ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ತಹಶೀಲ್ದಾರ್ ಮನವಿ ಸಲ್ಲಿದರು..

ಹುಣಸಗಿ: ಡಾ| ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ, ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ಸರೋಜಿನಿ ಮಹಿಷಿ ವರದಿ ದಶಕಗಳಷ್ಟು ಹಳೆಯದಾಗಿದ್ದು, ಕೂಡಲೇ ವರದಿ ಜಾರಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ರಾಜ್ಯ ಸಂಚಾಲಕ ಭೀಮಣ್ಣ ಶಖಾಪುರ ಮಾತನಾಡಿ, ಕನ್ನಡಿಗರಿಗೆ ಆದ್ಯತೆ ನೀಡಲು ಶಿಫಾರಸು ಮಾಡಿದ್ದ ಸರೋಜಿನಿ ಮಹಿಷಿ ವರದಿ

58 ಶಿಫಾರಸುಗಳನ್ನು ಸರ್ಕಾರದ ಮುಂದಿಟ್ಟಿತು. ಕೇಂದ್ರ ಸರಕಾರಿ ಇಲಾಖೆಗಳು ಮತ್ತು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಲಯ ಘಟಕಗಳ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳನ್ನು ಕೇವಲ ಕನ್ನಡಿಗರಿಗೆ ಮಾತ್ರ ಸಿಗಲಿದ್ದು ಈ ವರದಿಯನ್ನು ಸರಕಾರ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಖಾಸಗಿ ಕೈಗಾರಿಕಾ ಕಂಪನಿಗಳಲ್ಲಿ ಶೇ.65ರಷ್ಟು ಕನ್ನಡಿಗರಿಗೆ ಮೀಸಲು ನೀಡುವುದಾಗಿದೆ, ಬೇರೆ ರಾಜ್ಯಗಳದಲ್ಲಿಯೂ ಸ್ಥಳೀಯರಿಗೆ ಮೀಸಲಾತಿ ಅಲ್ಲಿನ ಸರಕಾರ ನೀಡಿದೆ. ಅದರಂತೆಯೂ ಕನ್ನಡಿಗರಿಗೆ ಮೀಸಲು ಸಿಗಲು ಮಹಿಷಿ ವರದಿ

ಜಾರಿ ಅತೀ ಅಗತ್ಯವಾಗಿದೆ ಎಂದು ಆಗ್ರಹಿಸಿದರು. ನಂತರ ಸಿಎಂಗೆ ಬರೆದ ಮನವಿಯನ್ನು ತನ ತಹಶೀಲ್ದಾ‌ರ್ ಬಸಲಿಂಗಪ್ಪ ನಾಯ್ಯೋಡಿ ಅವರಿಗೆ ಸಲ್ಲಿಸಲಾಯಿತು.

ಜಿಲ್ಲಾಧ್ಯಕ್ಷ ರಂಗಯ್ಯ, ತಾಲೂಕು ಅಧ್ಯಕ್ಷ ಹುಲಗಪ್ಪ ಪಾಳೇಗಾರ, ಶ್ರೀಧರ ನಾಐಕ, ರಾಮಲಿಂಗಪ್ಪ ಅಂಬ್ರಯ್ಯಸ್ವಾಮಿ, ಸಿದ್ದು ಪಟ್ಟೇದಾರ, ಶ್ರೀಕಾಂತ ದೊರಿ, ಶರಣಗೌಡ ತಳ್ಳಳಿ, ದೇವಿಂದ್ರಪ್ಪ ಮುಂಡರಗಿ, ವೆಂಕಟೇಶ ಮಕಾಶಿ, ರಮೇಶ ಯಡಹಳ್ಳಿ, ಹಣಮಂತ್ರಾಯ, ದೇವರಾಜ, ಪಯಾಜ್, ಸೋಮನಗೌಡ ಸೇರಿದಂತೆ ಇತರರಿದ್ದರು.

LOGO
Logo

Be the first to comment

Leave a Reply

Your email address will not be published.


*