“ಅನ್ನಭಾಗ್ಯ” ಜಾರಿಯ ಸೌಭಾಗ್ಯ ನನ್ನದು…ಸಚಿವ ಮುನಿಯಪ್ಪ

ಪಡಿತರ ವಿತರಕ ಮಾಲಿಕರ ಕಮಿಷನ್‌ 1.ರೂ 50 ಪೈಸೆಗೆ ಹೆಚ್ಚಳ ಸಚಿವ ಮುನಿಯಪ್ಪ

ಅರಮನೆ ಮೈದಾನ ಬೆಂಗಳೂರು. 29 ಹಿರಿಯರು ಹೇಳಿದ ಒಂದು ಮಾತಿದೆ. ಪ್ರಸ್ತುತ ಈ ಮಾತನ್ನು ಇಲ್ಲಿ ಪ್ರಸ್ತಾಪಿಸಲೇಬೇಕಾದ ಅನಿವಾರ್ಯತೆ ಇದೆ. ಸ್ವಪ್ರಯತ್ನದಿಂದ ಸರ್ವತೋಮುಖ ಏಳ್ಗೆ ಸಾಧಿಸಬಲ್ಲ ಒಬ್ಬನೇ ಒಬ್ಬ ವ್ಯಕ್ತಿ ಈ ವಿಶ್ವದಲ್ಲಿ ಖಂಡಿತವಾಗಿಯೂ ಇದ್ದಾನೆ ಆತ “ನೀನೇ”. ಪ್ರತಿಯೊಬ್ಬರಿಗೂ ಈ ಮಾತು ತುಂಬಾ ಪ್ರೇರಣೆ ನೀಡುತ್ತದೆ. ಅಸಾಧ್ಯವಾದುದನ್ನು ಸಾಧಿಸಲು ಹುಮ್ಮಸ್ಸು ಮತ್ತು ಉತ್ಸಾಹ ಎರಡನ್ನೂ ನೀಡುತ್ತದೆ. ಅಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೆಬ್ ಅಂಬೇಡ್ಕರ್ ಅವರು ಹೇಳಿದ “ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತದ ವಿಧಾನವಲ್ಲ. ಅದೊಂದು ಜತೆಯಾಗಿ ಬಾಳುವ ವಿಧಾನ, ಸಮಗ್ರ ಬದುಕಿನ ಅನುಭವ. ಜೊತೆಯಲ್ಲಿರುವ ಮನುಷ್ಯರಿಗೆ ಘನತೆ, ಗೌರವ ನೀಡುವ ಕ್ರಮ…” ಎಂಬ ನುಡಿಗೆ ಪ್ರತಿಯಾಗಿ ನಮ್ಮ ನಡೆ-ನುಡಿಗಳಿರಬೇಕು. ಹೀಗಾಗಿಯೇ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಜನ ಸಾಮಾನ್ಯನ ಘನತೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಡಿ ಇರಿಸಿದ್ದೇವೆ.

ನಮ್ಮ ಸರ್ಕಾರ ರಚನೆ ಆಗುವ ಮೊದಲು ಪಂಚ ಗ್ಯಾರಂಟಿಗಳನ್ನು ಘೋಷಿಸಿದ್ದ ಮಹತ್ವದ ಯೋಜನೆಗಳಲ್ಲಿ `ಅನ್ನಭಾಗ್ಯ’ವೂ ಒಂದು. ರಾಜ್ಯದಲ್ಲಿ ಬಡವರು ಹಸಿವಿನಿಂದ ನರಳಬಾರದು ಎನ್ನುವ ಕಾರಣಕ್ಕೆ ಮಹತ್ವದ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಜನಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಈ ಯೋಜನೆ ಅನೇಕ ಬಡವರು ಮತ್ತು ಮಧ್ಯಮ ವರ್ಗದವರಿಗೆ ವರದಾನವಾಗಿದೆ.

