ಉಗ್ರಪ್ಪ ಅವರಿಗೆ ಎರಡು ಬಾರಿ ಸಹಾಯ ಮಾಡುವ ಅವಕಾಶ ಸಿಕ್ಕಿತು
ನಾನು ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿದ್ದೆ. ಆಗ ದೇಶಪಾಂಡೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದರು. ಆಗ ನಾನು ಉಗ್ರಪ್ಪ ಅವರನ್ನು ಮೇಲ್ಮನೆ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿ ಎಂದು ಖರ್ಗೆ ಅವರ ಬಳಿ ಮನವಿ ಮಾಡಿದೆ. ಆಗ ಅವರು ನಾನು ಪರಿಶಿಷ್ಟ ಜಾತಿ, ಅವರು ಪರಿಶಿಷ್ಟ ಪಂಗಡದವರು ಕಷ್ಟವಾಗುವುದಿಲ್ಲವೇ ಎಂದಾಗ. ಒಂದು ದಿಟ್ಟ ಪ್ರಯತ್ನ ಮಾಡಿ ಎಂದು ಖರ್ಗೆ ಅವರಿಗೆ ಉರಿದುಂಬಿಸಿದೆ. ಆಗ ಅವರು ಮೇಲ್ಮನೆ ವಿರೋಧ ಪಕ್ಷದ ನಾಯಕರಾದರು.
ನಾನು ಬಳ್ಳಾರಿ ಉಸ್ತುವಾರಿ ಸಚಿವನಾಗಿದ್ದೆ. ಆಗ ಲೋಕಸಭಾ ಉಪಚುನಾವಣೆ ಸಮಯ. ಉಗ್ರಪ್ಪ ಅವರನ್ನು ಹೊರತಾಗಿ ಬೇರೆಯವರಿಗೆ ಟಿಕೆಟ್ ನೀಡಲಾಗಿದೆ ಎನ್ನುವ ಸೂಚನೆ ಬಂತು. ತಕ್ಷಣ ರಾಹುಲ್ ಗಾಂಧಿ ಅವರಿಗೆ ಕರೆ ಮಾಡಿ ನನ್ನ ಮೇಲೆ ನಂಬಿಕೆ ಇಡಿ ಎಂದು ಹೇಳಿದೆ. ನನ್ನ ಮೇಲೆ ನಂಬಿಕೆ ಇಟ್ಟ ಕಾರಣಕ್ಕೆ ಉಗ್ರಪ್ಪ ಅವರು ಗೆದ್ದರು.
ಸಾಲಮನ್ನಾ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಕೆಣಕಿ, ಕೆಣಕಿ ಅವರು ಹತಾಶರಾಗಿ ‘ಏನಪ್ಪ ನಾನು ಸಾಲ ಮನ್ನಾ ಮಾಡಲು, ನೋಟ್ ಪ್ರಿಂಟಿಂಗ್ ಮೆಷಿನ್ ಇಟ್ಟುಕೊಂಡಿದ್ದೇನೆಯೇ?’ ಎಂದು ಹೇಳಿದ್ದರು. ಇದನ್ನು ಸಿದ್ದರಾಮಯ್ಯನವರು ಅಸ್ತ್ರವಾಗಿ ಬಳಸಿಕೊಂಡು ಯಡಿಯೂರಪ್ಪರ ವಿರುದ್ಧ ಆಗಾಗ್ಗೆ ಬಳಸಿಕೊಳ್ಳುತಿದ್ದರು.
ಬಳ್ಳಾರಿ ಗಣಿ ಅಕ್ರಮದ ಬಗ್ಗೆ ಅತ್ಯುತ್ತಮ ವರದಿ ಕೊಟ್ಟವರು. ಕಾಂಗ್ರೆಸ್ ಪಕ್ಷದ ಅನೇಕ ಸಾಧನೆಯ ಹಿಂದೆ ಉಗ್ರಪ್ಪ ಅವರು ಇದ್ದಾರೆ.
ಸಮಯ ಪ್ರಜ್ಞೆ ಇವರ ವಿಶೇಷತೆ
ಸಮಯ ಪ್ರಜ್ಞೆ ಉಗ್ರಪ್ಪ ಅವರ ವಿಶೇಷತೆ. ಅನೇಕ ಕ್ರಿಷ್ಟಕರವಾದ ಸಂದರ್ಭದಲ್ಲಿ ಸರ್ಕಾರದ ಜೊತೆ ನಿಂತಿದ್ದಾರೆ. ಸಾಕಷ್ಟು ಉತ್ತಮ ಸಲಹೆಗಳನ್ನು ನಮ್ಮ ಆಡಳಿತಕ್ಕೆ ನೀಡಿದ್ದಾರೆ.
