ಗ್ರಾಮ‌‌ ಪಂಚಾಯತದಿಂದ SC/ST ಜನಾಂಗಕ್ಕೆ ಶವಸಂಸ್ಕಾರಕ್ಕೆ ಸಹಾಯ ಧನ ನೀಡಿ ಮಾದರಿಯಾದ ಈರಣ್ಣ ಬಾರ್ಕಿ

ಹುಬ್ಬಳ್ಳಿ  ::  ‘SC, ST ಸಮುದಾಯ’ದ ಹೆಣ್ಣುಮಕ್ಕಳ ಮದುವೆಗೆ,ಮತ್ತು ಶವಸಂಸ್ಕಾರಕ್ಕೆ ಕರ್ನಾಟಕದ ಪ್ರತಿಯೊಂದು ‘ಗ್ರಾಪಂ’ಯಿಂದ ಸಹಾಯಧನ  ಕೊಡಬೇಕು ಅಂತ ಸರ್ಕಾರದ ಆದೇಶ ಇದೆ  ನಮ್ಮ ಪಂಚಾಯತ  ವ್ಯಾಪ್ತಿಯಲ್ಲಿ ಮೃತರಾದ SC.ST ಜನಾಂಗದವರಿಗೆ ಸಹಾಯ ಧನ ನೀಡುವ ಸಲುವಾಗಿ ಚರ್ಚೆ ಮಾಡಿ ಗ್ರಾಮದ SC ಕಾಲೋನಿಯಲ್ಲಿರುವ ಕರೆವ್ವ ರಾಮಪ್ಪ ಮೇಲಿನಮನಿ ಇವರ ಶವಸಂಸ್ಕಾರಕ್ಕೆ ಇವರ ಮಗನಾದ ಸೋಮಲಿಂಗಪ್ಪ ಮೇಲಿನಮನಿ ಇವರಿಗೆ ಸಹಾಯಧನ ಗ್ರಾಮ ಪಂಚಾಯಿತಿಯಿಂದ 5 ಸಾವಿರ ರೂಪಾಯಿ ಚಕ್ ನೀಡಲಾಯಿತು ಗ್ರಾಮ ಪಂಚಾಯತ ಉಪಾಧ್ಯಕ್ಷ ಈರಣ್ಣ ಬಾರಿಕೇರ ತಿಳಿಸಿದರು.

ಇದೆ ಸಂದರ್ಭದಲ್ಲಿ SC/ST ಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವಿಸಿದರು.  ಗ್ರಾಮ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ನಿಯಮ 94 ಸಿ ಹಾಗೂ ಫಾರ್ಮ್ 50 53 ಪ್ರಕರಣಗಳಲ್ಲಿ ಬರಿಸಬೇಕಾದ ವಾಸ್ತವ ಶುಲ್ಕವನ್ನು ಪಾವತಿಸುವುದು ಕರ್ನಾಟಕ ಗ್ರಾಮ ಸ್ವರಾಜ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 213ರ ಗ್ರಾಮ ಪಂಚಾಯಿತಿಗಳಿಗೆ ಎಲ್ಲಾ ಮೂಲಗಳಿಂದ ಲಭ್ಯವಾಗುವ ಅನುದಾನಗಳಲ್ಲಿ ಶೇಕಡ 25 ಕ್ಕಿಂತ ಕಡಿಮೆ ಇಲ್ಲದಂತೆ ಮಾರ್ಗ ಸೂಚಿಗಳನ್ನು ಉಲ್ಲೇಖಿತ ಸರ್ಕಾರದ ಸುತ್ತೋಲೆಗಳಲ್ಲಿ ಹೊರಡಿಸಲಾಗಿದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹೆಣ್ಣು ಮಕ್ಕಳ ಸರಳ ಮದುವೆಗೆ ಸಹಾಯಧನ ನೀಡಬಹುದು ಗ್ರಾಮ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಶವ ಸಂಸ್ಕಾರಕ್ಕೆ ಗ್ರಾಮ ಪಂಚಾಯಿತಿಯಿಂದ ಸಹಾಯಧನ ನೀಡಬಹುದು ಈ ನಿಯಮದ ಅಡಿಯಲ್ಲಿ ನಮ್ಮ ಗ್ರಾಮ ಪಂಚಾಯತಿಯಿಂದ ಸಹಾಯ ಧನ ನೀಡಿದೆವೆ ನಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯ ಜನ ಅರ್ಜಿಗಳನ್ನು ಸಲ್ಲಿಸಿ ಸೌಲಭ್ಯಗಳನ್ನು ಪಡೆದುಕೋಳಬೇಕು   ಎಂದು ಗ್ರಾ ಪಂ ಉಪಧ್ಯಕ್ಷರಾದ ಈರಣ್ಣ ಬಾರ್ಕಿ ತಿಳಿಸಿದರು

LOGO
Logo

Be the first to comment

Leave a Reply

Your email address will not be published.


*