ಜೀಲ್ಲಾ ಸುದ್ದಿಗಳು
ಹರಿಹರ:-ಹರಿಹರ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕರೊನ ಕುರಿತು ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವ ಹರಿಹರದ ತಾಲ್ಲೂಕು ದಂಡಾಧಿಕಾರಿ ರಾಮಚಂದ್ರಪ್ಪ K.B.
ಇವರು ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕೋರೋನ ನಿಯಂತ್ರಣ ಕುರಿತು ಕೈಗೊಳ್ಳಲಾದ ಮುಂಜಾಗೃತ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಗ್ರಾಮದ ಜನರಲ್ಲಿ ಕರುಣಾ ರೋಗಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಬಿಡಿಬಿಡಿಯಾಗಿ ಜನರಿಗೆ ತಿಳಿ ಹೇಳಿದರು .
ನಿನ್ನೆಯ ದಿನ ನಂದಿಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಸನೂರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆಗೆ ಸಂಬಂಧಿಸಿದಂತೆ ಖುದ್ದು ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗ ಗ್ರಾಮದಲ್ಲಿ ಸ್ವಚ್ಛತೆಯನ್ನು ಕೈಗೊಂಡು ಚರಂಡಿಗಳಿಗೆ ರಾಸಾಯನಿಕ ಸಿಂಪಡಿಸುವಂತೆ ಸೂಚನೆ ನೀಡಿದರು ಖುದ್ದು ತಾಲ್ಲೂಕು ದಂಡಾಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಕರೊನ ವೈರಸ್‌ಗೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಿರುವ ಪರಿಯನ್ನು ನೋಡಿ ಸಾರ್ವಜನಿಕರ ವಲಯದಿಂದ ಪ್ರಶಂಸೆಯ ಸುರಿಮಳೆ ಗೈದಿದ್ದಾರೆ . ಅಧಿಕಾರಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೇ ಸದಾ ಜನರಲ್ಲಿ ಅರಿವು ಮೂಡಿಸುತ್ತಿರುವ ಅಧಿಕಾರಿಗಳಿಗೆ ಜನಸಾಮಾನ್ಯರು ಸಹಕಾರ ನೀಡಬೇಕು ಅವರಿಗೂ ಕುಟುಂಬ ಮನೆ ಮಕ್ಕಳು ಇದೆ ಎಂಬ ಜ್ಞಾನವನ್ನು ನಾವು ಬೆಳೆಸಿಕೊಂಡು ಕರೊನ ವೈರಸ್ ಹರಡುವಿಕೆಯ ನಿಯಂತ್ರಣಕ್ಕೆ ಸರ್ಕಾರಗಳು ಕೈಗೊಂಡ ಬಿಗಿ ಕ್ರಮಗಳಿಗೆ ಸಾಥ್ ನೀಡುವುದರ ಮೂಲಕ ಸರಕಾರದೊಂದಿಗೆ ಹಾಗೂ ಅಧಿಕಾರಿಗಳ ಜೊತೆ ಕೈಜೋಡಿಸಬೇಕು.
Be the first to comment