ಮಾತಿನ ಗುಂಡು ಇವರ ಅಸ್ತ್ರ
ನಕ್ಸಲ್ ಆಗುತ್ತಿದ್ದೆ ಅಥವಾ ಗುಂಡು ಹೊಡೆಯುತ್ತಿದ್ದೇ ಎಂದು ಉಗ್ರಪ್ಪ ಅವರು ಹೇಳಿದರು. ಅವರು ಈಗ ವಿಧಾನಸೌಧದ ಹೊರಗೆ ಹಾಗೂ ಹೊರಗೆ ಮಾತಿನ ಗುಂಡನ್ನು ಹೊಡೆಯುತ್ತಿದ್ದಾರೆ.
ಇತರೇ ಭಾಷಣಗಳಿಂದ ಮನಸ್ಸು ಹಗುರ
ರಾಜಕೀಯ ಭಾಷಣಗಳಿಗಿಂತ ಬರಗೂರು ರಾಮಚಂದ್ರಪ್ಪ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಸೇರಿದಂತೆ ಇತರರ ಮಾತುಗಳನ್ನು ಕೇಳಿದರೆ ಮನಸ್ಸು ಹಗುರವಾಗುತ್ತದೆ. ಸಮತೋಲನವಾಗಿ, ಸಮತೂಕವಾಗಿ ವಿಚಾರ ಮಂಡನೆಯಿಂದ ನಮಗೂ ಹೊಸ ವಿಚಾರಗಳು ತಿಳಿಯುತ್ತವೆ.
ಶ್ಲೋಕದ ಮೂಲಕ ಉಗ್ರಪ್ಪ ಅವರನ್ನು ಹೊಗಳಿದ ಡಿಸಿಎಂ
ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಮ್ ಸರ್ವತೋಮುಖಂ, ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮ್ಯತ್ಯುಂ ನಮಾಮ್ಯಹಂ ಇಂತಹ ಉಗ್ರಪ್ಪ ಅವರಿಗೆ ದೊಡ್ಡ ನಮಸ್ಕಾರಗಳು.
ನಾನು ಚಿಕ್ಕ ವಯಸ್ಸಿನಲ್ಲಿ ವಿಧಾನಸಭೆಗೆ ಪ್ರವೇಶ ಪಡೆದೆ. ಆಗ ಉಗ್ರಪ್ಪ ಅವರು ವಿದ್ಯಾರ್ಥಿ ನಾಯಕರಾಗಿದ್ದರು. ಬರಗೂರು ರಾಮಚಂದ್ರಪ್ಪ ಅವರು ಹೇಳಿದಂತೆ ಇವರ ಪೂರ್ಣ ಹೆಸರು ಉಗ್ರ ನರಸಿಂಹ.
ಉತ್ತಮ ಭಾಷಣಗಳು ಮರೆಯಾಗಿವೆ
ಎಂ ಸಿ ನಾಣಯ್ಯ, ಮಲ್ಲಿಕಾರ್ಜುನ ಖರ್ಗೆ ಅವರ, ಬಂಗಾರಪ್ಪ ಅವರ, ಕೆ. ಎಚ್. ರಂಗನಾಥ್, ನಂಜೇಗೌಡರ, ಕಾಗೋಡು ತಿಮ್ಮಪ್ಪ, ಎಂಪಿ ಪ್ರಕಾಶ್ಅ ವರ ಸೇರಿದಂತೆ ಅನೇಕರ ಭಾಷಣ ಕೇಳಿದ್ದೇನೆ. ಇವರುಗಳು ವಿಧಾನಸಭೆಯಲ್ಲಿ ಮಾಡುತ್ತಿದ್ದ ಆಳವಾದ ಭಾಷಣಗಳು ಈಗ ಕೇಳುವುದು ಕಷ್ಟ.
ಹಾರ ಬಹಳ ಭಾರ
ಕಾರ್ಯಕ್ರಮದಲ್ಲಿ ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಹಾರ ಹಾಕಲು ಬಂದರು. ಆಗ ನನಗೆ ಗೊತ್ತಾಗಿದ್ದು ಈ ಹಾರ ಬಲು ಭಾರ ಎಂದು. ಅಂದರೆ ನಮ್ಮ ಮೇಲೆ ಜವಾಬ್ದಾರಿ ಹೆಚ್ಚುತ್ತಿದೆ ಎಂದರ್ಥ.
Be the first to comment