ಡಾ.ಬ್ರೋ ತಿಂಗಳ ಆದಾಯ ಎಷ್ಟು? ಗಗನ್ ನೀಡಿದ ಉತ್ತರ ಇಲ್ಲಿದೆ

ಅಂಕಣ : ಯೊಗೀಶ ಶಿರೂರು ಖ್ಯಾತ ಪತ್ರಕರ್ತರು

ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವವರೆಗೂ ಪರಿಚಿತ. ಡಾಕ್ಟರ್ ಬ್ರೋ ಹಳ್ಳಿಯ ಗಲ್ಲಿ-ಗಲ್ಲಿಯಿಂದ ಹಿಡಿದು ಬೇರೆ ಬೇರೆ ದೇಶಗಳೆಲ್ಲಾ ಸುತ್ತಿ ಬಂದಿದ್ದಾರೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಚೀನಾ, ತಾಂಜಾನಿಯಾ, ನೇಪಾಳ, ಉಗಾಂಡ, ಥೈಲ್ಯಾಂಡ್, ರಷ್ಯಾ, ದುಬೈನಂತಾ ದೇಶಗಳಲ್ಲಿ ಸುತ್ತಾಡಿ ಅಲ್ಲಿನ ಜನಜೀವನ, ಸಂಸ್ಕೃತಿ ಪರಿಚಯ ಮಾಡಿದ್ದಾರೆ.
ಡಾಕ್ಟರ್ ಬ್ರೋ ಯೂಟ್ಯೂಬ್ ಚಾನೆಲ್ ಶುರುವಾಗಿದ್ದು ಬರೀ 6 ವರ್ಷದ ಹಿಂದೆ.. 2018ರಲ್ಲಿ ಗಗನ್ ಶ್ರೀನಿವಾಸ್ ಡಾಕ್ಟರ್ ಬ್ರೋ ಅಂತ ಯೂಟ್ಯೂಬ್ ಚಾನೆಲ್ ಶುರುಮಾಡಿದ್ರು. ಆಗ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಸೇರಿ ಹಲವೆಡೆ ಗಲ್ಲಿ ಗಲ್ಲಿಯಲ್ಲಿ ಸುತ್ತಿ ಒಂದಿಷ್ಟು ಚಿಕ್ಕ ವಿಡಿಯೋ ಮಾಡಿದ್ರು. ಆದ್ರೆ ಅದು ಇಂದಿನ ದಿನದಷ್ಟು ದೊಡ್ಡಮಟ್ಟಿಗೆ ಬೆಳೆಯುತ್ತೆ ಅಂತ ಗಗನ್ ಕೂಡ ಅಂದುಕೊಂಡಿರಲಿಲ್ಲ. ಗಗನ್ ಅವ್ರ ಮಾತಿನ ಶೈಲಿ, ಊರಿನ ಪರಿಚಯ ಮಾಡಿಕೊಡೋ ಶೈಲಿಗೆ ಇಡೀ ಕರುನಾಡೇ ಫಿದಾ ಆಗಿದೆ.
ಡಾಕ್ಟರ್ ಬ್ರೋ ಚಾನೆಲ್​​​​ನಲ್ಲಿ ಈಗ ಎರಡೂವರೆ ಮಿಲಿಯನ್​​ಗೂ ಹೆಚ್ಚಿನ ಜನ ಸಬ್​​ಸ್ಕ್ರೈಬರ್ಸ್ ಆಗಿದ್ದಾರೆ. ಅವ್ರು ಕಳೆದ 6 ವರ್ಷದಲ್ಲಿ ಹಾಕಿದ್ದು ಕೇವಲ 150 ವಿಡಿಯೋಗಳೇ ಆದ್ರೂ ಅದರಿಂದ ಬಂದ ರೆಸ್ಪಾನ್ಸ್ ಮಾತ್ರ ಅಧ್ಬುತ
ಡಾಕ್ಟರ್ ಬ್ರೋ ಅವ್ರು ಈಗ ಹಾಗೋ ಒಂದೊಂದು ವಿಡಿಯೋನೂ ಲಕ್ಷಗಟ್ಟಲೆ ವೀವ್ಸ್ ಕಾಣುತ್ತೆ. ಪಾಕಿಸ್ತಾನಕ್ಕೆ ಎಂಟ್ರಿ ಕೊಟ್ಟ ವಿಡಿಯೋವಂತೂ 6 ಮಿಲಿಯನ್ ವೀವ್ಸ್ ಕಂಡಿದೆ. ಇಷ್ಟೆಲ್ಲಾ ಫಾಲೋವರ್ಸ್, ವೀವ್ಸ್ ಇರುವಾಗ ಅವ್ರ ಯೂಟ್ಯೂಬ್​​ನಿಂದ ಅವ್ರು