“ಕೊರೋನ- ಏನಿದು… ಖರೇನಾ!?” ಸಾಹಿತಿ ಮಾಹಾಂತೇಶ ನಿಟ್ಟೂರವರ ಕವನದಲ್ಲಿ

ವರದಿ: ಅಮರೇಶ ಕಾಮನಕೇರಿ

ಸಾಹಿತ್ಯ


 

ಸದ್ದಿಲ್ಲದೆ ಯುದ್ಧ ಸಾರಿ
ಅಗಣಿತ ಹೆಣಗಳ ಗುದ್ದಿಗೆ ಹಾಕಿ
ದೇಶ ಭಾಷೆಯ ಗಡಿಗಳೆಲ್ಲೆ ದಾಟಿ
ಅಕಾರಣ ರಣಕಹಳೆ ಊದುತ
ಮರಣ ಮೃದಂಗ ಬಾರಿಸಲು ಬಂದೀಯಂತೆ- ಖರೇನಾ!?

ಪ್ರಾಣಿ-ಪಕ್ಷಿ ಎಲ್ಲಾ ಬಿಟ್ಟು
ಮಾನವನೆದೆಗೇ ಗುರಿಯಿಟ್ಟು
ಶೀತ ನೆಗಡಿ ಕೆಮ್ಮು ದಮ್ಮು
ಅಂತಾದ್ದೇನಿಲ್ಲಾಂತ ಅಲಕ್ಷ್ಯ
ಮಾಡಿದ್ರೆ……ನಾಳೆಯ ಮುಖ
ನೋಡಲೂ ಬಿಡೋದಿಲ್ವಂತೆ- ಖರೇನಾ !?

ನಾಕವನ್ನೇ ನರಕ ಮಾಡಿ
ಅಟ್ಟಹಾಸದಿ ಮೆರೆಯುತಿಹ
ಬಣ್ಣದ ಮಾತಿನ ನರನ ನಾಟಕ
ನಿಲ್ಲಿಸಲು ಬಂದೀಯಂತೆ- ಖರೇನಾ !?

ಮಾತು-ಕೃತಿಗೂ ಅಜ-ಗಜಾಂತರ
ಅಂತರದ ಆತುರದ ಬೆಂತರನ
ಬೆನ್ನೆಲುಬು ಮುರಿಯಲು ಬಂದೀಯಂತೆ- ಖರೇನಾ!?

ಕರಿಯ-ಬಿಳಿಯ, ಬಡವ-ಬಲ್ಲಿದ
ವರ್ಗ-ವರ್ಣ, ಮೇಲು-ಕೀಳೆಂದು
ಜಾತಿ-ಧರ್ಮದ ಮೂಲಭೂತಕೆ
ಜೋತು ಬಿದ್ದು ಗೋಳುಣಿಸಿದ
ಗೋಸುಂಬೆಗಳಿಗೆ ‘ಸಾವು ಸಮ’ವೆಂದು
ಸಾರಲು ಬಂದೀಯಂತೆ- ಖರೇನಾ!?

ವಿನಾಶದಾಲೋಚನೆಯ ವಿಕೃತರನು
ಶಸ್ತ್ರ ರಹಿತ ನಾಶಗೈಯಲು ಮಹಾ
ಮಾರಿಯಾಗಿ ಶಾಸ್ತ್ರ ಸಹಿತ ಬಂದೀಯಂತೆ- ಖರೇನಾ!?

ಕೊರೋನ- ಏನಿದು…ಖರೇನಾ!?

–ಮಹಾಂತೇಶ್.ಬಿ.ನಿಟ್ಟೂರ್
ದಾವಣಗೆರೆ.

Be the first to comment

Leave a Reply

Your email address will not be published.


*