ಜೀಲ್ಲಾ ಸುದ್ದಿಗಳು
ಎಲ್ಲಿ ಕೇಳಿದರೂ ಕೊರೋನಾ ಕೊರೊನಾ ಕೊರೊನಾ ಈ ಹೆಸರು ಕೇಳಿದರೆ ಎಂಥವರ ಮನದಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ ಬಿಡುತ್ತದೆ.
ಹೌದು ಈ ಮಹಾಮಾರಿ ಕೊರೋನಾ ವೈರಸ್ ದೇಶದಾದ್ಯಂತ ತನ್ನ ರೌದ್ರನರ್ತನವನ್ನು ತೋರುತ್ತಿದ್ದು ಇಡೀ ದೇಶದ ಜನತೆ ತತ್ತರಿಸಿ ಹೋಗಿದೆ ಅದರಲ್ಲೂ ಮುಖ್ಯವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ತನ್ನ ರಾಕ್ಷಸ ವರ್ತನೆಯನ್ನು ತೋರಿದೆ.ಇಂದು ಯಾದಗಿರಿ ಜಿಲ್ಲೆಯ ಸುರಪುರದ ಹಳೇ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಬೆಂಗಳೂರಿನಿಂದ ಟ್ರ್ಯಾಕ್ಟರ್ ಲಾರಿ ಹಾಗೂ ಮತ್ತಿತರೆ ಗೂಡ್ಸ್ ವಾಹನಗಳಲ್ಲಿ ಆಗಮಿಸಿದ ತಾಲೂಕಿನ ಹಲವು ಗ್ರಾಮಗಳ ಕೂಲಿಕಾರ್ಮಿಕರನ್ನು ನೇರವಾಗಿ ನಗರದ ಸರ್ಕಾರಿ ದವಾಖಾನೆಗೆ ಕರೆದುಕೊಂಡು ಬರಲಾಯಿತು
ನಗರದ ಹಳೆ ಸರ್ಕಾರಿ ದವಾಖಾನೆಯ ಮುಂಭಾಗದಲ್ಲಿ ಸುಮಾರು 600ಕ್ಕೂ ಹೆಚ್ಚು ಜನರಿಗೆ ವೈದ್ಯರು ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷೆ ನಡೆಸಿದರು.
ಜನತೆ ಸರತಿ ಸಾಲಿನಲ್ಲಿ ನಿಂತು ವೈದ್ಯರಿಂದ ಚಿಕಿತ್ಸೆಗೆ ಒಳಗಾದರೂ ಇನ್ನೂ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿತ್ತಾದರೂ ಮಹಿಳೆಯರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಾಮುಂದು ತಾಮುಂದು ಎಂದು ಒಬ್ಬರಮೇಲೊಬ್ಬರು ಎರಗಿ ಕಚ್ಚಾಡುತ್ತಿರುವ ದೃಶ್ಯಗಳು ಸಾಮಾನ್ಯ ಜನರ ಕಣ್ಣಿಗೆ ಕಾಣಿಸಿಕ್ಕವು.
ಇದರಿಂದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜನರನ್ನೂ ನಿಯಂತ್ರಣ ಮಾಡಲಾಗದೇ ಹೈರಾಣಾಗಿ ಹೋದರು
ಇನ್ನೂ ಗುಳೆ ಹೋಗಿ ಬಂದಿರುವಂತಹ ಜನರಿಗೆ ಸರ್ಕಾರಿ ದವಖಾನೆ ಮುಂಭಾಗದಲ್ಲಿ ವಿವಿಧ ಸಂಘ ಸಂಘಟನೆಗಳಿಂದ ಹಾಗೂ ಸರ್ಕಾರದಿಂದ ಇತ್ತೀಚೆಗೆ ನೂತನವಾಗಿ ಆರಂಭಿಸಿರುವ ಗಂಜಿ ಕೇಂದ್ರದಿಂದ ಊಟದ ಪಾರ್ಸಲ್ ಪೊಟ್ಟಣಳನ್ನು ನೀಡಲಾಯಿತು.
ಸ್ವತಃ ಸುರಪುರದ ಶಾಸಕ ರಾಜೂಗೌಡ ಹಾಗೂ ತಾಲೂಕು ಆರೋಗ್ಯಾಧಿಕಾರಿ
ರಾಜ ವೆಂಕಪ್ಪ ನಾಯಕ ಹಾಗೂ ಸುರಪುರ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿ ಮಾಧ್ಯಮದವರನ್ನುದ್ದೇಶಿ ಮಾತನಾಡಿದರು.
Be the first to comment