ಅಂದಿನ ರೈಲ್ವೆ ಸಚಿವರಾಗಿದ್ದ ಕೆಹೆಚ್. ಮುನಿಯಪ್ಪ ನವರು ರಾಜ್ಯಕ್ಕೆ ಮಂಜೂರು ಮಾಡಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಸೋಮಣ್ಣ ಅವರಿಗೆ ಒತ್ತಾಯಿಸಿದರು.
ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೈಲ್ವೆ ಸಚಿವರಾಗಿದ್ದ ಮುನಿಯಪ್ಪ ನವರು ರಾಜ್ಯದ ಪ್ರಮುಖ ಯೋಜನೆಗಳು ಮಂಜೂರು ಮಾಡಿದ್ದು ಶೀಘ್ರದಲ್ಲಿ ಪೂರ್ಣಗೊಳಿಸಲು ರೈಲ್ವೆ ಸಚಿವರಿಗೆ ಒತ್ತಾಯಿಸಿದರು
ನವದೆಹಲಿ.12 :; ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ನವರು ನವದೆಹಲಿಯಲ್ಲಿಂದು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ರವರನ್ನು ಬೇಟಿ ಮಾಡಿ ಕರ್ನಾಟಕ ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಒತ್ತಾಯಿಸಿದರು.
ಅಂದಿನ ಯುಪಿಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ರೈಲ್ವೆ ಸಚಿವರಾಗಿದ್ದ ಕೆಹೆಚ್. ಮುನಿಯಪ್ಪ ನವರು ಕಾರ್ಯಾರಂಭ ಮಾಡಿದ್ದ ಪ್ರಮುಖ ರೈಲ್ವೆ ಯೋಜನೆಗಳಾದ
ವೈಟ್ ಪೀಲ್ಡ್ ನಿಂದ ಕೋಲಾರ ,
ಕಡಪ ನಿಂದ ಕೆಜಿಎಫ್,
ಚಿಕ್ಕಮಂಗಳೂರು ನಿಂದ ಸಕಲೇಶಪುರ,
ಬೆಂಗಳೂರು ನಿಂದ ಕೊಳ್ಳೇಗಾಲ,
ಚಿಕ್ಕಬಳ್ಳಾಪುರ ದಿಂದ ಪ್ರಶಾಂತನಗರ (ಪುಟ್ಟ ಪರ್ತಿ),
ಚಿಕ್ಕಬಳ್ಳಾಪುರ ನಿಂದ ಗೌರಿಬಿದನೂರು,
ಮೈಸೂರು ನಿಂದ ಕುಶಾಲನಗರ,
ದಾವಣಗೆರೆ ಯಿಂದ ತುಮಕೂರು,ಚಿತ್ರದುರ್ಗ,
ರಾಯದುರ್ಗ ನಿಂದ ತುಮಕೂರು,
ಮುಂತಾದ ಕಡೆ ಯೋಜನೆಗಳನ್ನು ಅಂದು ಸಚಿವನಿದ್ದಾಗ ಕಾರ್ಯಾರಂಭ ಮಾಡಿದ್ದು ಇವುಗಳನ್ನು ಅತಿ ಶೀಘ್ರದಲ್ಲಿ ನಮ್ಮ ರಾಜ್ಯದ ಜನಾನುರಾಗಿ ರೈಲ್ವೆ ಸಚಿವರಾದ ಸೋಮಣ್ಣನವರು ಪ್ರಾರಂಭಿಸಿ ಪೂರ್ಣಗೊಳಿಸಲು ಮಾನ್ಯ ಸಚಿವರಿಗೆ ಒತ್ತಾಯಿಸಿದರು.
ಹಾಗೆಯೇ ವಿಶೇಷವಾಗಿ ದಕ್ಷಣ ಭಾರತದಲ್ಲಿಯೇ ಅತಿ ದೊಡ್ಡ ರೈಲ್ವೆ ಕೋಚ್ ಫ್ಯಾಕ್ಟರಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF)
ಮತ್ತು ಎರಡನೇ ಕೋಚ್ ಫ್ಯಾಕ್ಟರಿ ಕೋಲಾರ ಮತ್ತು ಶ್ರೀನಿವಾಸಪುರದಲ್ಲಿದಲ್ಲಿ ಪ್ರಾರಂಭಿಸಿದ್ದು ಇದಕ್ಕೆ
ಸುಮಾರು 1200 ಎಕರೆ ಪ್ರದೇಶವನ್ನು ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆಗೆ ಮೀಸಲಿಟ್ಟಿದ್ದು ಅಂದಿನ ಕೇಂದ್ರ ರೈಲ್ವೆ ಸಚಿವರಾದ ಪಿಯೂಶ್ ಗೋಯಲ್ ಹಾಗೂ ಡಿವಿಷನಲ್ ರೈಲ್ವೆ ಮ್ಯಾನೇಜರ್ ರವರು ಕಾರ್ಯಗಾರವನ್ನು ಮಾಡಿ ಆಶ್ವಾಸನೆ ನೀಡಿದ್ದು ಇದನ್ನು ಕಾರ್ಯಾರಂಭ ಮಾಡಿ ಪೂರ್ಣಗೊಳಿಸಲು ಮಾನ್ಯ ಸಚಿವರಿಗೆ ಒತ್ತಾಯಿಸಿದರು.
Be the first to comment