ನಿನ್ನೆಯಷ್ಟೇ ಬಜೆಟ್ ಮಂಡಿಸಿದ ಬಳಿಕ ಸಿಎಂ ಬಿಎಸ್‍ವೈ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗೆ 10 ಸಾವಿರ ಕೋಟಿ ಹಣ ನಿಗದಿ ಮಾಡಿದ್ದಾರೆ. ಈ ಸಂಬಂಧ ಇಂದಿನ ಅಧಿವೇಶನದಲ್ಲಿ ಸಿಎಂ ಬಿಎಸ್‍ವೈ ಸ್ಪಷ್ಟಪಡಿಸುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಖಜಾನೆಯಲ್ಲಿ ದುಡ್ಡೆ ಇಲ್ಲ ಯಡಿಯೂರಪ್ಪ ಹೇಗೆ ಹಣ ಹೊಂದಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ADVERTISEMENT
ಹೌದು ಇಂದು ಶುಕ್ರವಾರ ಅಧಿವೇಶನ ಆರಂಭವಾಗುತ್ತಿದ್ದಂತೆ ಕೃಷ್ಣಾ ಭಾಗದ ರೈತರಿಗೆ ಸಿಎಂ ಬಿಎಸ್‍ವೈ ಸಿಹಿ ಸುದ್ದಿ ನೀಡಿದರು. ನಿನ್ನೆ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿದ್ದು. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗೆ 10 ಸಾವಿರ ಕೋಟಿ ನಿಗದಿ ಪಡಿಸಲಾಗಿದ್ದು. 20 ಹಳ್ಳಿಗಳ ಪುನರ್ವಸತಿ, ಪುನರ್ ನಿರ್ಮಾಣ ಮಾಡಲಾಗುವುದು ಅದೇ ರೀತಿ ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಮತ್ತು ಈ ಸಂಬಂಧ ದಿಲ್ಲಿಗೆ ಹೋಗಿ ಹೇಗಾದ್ರೂ ಮಾಡಿ ಹೆಚ್ಚಿನ ಅನುದಾನ ತಂದು ಹಣ ಕೊರತೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಬಜೆಟ್ ಮಂಡಿಸಿದ್ದಾರೆ. ಈಗ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗೆ 10 ಸಾವಿರ ಕೋಟಿ ನೀಡುತ್ತೇನೆ ಎನ್ನುತ್ತಿದ್ದಾರೆ. ಆದ್ರೆ ಅವರ ಹತ್ತಿರ ದುಡ್ಡು ಇಲ್ಲ ಎಲ್ಲಿಂದ ಕೊಡುತ್ತಾರೆ. ಸುಮ್ಮನೇ ಭರವಸೆ ಕೊಟ್ಟರೆ ಪ್ರಯೋಜನ ಆಗುವುದಿಲ್ಲ ಅಲ್ಲಿನ ಜನರ ಮೂಗಿಗೆ ತುಪ್ಪ ಸವರಿದಂತೆ ಆಗುತ್ತದೆ ಎಂದರು. ಈ ವೇಳೆ ಸ್ಪಷ್ಟನೆ ನೀಡಿದ ಸಿಎಂ ಬಿಎಸ್‍ವೈ ಯಾವುದೇ ರೀತಿ ಎಲ್ಲಿಯೇ ಕೊರತೆ ಆದ್ರೂ ಸಹ ಕೃಷ್ಣಾ ಮೇಲ್ದಂಡೆ ಯೋಜನೆ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿಗೆ ಹೀಗಾಗಿ ಈ ಯೋಜನೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಿದರು.
ADVERTISEMENT
ಬಳಿಕ ಮಾತನಾಡಿದ ಡಿಸಿಎಂ ಗೋವಿಂದ್ ಕಾರಜೋಳ ಅವರು ನಮಗೆ 173 ಟಿಎಂಸಿ ನೀರು ಹಂಚಿಕೆಯಾಗಿ ಇಂದಿಗೆ ಏಳು ವರ್ಷವಾಗಿದೆ. ಆದ್ರೆ ಈ ಏಳು ವರ್ಷದಿಂದ ಹಿಂದಿನ ಸರ್ಕಾರ ಒಂದು ರೂಪಾಯಿಯನ್ನು ಕೃಷ್ಣಾ ಮೇಲ್ದಂಡೆ ಯೋಜನೆ ನೀಡಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಡಿಸಿಎಂ ಗೋವಿಂದ್ ಕಾರಜೋಳ ಆರೋಪಕ್ಕೆ ಪ್ರತಿಕ್ರಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗೆ 10 ಸಾವಿರ ಕೋಟಿ ಹಣವನ್ನು ಬಜೆಟ್‍ನಲ್ಲಿ ನಿಗದಿ ಪಡಿಸಿದ್ರೆ ನಾನು ಖಂಡಿತವಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೆ. ಆದ್ರೆ ಈಗ ಎಲ್ಲರೂ ಒತ್ತಡ ಮಾಡಿದ ನಂತರ ನಾನು ಕೇಂದ್ರಕ್ಕೆ ಹೋಗಿ ಹೇಗಾದ್ರೂ ಮಾಡಿ ಹಣ ಹೊಂದಿಸುತ್ತೇನೆ ಎಂದು ಹೇಳುವುದು ಎಷ್ಟು ಸರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗೆ ಶೀಘ್ರವೇ ಆರಂಭಿಸಲಾಗುವುದು ಎಂದು ಸಿಎಂ ಬಿಎಸ್‍ವೈ ಭರವಸೆ ನೀಡಿದ್ದು. ಆದಷ್ಟು ಬೇಗನೇ ಕಾಮಗಾರಿ ಆರಂಭಿಸಿ ಈ ಭಾಗದ ಜನರಿಗೆ ಮುಖ್ಯಮಂತ್ರಿಗಳು ನ್ಯಾಯ ಒದಗಿಸಲಿ ಎಂಬುದು ಎಲ್ಲರ ಆಗ್ರಹ
Be the first to comment