಬಂದ ಹೋರಾಟಕ್ಕೆ ನ್ಯಾಯಾಲಯದ ತೀರ್ಪಿನಿಂದ ಸ್ಥಳಿಯ ಜನರು ನಿಟ್ಟುಸಿರು ಬಿಡುವಂತಾಗಿದೆ.
Be the first to comment