ಜೀಲ್ಲಾ ಸುದ್ದಿಗಳು
ಜಾಹೀರಾತು
ಯಾದಗಿರಿ, ಮಾರ್ಚ್ 17 (ಕರ್ನಾಟಕ ವಾರ್ತೆ): ಜಿಲ್ಲೆಯ ಶಹಾಪುರದಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮಗಳು ಕೈಗೊಳ್ಳಲಾಗಿದ್ದು, ಒಂದು ವಾರದವರೆಗೆ ಪಟ್ಟಣದಲ್ಲಿ ವ್ಯಾಪ್ತಿಯಲ್ಲಿ ಬರುವ ಚಿತ್ರಮಂದಿರಗಳ ಪ್ರದರ್ಶನ, ಬಾರ್ ಮತ್ತು ಪಬ್ಗಳನ್ನು ಬಂದ್ ಮಾಡುವಂತೆ ಶಹಾಪುರ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಸಾರ್ವಜನಿಕರು ಸೇರಿವ ಸ್ಥಳಗಳಾದ ಸಂತೆ, ಜಾತ್ರೆ, ಉದ್ಯಾನವನಗಳು, ಸಭೆ-ಸಮಾರಂಭಗಳ, ವಸ್ತು ಪ್ರದರ್ಶನ ಸೇರಿದಂತೆ ಇತ್ಯಾದಿಗಳನ್ನು ಬಂದ್ ಮಾಡಬೇಕು. ಅಲ್ಲದೇ ಕೋಳಿ ಮತ್ತು ಮಾಂಸ ಮಾರಾಟವನ್ನು ರಸ್ತೆಗಳ ಬದಿಯಲ್ಲಿ, ತೆರೆದ ಹಣ್ಣುಗಳು ಮಾರಾಟ, ಆಹಾರ ಮಾರಾಟವನ್ನು ಸಹ ಒಂದು ವಾರದ ಅವಧಿಗೆ ನಿಷೇಧಿಸಬೇಕೆಂದು ತಿಳಿಸಿದ್ದಾರೆ.
ಜಾಹೀರಾತು
ಶಹಾಪುರ ಪಟ್ಟಣದ ಸಾರ್ವಜನಿಕರು, ವ್ಯಾಪರಸ್ಥರು ಪಟ್ಟಣದ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವು ನಿಟ್ಟಿನಲ್ಲಿ ಬಂದ್ ಮಾಡಲಾಗಿದ್ದು, ಈ ಎಲ್ಲಾ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ಇದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ
ಜಾಹೀರಾತು
Be the first to comment