ಬಾಗಲಕೋಟೆ:ಆಳ್ವಾಸ್ ಕಾಲೇಜು ಮೂಡಬಿದ್ರಿ ಮತ್ತು ರೀಚ್ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ಸುನಗ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಸಂಜೆ ಸುನಗ ಗ್ರಾಮದ ಎರಡು ಕಡೆಗಳಲ್ಲಿ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಶೌಚಾಲಯ ಬಳಕೆ, ಘನತ್ಯಾಜ್ಯ ನಿರ್ವಹಣಾ ನಿಯಮವಳಿಗಳ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನಗೊಂಡಿತು.
ಗ್ರಾಮದ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದರಿಂದ ಸಂಭಾವಿಸಬಹುದಾದ ಅನಾಹುತಗಳು ತ್ಯಾಜ್ಯದಿಂದಾಗಿ ಹರಡುವ ಹಲವು ಸಾಂಕ್ರಾಮಿಕ ಕಾಯಿಲೆಗಳ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.ಸುನಗ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಸ್ನೇಹ, ಅಶ್ವಿನಿ, ಸುಮಂಗಲ, ಸುಶ್ಮಿತಾ, ದೀಪ, ಅರುಣ್, ರೋಷನ್ ಮತ್ತು ಶ್ವೇತಾ ಬೀದಿ ನಾಟಕದಲ್ಲಿ ಕಲಾವಿದರಾಗಿ ಅಭಿನಯಿಸಿದರು.ಸುಮಾರು 200ಕ್ಕಿಂತ ಹೆಚ್ಚಿನ ಜನಈ ಬೀದಿ ನಾಟಕವನ್ನು ವೀಕ್ಷಿಸಿದರು. ಹಾಗೂ ಇಲ್ಲಿ ನೆರೆದಿದ್ದ ಮಹಿಳೆಯರು ಒಲೆಗೆ ಪ್ಲಾಸ್ಟಿಕ್ ಹಾಕಿ ಸುಡುವುದು ತಪ್ಪಾ ಎಂದು ಇದರಿಂದ ಪರಿಸರ ಹಾಳು ಅಗುವ ಜೊತೆಗೆ ನಮ್ಮ ಆರೋಗ್ಯಕ್ಕೂ ಹಾನಿಕಾರಕ ಎಂದು ಈ ಬೀದಿ ನಾಟಕ ಮೂಲಕ ಮಕ್ಕಳಿಂದ ತಿಳಿದೆವು ಇನ್ನೂ ಮುಂದೆ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ವ್ಯಕ್ತಪಡಿಸಿದರು.
ಸುನಗ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದಂತಹ ಡಿ.ಆರ್ ಅಡ್ವಿ, ಕಾರ್ಯದರ್ಶಿ ದಳವಾಯಿ, ಪಂಚಾಯತಿಯ ಎಲ್ಲಾ ಸಿಬ್ಬಂದಿ ವರ್ಗ,ಸುನಗ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ಮಾಯಾ ಹಾಗೂ ಸಿಬ್ಬಂದಿ ವರ್ಗ,ರೀಚ್ ಸಂಸ್ಥೆಯ ಆಂದೋಲನಾ ನಾಯಕಿ ಶ್ರೀಮತಿ ಸುಧಾ ಹಾಗೂ ಆಳ್ವಾಸ್ ಸಂಸ್ಥೆಯ ಸಮಾಜ ಕಾರ್ಯದ ವಿದ್ಯಾರ್ಥಿಗಳಾದ ಆರ್.ಹೃದಯ ಮತ್ತು ಅವಿನಾಶ್ ಎ.ಜಿ ಹಾಗೂ ಊರಿನ ಮುಖಂಡರು, ಮಕ್ಕಳು, ಮಹಿಳೆಯರು ಉಪಸ್ಥಿತಿ ಇದ್ದರು.
Be the first to comment