ಎಷ್ಟು ಹಣ ಸಂಪಾದನೆಮಾಡ್ತಾರೆ ಗೊತ್ತಾ? ಇದೇ ಮೊದಲ ಬಾರಿ ಸಾಕ್ಷಿ ಸಮೇತ ಗಗನ್ ತನ್ನ ಅಕೌಂಟ್​​ನ ಆದಾಯವನ್ನ ಜನರ ಮುಂದಿಟ್ಟಿದ್ದಾರೆ. ಡಾಕ್ಟರ್ ಬ್ರೋ ಯೂಟ್ಯೂಬ್​ನಿಂದ ಸಿಕ್ಕಾಪಟ್ಟೆ ದುಡೀತಿದ್ದಾರೆ, ಅವ್ರಿಗೆ ಖರ್ಚೆಲ್ಲಾ ಹೋದ್ರೂ ಅವರಿಗೆ ಉಳಿಯೋದು ಲಕ್ಷ ಲಕ್ಷ ಅಂತ ಮಾತಾಡಿಕೊಳ್ತಿದ್ರು. ಆದ್ರೆ ಅವ್ರ ಯೂಟ್ಯೂಬ್​ನಿಂದ ಬರ್ತಿರೋ ನಿಜವಾದ ಅಮೌಂಟ್ ಎಷ್ಟು? ಖರ್ಚೆಲ್ಲಾ ಕಳೆದ್ಮೇಲೆ ಅವ್ರಿಗೆ ಉಳಿಯೋ ಹಣ ಎಷ್ಟು ಅನ್ನೋದನ್ನ ಅವ್ರೇ ಜನರಮುಂದಿಟ್ಟಿದ್ದಾರೆ
ಡಾಕ್ಟರ್ ಬ್ರೋಗೆ ಈಗ ತಿಂಗಳಿಗೆ ಕೇವಲ 2100 ಡಾಲರ್ ಹಣ ಬರ್ತಿದೆ. ಭಾರತದ ಕರೆನ್ಸಿ ಲೆಕ್ಕದಲ್ಲಿ ಹೇಳೋದಾದ್ರೆ 1ಲಕ್ಷದ 76 ಸಾವಿರ ಮಾತ್ರ.. ಇದ್ರಲ್ಲಿ ಗಗನ್ ತಮ್ಮ ಖರ್ಚನ್ನೂ ಹೇಳಿದ್ದಾರೆ. ತಿಂಗಳಿಗೆ ಒಂದೂ ಮುಕ್ಕಾಲು ಲಕ್ಷ ಹಣ ಬಂದ್ರೆ, ಅದ್ರಲ್ಲಿ 50 ಸಾವಿರ ಹಣ ವಿದೇಶಕ್ಕೆ ಹೋಗಿ ಬರೋ ಫ್ಳೈಟ್​ ಚಾರ್ಜ್, ಟ್ರಾವೆಲ್ ಚಾರ್ಜ್​​ಗೆ ಹೋಗುತ್ತೆ. ಇನ್ನು ಆದೇಶದಲ್ಲಿ ವಾರಗಟ್ಟಲೆ ಉಳಿದುಕೊಂಡು ಊಟ ತಿಂಡಿ ಖರ್ಚು, ಅಂದ್ರೂ 60ಸಾವಿರದಷ್ಟು ಬರುತ್ತಂತೆ.. ಇನ್ನುಳಿದ ಹಣದಲ್ಲಿ ವಿಡಿಯೋ ಎಡಿಟಿಂಗ್ ಕಾಸ್ಟ್​ ಕೊಡಬೇಕು. ತಾವೂ ಖರೀದಿಸಿರೋ ಮೊಬೈಲ್, ಕ್ಯಾಮೆರಾ ಗ್ಯಾಜೆಟ್​​ಗಳ ಇಎಂಐ ಅನ್ನೂ ಕಟ್ಟಬೇಕು. ಇಷ್ಟೆಲ್ಲಾ ಹೋದ್ಮೇಲೆ ಗಗನ್​​ ಶ್ರೀನಿವಾಸ್​ಗೆ ಉಳಿಯೋದು ಕೇವಲ 10ಸಾವಿರದಿಂದ 20ಸಾವಿರ ಅಷ್ಟೇ.
ಹೆಸರಿಗೆ ಅಷ್ಟೇ ಗಗನ್ ಯೂಟ್ಯೂಬ್​​ನಿಂದ ಒಂದೂ ಮುಕ್ಕಾಲು ಲಕ್ಷ ಹಣ ಪಡೆದ್ರೂ, ತಾವು ಹೋಗಿ ಬರೋ ಟ್ರಾವೆಲ್​ ಖರ್ಚಿಗೆ ಮಾತ್ರ ಸಾಕಾಗ್ತಿದೆಯಂತೆ.. ಅಸಲಿಗೆ ಡಾಕ್ಟರ್ ಬ್ರೋ ತಿಂಗಳ ಲಾಭ ಅಂದ್ರೆ ಕೇವಲ 10ರಿಂದ 20 ಸಾವಿರ ಮಾತ್ರ.

Logo

Be the first to comment

Leave a Reply

Your email address will not be published.


*