ಕೆ.ಆರ್.ಪುರಂ ಬೆನ್ನಿಗಾನಹಳ್ಳಿ ದಲಿತರ ಭೂಮಿ ಕಬಳಿಕೆಗೆ ಪೋಲಿಸರ ಶಾಮೀಲು; ಜೈ ಬೀಮ್ ದಲಿತ ಕ್ರಿಯಾ ಸಮಿತಿ,ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ತಮಟೆ ಚಳುವಳಿ.

ಬೆಂಗಳೂರು ನವೆಂಬರ್ 7; ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರಂ ಬೆನ್ನಿಗಾನಹಳ್ಳಿ ಗ್ರಾಮದ ಸರ್ವೆ ನಂ 114 ರ ದಲಿತ ಕುಟುಂಬಕ್ಕೆ ಸೇರಿದ ನಾರಾಯಣಸ್ವಾಮಿ ಎಂಬ ಬಡಕುಟುಂಬದ ಜಾಗವನ್ನು ಕಬಳಿಸಲು ಪ್ರಯತ್ನಿಸಿರುವ ಶಕ್ತಿಗಳ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಖಿಲ ಭಾರಯ ದಲಿತ ಕ್ರಿಯಾ ಸಮಿತಿ,ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿತ್ತು.

ಜೈ ಬೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಮುನಿರಾಜು ಮಾತನಾಡಿ, ಸಾಮಾನ್ಯ ವರ್ಗಕ್ಕೆ ಸೇರಿದ ನಾಗರಾಜ್, ಜಗನ್, ಮಂಜುನಾಥ್,ರಾಜೇಶ್ ಎಂಬುವವರು ಪೋಲಿಸ್ ಅಧಿಕಾರಿಗಳ ಜತೆ ಶಾಮೀಲಾಗಿ ದಲಿತರಿಗೆ ಮೋಸ ಮಾಡುತ್ತಿದ್ದಾರೆ
ನಾಗರಾಜ್ ಮತ್ತು ಅವರ ಸಹಚರರು ದಲಿತರಿಗೆ ಅನ್ಯಾಯವೆಸಗಿ ಪೋಲಿಸ್ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು ಒಂದು ಕೋಟಿ ರೂಪಾಯಿ ಬೇಡಿಕೆಯಿಟ್ಟು ಮುಂಗಡವಾಗಿ 25 ಲಕ್ಷ ರೂಪಾಯಿ ಹಣ ಪಡೆದು ಉಳಿದ ಹಣವನ್ನು ಕೇಳಿದ ಸಮಯಕ್ಕೆ ಕೊಡದಿದ್ದ ಹಿನ್ನಲೆಯಲ್ಲಿ ಅವರಿಗೆ ಸಹಾಯ ಮಾಡಲು ಬಂದ ಶಿವಪ್ರಕಾಶ್ ಎಂಬುವವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಪೂರ್ವ ತಾಲೂಕು ಬೆನ್ನಿಗಾನಹಳ್ಳಿ ಗ್ರಾಮದ ಸಂ‌.114 ಜಮೀನಿಗೆ ಬಿಬಿಎಂಪಿ ವತಿಯಿಂದ ಇ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತು ಕ್ರಮ ಜರುಗಿಸಿ ತಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಜರಣ ದಾಖಲಿಸಬೇಕು, ಇದನ್ನು ಪ್ರಶ್ನಿಸಿದ ಪೋಲಿಸ್ ಅಧಿಕಾರಿಗಳಿಂದ ಲಾಠಿ ಚಾರ್ಜ್ ಮಾಡಿಸಿ ಮನಬಂದಂತೆ ದೌರ್ಜನ್ಯವೆಸಗಲು ಸವರ್ಣಿಯರಾದ ನಾಗರಾಜ್ ಜತೆ ಶಾಮಿಲಾಗಿರುವ ಸಬ್ ಇನ್ಸ್ ಸ್ಪೆಕ್ಟರ್ ಹನುಮಂತು, ಪರಶುರಾಮ್, ಮಲ್ಲೇಶ್, ಎ ಎಸ್ ಐ ಅಶೋಕ್, ಮಹೇಶ್ ಅವರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸಿದರು.

Logo

Be the first to comment

Leave a Reply

Your email address will not be published.


*