ಶ್ರೀ ಶರಣ ನುಲಿಯ ಚಂದಯ್ಯನವರ 916 ನೇ ಜಯಂತಿ ಆಚರಣೆಗೆ ಪೂರ್ವಭಾವಿ ಸಭಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಗೈರು.

ಲಿಂಗಸೂಗೂರು ; ಅಗಷ್ಟ 31 ರಂದು ರಾಜ್ಯಾದ್ಯಾಂತ ಕಾಯಕ ಯೋಗಿ ಕೊರವ ಸಮಾಜದ ಗುರುಗಳಾದ ಶ್ರೀ ನುಲಿಯ ಚಂದಯ್ಯ ಅವರ 916 ಜಯಂತಿಯನ್ನು ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಾರ್ಯ ಲಯದಲ್ಲಿ ಕೊರವ ಸಮಾಜದ ತಾಲ್ಲೂಕಿನ ಪದಾಧಿಕಾರಿಗಳು ಮತ್ತು ಸಮುದಾಯದ ಪ್ರಜ್ಞಾ ವಂತರ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ ಶಂಶಾಲಂ ಅಧ್ಯಕ್ಷತೆಯಲ್ಲಿ ಸಬೆ ಕರೆಯಲಾಗಿತ್ತು

ಆದರೆ ತಾಲೂಕಿನ ವಿವಿದ ಇಲಾಖೆಯ ಅದಿಕಾರಿಗಳು ಗೈರಾಗಿದ್ದು ಕೇವಲ ಕೂರವ ಸಮಾಜದ ಮಖಂಡರು ಹಾಗೂ ತಾಲೂಕಿನ ಏಳು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕೊರವ ಸಮಾಜದ ಏಕೈಕ ಧಾರ್ಮಿಕ ಅಸ್ಮಿತೆಯಾದ ಕಾಯಕ ಯೋಗಿ ಶಿವಶರಣ ಶ್ರೀ ನುಲಿಯ ಚಂದಯ್ಯ 916 ಜಯಂತಿಯನ್ನು ತಾಲೂಕು ಆಡಳಿತ ವತಿಯಿಂದ ಅಗಸ್ಟ್ 31 ರಂದು ಸರಕಾರಿ ಇಲಾಖೆಯಲ್ಲಿ ಆಚರಣೆ ಮಾಡಲಾಗುವುದು

ತಾಲೂಕು ಕೊರಚ ಕೊರಮ ಕೊರವ ಸಮಾಜದ ವತಿಯಿಂದ ಸಪ್ಟಂಬರ 10 ರಂದು ಲಿಂಗಸೂಗೂರು ಪಟ್ಟಣದ ಶಾಸಕರ ಶಾಲೆಯಲ್ಲಿ ವಿಜೃಂಭಣೆಯಿಂದ ಅರ್ಥ ಪೂರ್ಣವಾಗಿ ಕಾಯಕ ಯೋಗಿ ನುಲಿಯ ಚಂದಯ್ಯನವರ ಜಯಂತಿಯನ್ನು ಆಚರಿಸಲು ತಿರ್ಮಾನಿಸಲಾಯಿತು ತಾಲ್ಲೂಕಿನ ಎಲ್ಲಾ ಸಮುದಾಯದವರು ಭಾಗವಹಿಸುವಂತೆ ತಾಲೂಕು ಕೊರವ ಸಮಾಜದ ಅಧ್ಯಕ್ಷ ಯೋಗಪ್ಪ ಕಸಬಾಲಿಂಗಸೂಗೂರು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲಂಕೇಪ್ಪ ಆಮದಿಹಾಳ ದುರುಗಪ್ಪ ಲಿಂಗಸೂಗೂರು ಹುಚಪ್ಪ ಹಟ್ಟಿ ಹನುಮಂತ ಮುದಗಲ್ಲ ಬಸಲಿಂಗಪ್ಪ ರಾಘವೆಂದ್ರ ಪಂಪಾಪತಿ ಇತರರು ಇದ್ದರು.

Be the first to comment

Leave a Reply

Your email address will not be published.


*