ನಮಗೆ ಕರ್ನಾಟಕದ ಜನರೇ ದೇವರು. ದೇವರು ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೊಂದು ಜವಾಬ್ದಾರಿ ವಹಿಸುತ್ತಾನೆ. ಅದರಂತೆ ಶಕ್ತಿಯನ್ನೂ ತುಂಬುತ್ತಾನೆ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ದೇವರ ಸಮಾನರಾದ ನಾಡಿನ ಜನರು ನೀಡಿದ ಶಕ್ತಿ ಮತ್ತು ಚೈತನ್ಯ ಎಂದಿಗೂ ನಾನು ಮರೆಯಲಾರೆ. ನನ್ನ ಕ್ಷೇತ್ರದ ಜನರ ಋಣವಂತೂ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ.

`ಸರ್ಕಾರದ ಕೆಲಸ ದೇವರ ಕೆಲಸ’ ಎನ್ನುವ ಉದ್ಘೋಷ ನಾಡಿನ ಶಕ್ತಿಕೇಂದ್ರವಾದ ವಿಧಾನಸೌಧದಲ್ಲಿ ಅಳವಡಿಸಲಾಗಿದೆ. ಅದರಂತೆಯೇ ಸರ್ಕಾರದ ಕೆಲಸವನ್ನು ದೇವರ ಕೆಲಸವೆಂದೇ ಭಾವಿಸಿ ನಾನು ನಾಡಿನ ಜನತೆಯ ಸೇವೆ ಮಾಡುವ ಗುರುತರವಾದ ಹೊಣೆಗಾರಿಕೆಯನ್ನು ಹೊತ್ತಿದ್ದೇನೆ. ನನಗೆ ಈ ಹೊಣೆಗಾರಿಕೆ ನೀಡಿದವರು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು. ಅವರ ನಿರೀಕ್ಷೆಯಂತೆಯೇ ನಾನು ನನಗೆ ನೀಡಿದ ಖಾತೆಯನ್ನು ನಿರ್ವಂಚನೆಯಿಂದ ನಿರ್ವಹಿಸುತ್ತಿದ್ದೇನೆ.

“ಎಲ್ಲ ದಾನಕ್ಕಿಂತ ಅನ್ನದಾನ ಶ್ರೇಷ್ಠ” ಎನ್ನುವುದನ್ನು ರುಜುವಾತು ಮಾಡಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ. ನಮ್ಮ ಸರ್ಕಾರ ಇರುವವರೆಗೂ ನಾವು ನಾಡಿನ ಜನರು ಹಸಿವಿನಿಂದ ನರಳಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಎಂಥದೇ ಸವಾಲುಗಳು ಎದುರಾದರೂ `ಅನ್ನಭಾಗ್ಯ’ ಕೊರತೆ ಇರದಂತೆ ನೋಡಿಕೊಳ್ಳುತ್ತೇವೆ. ಅದಕ್ಕಾಗಿ ನಮ್ಮ ಸರ್ಕಾರ ನಾಡಿನ ಕೋಟ್ಯಾಂತರ ಜನರ ಹಸಿವು ನೀಗಿಸಲು ತಕ್ಕ ಸಿದ್ಧತೆ ಮಾಡಿಕೊಂಡಿದೆ.

