ಪ್ರಜಾ ದುನಿಯಾ ಪಾಕ್ಷಿಕ ಪತ್ರಿಕೆ ಬಿಡುಗಡೆ ವಿವಿಧ ಸಾಧಕರಿಗೆ ಪ್ರಶಸ್ತಿ ಲಿಂಗಸೂಗೂರು ವರದಿ.

 

ಲಿಂಗಸುಗೂರು ಪತ್ರಕರ್ತರು, ಪತ್ರಿಕೆಗಳು ಸತ್ಯಶೋಧನೆ ಮಾರ್ಗದಲ್ಲಿ ನಡೆದರೆ ಮಾತ್ರ ಸಮಾಜದಲ್ಲಿ ನಡೆಯುವ ಅಸತ್ಯತೆ ಹೊರಬರಲು ಸಾಧ್ಯವಾಗುತ್ತಿದೆ ಈಗಾಗಿ ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು
ಪಟ್ಟಣದ ಗುರುಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಜಾ ದುನಿಯಾ ಪಾಕ್ಷಿಕ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜದ ಅಂಕು ಡೊಂಕು ತಿದ್ದುವಂತಹ ಕೆಲಸ ಮಾಡುವಂತಹ ಪತ್ರಕರ್ತರು ಹಾಗೂ ಪತ್ರಿಕೆಗಳು ಮಾಡುತ್ತಾ ಬಂದಿವೆ. ಪತ್ರಕರ್ತರು ಸತ್ಯಶೋಧನೆ ಮಾರ್ಗದಲ್ಲಿ ನಡೆಯಬೇಕು ಈಗಾಗಿ ಸಮಾಜ ತಿದ್ದುವ ಕೆಲಸ ಮಾಡುವಂತಹವರು ಹೆಚ್ಚು ಜವಾಬ್ದಾರಿಯಿಂದ ವೃತ್ತಿಯನ್ನು ನಿರ್ವಹಿಸಿದರೆ ಸಮಾಜ ಸದಾ ಸ್ಮರಿಸುತ್ತದೆ.
ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಹೊಸಪೇಟೆಯ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಕ ತಿಮ್ಮಾರೆಡ್ಡಿ ಹೀರಾ, ಕೆಎಂಎಫ್ ಬಿಎಂಸಿ ವ್ಯವಸ್ಥಾಪಕ ಮಂಜುನಾಥ ಅಗಟಗಿ, ನಿವೃತ್ತ ಶಿಕ್ಷಕ ಪೀರಣ್ಣ ತೇಗನೂರು ಅವರಿಗೆ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಸ್ಕಿ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲವಂತರಾಯಗೌಡ ವಟಗಲ್ ಅವರಿಗೆ ಸೇವಾ ರತ್ನ ಪ್ರಶಸ್ತಿ, ಲಿಂಗಸುಗೂರಿನ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ದಿಗಂಬರ ಹೇರೂರು, ಡಾ.ಬಸವರಾಜ ಸಾಹುಕಾರ, ಸಿಟಿ ಸ್ಕಾö್ಯನ್ ತಂತ್ರಜ್ಞ ಚಾರ್ಲ್ಸ್ ಕುಮಾರ ಅವರಿಗೆ ವೈದ್ಯಕೀಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ತಾಲೂಕು ಅಧ್ಯಕ್ಷ ಗುರುರಾಜ ನಾಯಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜಗುರು, ಬಿಜೆಪಿ ತಾಲೂಕು ಅಧ್ಯಕ್ಷ ಅಯ್ಯಪ್ಪ ವಕೀಲರು, ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಬಿ.ಮುರಾರಿ, ವೆಂಕಟೇಶ ಗುತ್ತೆದಾರ, ಜಿ.ಪಂ ಮಾಜಿ ಸದಸ್ಯ ಕರಿಯಪ್ಪ, ಪತ್ರಿಕೆ ಸಂಪಾದಕ ಅಮರೇಶ ಕಲ್ಲೂರು ಸೇರಿದಂತೆ ಅನೇಕರಿದ್ದರು.

Be the first to comment

Leave a Reply

Your email address will not be published.


*