ರಾಮೇಶ್ವರಂ ಕೆಫೆಯ ನೂತನ ಶಾಖೆ ಇಂದಿರಾನಗರದಲ್ಲಿ ಆರಂಭ

ವರದಿ : ಬಿ ಸಿ ಮ್ಯಾಸನಾಯಕ

ಬೆಂಗಳೂರು: ಇಂದಿರಾನಗರದಲ್ಲಿರುವ ರಾಮೇಶ್ವರಂ ಕೆಫೆಯನ್ನು ಅದ್ಧುರಿಯಾಗಿ ಪುನರಾರಂಭ ಮಾಡಲಾಗುತ್ತಿದ್ದು, ರುಚಿಕರ ಭೋಜನದೊಂದಿಗೆ ವಿಶಾಲ ಸ್ಥಳದ ಆತಿಥ್ಯದ ಸ್ವಾಗತಕ್ಕೆ ಸಜ್ಜಾಗಿದೆ.

100 ಅಡಿ ರಸ್ತೆಯಲ್ಲಿ 15,000 ಚದರ ಅಡಿಗಳಷ್ಟು ವ್ಯಾಪಿಸಿರುವ ಕೆಫೆಯು ಸುಮಾರು 400 ಜನರಿಗೆ ಆತಿಥ್ಯ ನೀಡಬಹುದಾದ ಭವ್ಯ, ವಿಶಾಲ ಸ್ಥಳವನ್ನು ಹೊಂದಿದೆ. ದಕ್ಷಿಣ ಭಾರತದ ಗುಣಮಟ್ಟದ ಹಾಗೂ ಆಧುನಿಕ ಭೋಜನದ ರುಚಿಯನ್ನು ಇಲ್ಲಿ ಸವಿಯಬಹುದು. ಈ ನೂತನ ಸ್ಥಳದಲ್ಲಿ ನೀವು ನಿಮ್ಮ ಕುಟುಂಬಸ್ಥ, ಸ್ನೇಹಿತರೊಂದಿಗೆ ಆಗಮಿಸಿ, ವಿಶ್ರಮಿಸುತ್ತಾ ದಕ್ಷಿಣ ಭಾರತದ ಸೊಗಡಿನ ಭೋಜನವನ್ನು ಸವಿಯಬಹುದು.
ಇಂದಿರಾನಗರದ ಶಾಖೆಯಲ್ಲಿನ ಮೆನುವಿನಲ್ಲಿ ನಿಮಗೆ ಮೆಚ್ಚುಗೆಯಾಗುವ ಸುಮಾರು 120 ಕ್ಕೂ ಹೆಚ್ಚು ಭಕ್ಷ್ಯಗಳು ಒಳಗೊಂಡಿದೆ. ಅಷ್ಟೇ ಅಲ್ಲದೆ, ಇಲ್ಲಿ, ಪ್ರತ್ಯೇಕವಾಗಿ ಹೊಸ ಪಾಕಶಾಲೆಯ ಪರಿಚಯಿಸಲಾಗುತ್ತಿದೆ. ಪ್ರಮುಖವಾಗಿ ಜೋಡಿ ಮಸಾಲಾ ದೋಸೆ, ಚಿರೊಟ್ಟಿ, ತಂಬುಳಿ ಮತ್ತು ರಸಂ ಇಡ್ಲಿಯಂತಹ ವಿಶಿಷ್ಟ ಭೋಜನವನ್ನು ಮನಸಾರೆ ಸವಿಯಬಹುದು. ಈ ಮೂಲಕ ಸಾಂಪ್ರದಾಯಿಕ ದಕ್ಷಿಣ ಭಾರತೀಯ ಅಡುಗೆಯ ಸಾರವನ್ನು ಆಸ್ವಾದಿಸಬಹುದು. ಪ್ರತಿ ಖಾದ್ಯವನ್ನು ಉತ್ತಮ-ಗುಣಮಟ್ಟದ ಪದಾರ್ಥಗಳನ್ನು ಬಳಸಿ ತಯಾರಿಸಲಾಗಿದ್ದು, ಸುವಾಸನೆ, ತಾಜಾತನದಿಂದ ಕೂಡಿರಲಿದೆ.
ರಾಮೇಶ್ವರಂ ಕೆಫೆಯ ಸಹ-ಸಂಸ್ಥಾಪಕ ಮತ್ತು ಸಿಇಒ ರಾಘವೇಂದ್ರ ರಾವ್ , “ಇಂದಿರಾನಗರ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ, ಈ ಭಾಗದಲ್ಲಿನ ಶಾಖೆಯ ಸ್ಥಳವನ್ನು ವಿಸ್ತರಿಸುವ ಜೊತೆಗೆ ಮತ್ತಷ್ಟು ಹೊಸತನ ಪರಿಚಯಿಸಬೇಕು ಎಂಬ ಹಂಬಲ ನನ್ನದಾಗಿತ್ತು. ಅಂತೆಯೇ, ಈ ನೂತನ ಶಾಖೆಯಲ್ಲಿ ಹಲವು ಹೊಸ ಖಾಧ್ಯಗಳನ್ನು ಪರಿಚಯಿಸಿದ್ದೇವೆ. ಈ ಎಲ್ಲವೂ ದಕ್ಷಿಣ ಭಾರತದ ನೈಜ ಸ್ವಾಧವನ್ನು ನೀಡಲಿದೆ. ಗುಣಮಟ್ಟದ ಹಾಗೂ ರುಚಿಕರ ಆಹಾರ ಬಯಸುವ ಜನರಿಗಾಗಿ ಸೂಕ್ತ ತಾಣವನ್ನು ನಿರ್ಮಿಸಿರುವ ಸಂತಸವಿದೆ ಎಂದು ಹೇಳಿದರು.
