ಕೆಲೂರ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರ ನೇಮಕ: ಪಿಯುಸಿ ಅರ್ಹತೆ, ಸಂಬಳ ರೂ.15,196

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ: ದ್ವಿತೀಯ ಪಿಯುಸಿ ಪಾಸಾಗಿದ್ರೆ ಈಗಲೇ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಹಾಕಿ. ಈ ಸರ್ಕಾರಿ ಹುದ್ದೆಗೆ ಮಾಸಿಕ ಸಂಬಳ ರೂ.15,196 ನೀಡಲಾಗುತ್ತದೆ. ಅರ್ಜಿ ಹಾಕುವ ವಿಧಾನ, ಪ್ರಮುಖ ದಿನಾಂಕಗಳು, ಅರ್ಹತೆಗಳ ವಿವರ ಇಲ್ಲಿದೆ.

CHETAN KENDULI

ಹೈಲೈಟ್ಸ್‌:
ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ನೇಮಕ.
23 ಹುದ್ದೆಗಳಿಗೆ ಅರ್ಜಿ ಆಹ್ವಾನ.ಅದರಲ್ಲಿ ಕೆಲೂರ ಗ್ರಾಮ ಪಂಚಾಯತಿ ಒಂದು.
ಅರ್ಜಿ ಸಲ್ಲಿಸಲು ಅಕ್ಟೋಬರ್ 19 ಕೊನೆ ದಿನ.
ಸಾಮಾನ್ಯ ಮಹಿಳಾ ಮಿಸಲಾತಿ.

ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ 23 ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳನ್ನು ಸಮತಲ ಮೀಸಲಾತಿ ನಿಯಮಗಳ ಪ್ರಕಾರ ಭರ್ತಿ ಮಾಡಲು ಇದೀಗ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತರು ಹುದ್ದೆಗಳ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ : ಬಾಗಲಕೋಟೆ ಜಿಲ್ಲಾ ಪಂಚಾಯತ್ ಕಾರ್ಯಾಲಯ, ಬಾಗಲಕೋಟೆ.
ಹುದ್ದೆ ಹೆಸರು : ಗ್ರಂಥಾಲಯ ಮೇಲ್ವಿಚಾರಕರು
ಹುದ್ದೆಗಳ ಸಂಖ್ಯೆ :01
ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪಾಸ್.

ಶೈಕ್ಷಣಿಕ ಅರ್ಹತೆ

ದ್ವಿತೀಯ ಪಿಯುಸಿ ಪರೀಕ್ಷೆ ಪಾಸ್‌ ಮಾಡಿರಬೇಕು. ಜತೆಗೆ ಸರ್ಟಿಫಿಕೇಶನ್ ಕೋರ್ಸ್‌ ಇನ್‌ ಲೈಬ್ರರಿ ಸೈನ್ಸ್‌ ನಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು. ಹಾಗೂ ಕನಿಷ್ಠ 3 ತಿಂಗಳ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಅರ್ಹತೆಗಳು
ಅರ್ಜಿ ಸ್ವೀಕರಿಸಲು ನಿಗದಿತ ಕೊನೆ ದಿನಾಂಕಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ವರ್ಗದವರಿಗೆ 35 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 40 ವರ್ಷದವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇತರೆ ಅರ್ಹತೆಗಳು
ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ಚಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯಾಗಿರತಕ್ಕದ್ದು.ಒಂದು ವೇಳೆ ನಿಗದಿತ ಅರ್ಹತೆ ಹೊಂದಿರದ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಪರಂತು ಸಂಬಂಧಪಟ್ಟ ಗ್ರಾಮ ಪಂಚಾಯತಿಯ ವ್ಯಾಪ್ತಿಯ ನಿವಾಸಿಯ ಲಭ್ಯತೆ ಇಲ್ಲದೇ ಇದ್ದಲ್ಲಿ ಆಯಾ ತಾಲೂಕು ಪಂಚಾಯತಿಯ ವ್ಯಾಪ್ತಿಯಲ್ಲಿನ ಬೇರೆ ಗ್ರಾಮ ಪಂಚಾಯತಿಯ ಅಭ್ಯರ್ಥಿಯಗಳನ್ನು ಆಯ್ಕೆಗೆ ಪರಿಗಣಿಸುವುದು.

ವೇತನ : ರೂ.15,196.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ನಮೂನೆಯನ್ನು online ನಲ್ಲಿ ರೂ.ಸಾಮಾನ್ಯ ಅಭ್ಯರ್ಥಿಗಳು 500ರೂ,ಹಿಂದುಳಿದ ವರ್ಗದ ಅಭ್ಯರ್ಥಿಗಳು 300ರೂ,ಪ.ಜಾ/ಪ.ಪಂ/ಪ್ರ.ವರ್ಗ-1/ಮಾಜಿ ಸೈನಿಕ ಅಭ್ಯರ್ಥಿಗಳು 200ರೂ,ವಿಶೇಷ ಚೆತನ ಅಭ್ಯರ್ಥಿಗಳು 100ರೂ CEO ಜಿಲ್ಲಾ ಪಂಚಾಯತ ಬಾಗಲಕೋಟೆ ಇವರ ಹೆಸರಿಗೆ ಚಲನ ಪ್ರಿಂಟ್ ಹಾಕಿಕೊಂಡು online ನಲ್ಲಿ ಅರ್ಜಿಹಾಕುವಾಗ ಅಪ್ಲೋಡ್ ಮಾಡಬೇಕು. ಅರ್ಜಿ ಹಾಕುವ ವಿಳಾಸ https://bagalkot.nic.in/

ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಪ್ರಾರಂಭ ದಿನಾಂಕ : 26-09-2023
ಅರ್ಜಿ ಸ್ವೀಕಾರ ಕೊನೆಗೊಳ್ಳುವ ದಿನಾಂಕ : 19-10-2023

Be the first to comment

Leave a Reply

Your email address will not be published.


*