ಕೊರೋನಾ”ಭಯ ಬೇಡ ಮುಂಜಾಗೃತೆ ಅತ್ಯವಶ್ಯಕ,ಲಾಕ್ ಡೌನ್ ಪಾಲಿಸಬೇಕು-ಶಾಸಕ ಎನ್.ವೈ.ಗೋಪಾಲಕೃಷ್ಣ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಕೊರೋನಾ”ಭಯ ಬೇಡ ಮುಂಜಾಗೃತೆ ಅತ್ಯವಶ್ಯಕ,ಲಾಕ್ ಡೌನ್ ಪಾಲಿಸಬೇಕು-ಶಾಸಕ ಎನ್.ವೈ.ಗೋಪಾಲಕೃಷ್ಣ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ, ತಾಲೂಕಿನ ಸಮಸ್ತ ಬಂಧುಗಳೇ ಕೊರೋನಾ ಕುರಿತು ಅನಗತ್ಯ ಭಯ ಬೇಡ.ಅಗತ್ಯ ಮುಂಜಾಗೃತ ಕ್ರಮಗಳನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದು ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಕ್ಷೇತ್ರದ ಜನತೆಗೆ ಸೂಚಿಸಿದ್ದಾರೆ.ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದಾರೆ.ರಾಷ್ಟ್ರವೇ ಕೊರೋನಾ ವೈರಸ್ ವಿರುದ್ಧ ಸೆಣಸಾಡುತ್ತಿದೆ.ಜನತೆ ಭಯ ಪಡುವ ಬದಲು ಲಾಕ್ ಡೌನ್ ನ್ನು ಎಲ್ಲರೂ ಪಾಲಿಸಬೇಕಾಗಿದೆ. ಈ ಕಾರಣಕ್ಕೆ ಭಾರತವೇ ಲಾಕ್ ಡೌನ್ ಗೆ ಒಳಗಾಗಿದೆ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಸಹ ಇದಕ್ಕೆ ಹೊರತಾಗಿಲ್ಲ. ಸಾವ೯ಜನಿಕರು ಸ್ವಚ್ಛತೆಗೆ ಆಧ್ಯತೆ ಕೊಡಬೇಕಿದೆ.ಈ ನಿಟ್ಟಿನಲ್ಲಿ ಕ್ಷೇತ್ರದ 28 ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಗತ್ಯ ಕ್ರಮಗಳನ್ನು ಜರುಗಿಸಲಾಗಿದೆ ಎಂದಿದ್ದಾರೆ. ತಾಲೂಕಿನ ಯಾವುದೇ ಭಾಗದ ಸಾವ೯ಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಹಾಗು ಮೂಲಭೂತ ಸೌಕಯ೯ಗಳ ಕುಂದುಕೊರತೆಗಳು ಇದ್ದಲ್ಲಿ. ಅದಕ್ಕೆ ಸಂಬಂಧಿಸಿದ ಒಂದು ಅಥವಾ ಎರಡು ಫೋಟೊಗಳನ್ನು ಅಗತ್ಯ ವಿದ್ದಲ್ಲಿ ವೀಡಿಯೋವನ್ನು ತಮ್ಮ ಸಹಾಯಕರ ವಾಟ್ಸಾಪ್ ನಂ9036500997 ವಾಟ್ಸಪ್ ಗೆ ಕಳುಹಿಸಬಹುದಾಗಿದೆ. ಜೊತೆಗೆ ಮಾಹಿತಿದಾರರ ಹೆಸರು ಮತ್ತು ಸ್ಥಳದ ವಿವಿರ ನೀಡಿದ್ದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*