ಲಿಂಗಸೂಗೂರು ವರದಿ.
ಅಧ್ಯಕ್ಷರಾಗಿ ಬಾಬುರೆಡ್ಡಿ ಮುನ್ನೂರು, ಉಪಾಧ್ಯಕ್ಷರಾಗಿ ಶರಣಮ್ಮ ಅವಿರೋಧ ಆಯ್ಕೆ
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ, ಹೂಲಗೇರಿ ಬಣ ಮೇಲುಗೈ, ಅಧ್ಯಕ್ಷರಾಗಿ ಬಾಬುರೆಡ್ಡಿ ಮುನ್ನೂರು, ಉಪಾಧ್ಯಕ್ಷರಾಗಿ ಶರಣಮ್ಮ ಅವಿರೋಧ ಆಯ್ಕೆ
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ, ಹೂಲಗೇರಿ ಬಣ ಮೇಲುಗೈ,
ಅ.1.-ಕಾಂಗ್ರೆಸ್ ಪಕ್ಷದ ಬಣ ರಾಜಕೀಯದ ಮಧ್ಯೆ ತೀರ್ವ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಲಿಂಗಸಗೂರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕೊನೆಗೂ ಮಾಜಿ ಶಾಸಕ ಡಿ ಎಸ್ ಹೂಲಗೇರಿ ಬಣದ ಸದಸ್ಯರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ನಡೆದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 17 ನೇ ವಾರ್ಡಿನ ಬಾಬುರೆಡ್ಡಿ ಮುನ್ನೂರ, ಹಾಗೂ ಬಿಸಿಎ ಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ19 ನೇ ವಾರ್ಡಿನ ಶರಣಮ್ಮ ಅಮರಪ್ಪ ಕೊಡ್ಲಿ ತಲಾ ಒಂದೊಂದೆ ನಾಮಪತ್ರ ಸಲ್ಲಿಸಿದ್ದರಿಂದಾಗಿ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶಂಶಾಲಂ ಘೋಷಿಸಿದರು.
ಬಣ ರಾಜಕೀಯದ ಜಿದ್ದಾಜಿದ್ದಿನಿಂದ ನಡೆದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ ಹಾಗೂ ಮಾಜಿ ಶಾಸಕ ಡಿಎಸ್ ಹೂಲಗೇರಿ ಬಣಗಳಿಗೆ ಪ್ರತಿಷ್ಠೆಯ ಕಣವಾಗಿತ್ತು. ಅಧಿಕಾರದ ಗದ್ದುಗೆ ಏರಲು ಎರಡು ಬಣಗಳಿಂದ ಸಾಕಷ್ಟು ಕಸರತ್ತು ನಡೆದು ಕೊನೆ ಗಳಿಗೆಯಲ್ಲಿ ಡಿ ಎಸ್ ಹೂಲಗೇರಿ ಬಣ ಬಯ್ಯಾಪೂರ ಬಣದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಕೆಲವು ಪಕ್ಷೇತರ ಸದಸ್ಯರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿ ಬಯ್ಯಾಪುರ ಬಣಕ್ಕೆ ಬಾರಿ ಮುಖಭಂಗ ವಾಗುವಂತೆ ಮಾಡಿದರು.
ಕಾಂಗ್ರೆಸ್ ಪಕ್ಷದ ಡಿ ಎಸ್ ಹೂಲಗೇರಿ ಬಣದ ಅಭ್ಯರ್ಥಿಗಳು ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗುತ್ತಿದ್ದಂತೆ ಹೂಲಗೇರಿ ಬಣದ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಗಡಿಯಾರ ವೃತ್ತ, ಪುರಸಭೆ ಕಚೇರಿ ಮುಂದೆ, ಕಾಂಗ್ರೆಸ್ ಪಕ್ಷದ ಕಚೇರಿ ಸೇರಿದಂತೆ ಪಟ್ಟಣದ ವಿವಿಧಡೇ ಪಟಾಕಿ ಸಿಡಿಸಿ ಸಿಹಿ ಹಂಚಿ ಡಿಎಸ್ ಹೂಲಗೇರಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಜಯಕಾರ, ಘೋಷಣೆ ಕೂಗುತ್ತಾ ಸಂಭ್ರಮಿಸಿದರು.
ಯಾವುದೇ ರೀತಿಯ ಆಹಿತಕರ ಘಟನೆಗಳು ಜರುಗದಂತೆ ಪಟ್ಟಣದಲ್ಲಿ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ ಒದಗಿಸಲಾಗಿತ್ತು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಜಿ ಕುಮಾರ್ ನಾಯಕ್, ಮಾಜಿ ಶಾಸಕ ರಾಜ್ಯ ಕೆಪಿಸಿಸಿ ಉಪಾಧ್ಯಕ್ಷರಾದ ಡಿಎಸ್ ಹೂಲಗೇರಿ, ಪುರಸಭಾ ಚುನಾವಣೆ ವೀಕ್ಷಕರಾಗಿ ಆಗಮಿಸಿದ ಜಯವಂತರಾವ್ ಪತಂಗೆ, ಲಿಂಗಸಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯಕ್, ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶಂಕರಗೌಡ, ಕಾಂಗ್ರೆಸ್ ಪಕ್ಷದ ಮುಖಂಡರಾದ ಮುದುಕಪ್ಪ ವಕೀಲರು, ಅಮ್ಜದ್ ಹಟ್ಟಿ, ಮಹಮ್ಮದ್ ರಫಿ, ಸಂಜೀವ್ ಕುಮಾರ್ ಕಂದಗಲ್, ಶರಣಬಸವ ಮೇಟಿ, ಅಪ್ಪಯ್ಯ ದಣಿ, ಮುದಗಲ್ ಪುರಸಭೆ ಅಧ್ಯಕ್ಷರಾದ ಮಹಾದೇವಮ್ಮ ಗುತ್ತೇದಾರ್, ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಲಿಂಗಪ್ಪ ಮನಗೂಳಿ,ದಾವುದ್ ಸಾಬ್ ಮುದುಗಲ್, ದೊಡ್ಡನಗೌಡ ಹೊಸಮನಿ, ಪ್ರಭು ಸ್ವಾಮಿ ಅತ್ತನೂರು , ರೌಫ್ ಗ್ಯಾರಂಟಿ,ಬಾಬಾ ಖಾಜಿ, ರುದ್ರಪ್ಪ ಬ್ಯಾಗಿ, ಶಿವರಾಯ ದೇಗುಲಮರಡಿ ,ಸಂಜೀವಪ್ಪ ಹುನಕುಂಟೆ, ಪ್ರಭುಲಿಂಗ ಮೇಗಳ ಮನಿ, ಮಹಮ್ಮದ್ ಹಾಜಿಬಾಬಾ ಕರಡಕಲ್, ವಾಹಿದ ಖಾದ್ರಿ ಆನೆ ಹೊಸೂರ, ಮೈಬೂಬ್, ಸೇರಿದಂತೆ ಪುರಸಭಾ ಮಹಿಳಾ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
Be the first to comment