`ಪರೋಪಕಾರಾರ್ಥಂ ಇದಂ ಶರೀರಂ’ ಎನ್ನುವುದು ನಮ್ಮ ಸರ್ಕಾರದ ಧ್ಯೇಯ. ಯಾರು ಏನೇ ಹೇಳಿದರೂ ರಾಜ್ಯದ ಜನರು ನಮ್ಮ ಮೇಲೆ ಅಪಾರವಾದ ನಂಬಿಕೆ ಮತ್ತು ಭರವಸೆಯನ್ನು ಇಟ್ಟಿದ್ದಾರೆ. ಈ ಭರವಸೆಯನ್ನು ಹುಸಿಗೊಳಿಸುವಲ್ಲಿ ವಿರೋಧಿಗಳು ಏನೇ ಷಡ್ಯಂತ್ರ ಹೂಡಿದರೂ ನಾಡಿನ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಏನೇ ಅಡ್ಡಿ ಆತಂಕಗಳನ್ನು ತಂದೊಡ್ಡಿದ್ದರೂ `ಅನ್ನಭಾಗ್ಯ’ ಯೋಜನೆ ನಿರಂತರ ಮುಂದುವರಿಯುತ್ತದೆ. `ಹಸಿವು ಮುಕ್ತ ಕರ್ನಾಟಕ’ ನಮ್ಮ ಧ್ಯೇಯ. ಅದರಂತೆ ನಮ್ಮ ಸರ್ಕಾರ ನಡೆದುಕೊಳ್ಳುತ್ತಿದೆ. ಬಡವರ ಹಸಿವು ನೀಗಿಸುವ ಮಹತ್ವದ ಕೆಲಸಕ್ಕೆ ನನ್ನನ್ನು ಸಂಪುಟ ದರ್ಜೆಯ ಸಚಿವರನ್ನಾಗಿ ನೇಮಿಸಲಾಗಿದೆ. ಹೀಗಾಗಿ ನಾನು ಜನರ ಕಲ್ಯಾಣಕ್ಕಾಗಿ ನನ್ನ ಶ್ರಮ-ಶಕ್ತಿ ವಿನಿಯೋಗಿಸುತ್ತಿದ್ದೇನೆ. ಪ್ರಸ್ತುತ ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ವಿತರಿಸಲಾಗುವ 5 ಕೆ.ಜಿ. ಆಹಾರಧಾನ್ಯದೊಂದಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ನೀಡಬೇಕಾದ 5 ಕೆ.ಜಿ. ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಮತ್ತು ನಮ್ಮ ಆಹಾರ ಮತ್ತು ನಾರಿಕರ ಸರಬರಾಜು ಸಚಿವರು ಕೇಂದ್ರ ಸರ್ಕಾರದ ಸಚಿವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಅಕ್ಕಿ ತರುವಲ್ಲಿ ಬಹಳಷ್ಟು ಪ್ರಯತ್ನ ಮಾಡಿದ್ದರೂ ಸಹ, ಅಕ್ಕಿ ನೀಡಲು ರಾಜಕಾರಣ ಮಾಡಿದ್ದು, 5 ಕೆ.ಜಿ. ಅಕ್ಕಿ ಬದಲಾಗಿ ಪ್ರತಿ ಕೆ.ಜಿ.ಗೆ ರೂ. 34/- ರಂತೆ ಪ್ರಲಾನುಭವಿಗೆ ಜುಲೈ-2023 ರಿಂದ 1.28 ಕೋಟಿ ಪಡಿತರ ಕಾರ್ಡ್ಗಳ ಮನೆಯ ಯಜಮಾನಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದೇವೆ. ಜುಲೈ-2023 ರಿಂದ ಜನವರಿ-2024 ರವರೆಗೆ 4.40 ಕೋಟಿ ಫಲಾನುಭವಿಗಳಿಗೆ ರೂ. 4411.55 ಕೋಟಿ ಹಣವನ್ನು ಯಶಸ್ವಿಯಾಗಿ ನೇರ ನಗದು ಹಣ ವರ್ಗಾವಣೆ ಮಾಡಿದ್ದೇವೆ.

ನಾವು ರಾಜ್ಯದ ಜನರಿಗೆ ಉಚಿತವಾಗಿ ಅಕ್ಕಿಯನ್ನು ನೀಡಲು ನಿರ್ಧರಿಸಿದ್ದು, ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿಯನ್ನು ನೀಡುವಲ್ಲಿ ನಿರಾಕರಿಸಿತು. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನರಿಗೆ ಭಾರತ್ ರೈಸ್ ಎಂಬ ಯೋಜನೆಯಡಿ ಒಂದು ಕೆ.ಜಿ. ಅಕ್ಕಿಗೆ ರೂ. 29/-ಗಳ ದರದಲ್ಲಿ ವಿತರಿಸಲು ಮುಂದಾಗಿದ್ದು, ಅದು ಸಹ ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ಏನೇ ಆದರೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ರವರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ನಮ್ಮ ಸರ್ಕಾರ ನುಡಿದಂದೆ ನಡೆದಿದೆ, ಮುಂದೆಯೂ ನಡೆಯುತ್ತದೆ.

 

Be the first to comment

Leave a Reply

Your email address will not be published.


*