ಇದಷ್ಟೇ ಅಲ್ಲದೆ, ಹೆಚ್ಚಿನ ಆಸನದ ವ್ಯವಸ್ಥೆಗಳ ಜೊತೆಗೆ, ಸ್ವಿಗ್ಗಿ ಮತ್ತು ಝೊಮಾಟೊ ನಂತಹ ಆನ್‌ಲೈನ್ ಆರ್ಡರ್ಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೇ ಕುಳಿತು ಆಹಾರ ಸೇವಿಸುವವರಿಗಾಗಿ ವಿಶಾಲವಾದ ಒಳಾಂಗಣದ ವಿನ್ಯಾಸ ಮಾಡಲಾಗಿದೆ. ಇಲ್ಲಿ ಕಳೆಯುವ ಪ್ರತಿಯೊಂದು ಕ್ಷಣವು ದಕ್ಷಿಣ ಭಾರತದ ನೈಜ ಆಹಾರದ ಪರಿಮಳವನ್ನು ಸವಿಯುವ ಜೊತೆಗೆ ರುಚಿಸಬಹುದು.
ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದಿವ್ಯಾ ರಾಘವೇಂದ್ರ ರಾವ್ ಮಾತನಾಡಿ, “ಇದುವರೆಗೂ ನಮ್ಮವರಿಂದ ಸಾಕಷ್ಟು ಬೆಂಬಲ, ಪ್ರೀತಿಯನ್ನು ಪಡೆದುಕೊಂಡಿದ್ದೇವೆ. ಈ ಹೊಸ ಶಾಖೆಯನ್ನು ತೆರೆಯುವ ಮೂಲಕ ಅವರಿಗೆ ವಿಶಾಲ ಸ್ಥಳದಲ್ಲಿ ಕುಳಿತು ಆಹಾರ ಸೇವಿಸುವ ವ್ಯವಸ್ಥೆ ಮಾಡುವ ಅವಕಾಶ ನಮಗೆ ದೊರೆತಿದೆ. ಮನೆಯಲ್ಲಿ ಊಟ ಸವಿಯುವಂತೆಯೇ ಇಲ್ಲಿಯೂ ಆರಾಮವಾಗಿ ಕುಳಿತು, ನೆಮ್ಮದಿಯಾಗಿ ದಕ್ಷಿಣ ಭಾತದ ರುಚಿಕರ ಆಹಾರವನ್ನು ಸವಿಯಬಹುದಾದ ವಿಸ್ಕೃತ ಮೆನು ಇರಲಿದೆ. ದಕ್ಷಿಣ ಭಾರತದ ಆತಿಥ್ಯವನ್ನು ನೀಡಲು ನಮಗೆ ಹೆಮ್ಮೆ ಎನಿಸುತ್ತದೆ ಎಂದರು.
ರಾಮೇಶ್ವರಂ ಕೆಫೆ ಪ್ರತಿಯೊಬ್ಬ ಅತಿಥಿಯನ್ನು ಸ್ವಾಗತಿಸುವ ಮತ್ತು ಮೌಲ್ಯಯುತವಾದ ಅನುಭವವನ್ನು ನೀಡಲು ತನ್ನನ್ನು ಸಮರ್ಪಿಸಿಕೊಂಡಿದೆ. ರಾಮೇಶ್ವರಂ ಕೆಫೆ ನಮ್ಮ ದಕ್ಷಿಣ ಭಾರತೀಯ ಪಾಕಪದ್ಧತಿಗೆ ಹೆಸರುವಾಸಿಯಾಗಿದ್ದು, ಇಂದಿರಾನಗರದಲ್ಲಿ ಆಧುನಿಕವಾಗಿ ವಿನ್ಯಾಸಗೊಂಡಿರುವ ಈ ವಿಶಾಲ ಸ್ಥಳದಲ್ಲಿ ಊಟದ ಅನುಭವವನ್ನು ರುಚಿಸಬಹುದು. ಈ ಶಾಖೆಯು ಸಾಂಪ್ರದಾಯಿಕ ಅಲಂಕಾರದಿಂದ ಸುಂದರವಾಗಿ ಸಂಯೋಜಿಸಲಾಗಿದೆ, ಜೊತೆಗೆ, ದೇವಾಲಯ-ಪ್ರೇರಿತ ವಿನ್ಯಾಸದಿಂದ ನಿರ್ಮಿಸಲಾಗಿದ್ದು, ದಕ್ಷಿಣ ಭಾರತೀಯ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಬಿಂಬಿಸಲಾಗಿದೆ. ಈ ವಿಸ್ತರಣೆಯು ರಾಮೇಶ್ವರಂ ಕೆಫೆಯ ಬೆಳವಣಿಗೆಯ ಪಯಣದಲ್ಲಿ ಒಂದು ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ.

Logo

Be the first to comment

Leave a Reply

Your email address will not be published.


*