ನಾನು ಎಂಬುದು ಎಂದು ಬಿಡುತ್ತೇವೋ ಆಗ ದೇವರನ್ನು ಕಾಣಬಹುದು : ಮಹಾಂತೇಶ್ ಮಸ್ಕಿ 

ಮಸ್ಕಿ, ತಾಲೂಕಿನ ಮೆದಿಕಿನಾಳ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ದೇವಾನಾಂ ಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಕಿ ವತಿಯಿಂದ ನಾಲ್ಕನೆಯ ದಿನದ ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದ ಕುರಿತು ದೇವರಲ್ಲಿದ್ದಾನೆ ಎಂಬ ಮಾತು? ಎಂಬುದಕ್ಕೆ ನಾನು ಎಂಬುದು ಎಂದು ಬಿಡುತ್ತೇವೋ ಆಗ ನಾವು ದೇವರನ್ನು ಕಾಣಬಹುದು ಎಂದು ಮೂಢ ನಂಬಿಕೆ ಬಗ್ಗೆ ಸ್ವ-ವಿವರವಾಗಿ ಮಹಾಂತೇಶ್ ಮಸ್ಕಿ ಮಾತನಾಡಿದರು.

 

 

ಕಾರ್ಯಕ್ರಮದ ಮೊದಲಿಗೆ ವೇದಿಕೆಯ ಗಣ್ಯರನ್ನು ಸ್ವಾಗತಿಸಿ ನಂತರ ಪ್ರಾಸ್ತಾವಿಕ ಭಾಷಣ ಶಿವ ಗ್ಯಾನಪ್ಪ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ನೆರವೇರಿಸಿದರು.

 

 

ಒಂದು ವೇಳೆ ಹೆಣ್ಣು ಮಕ್ಕಳಿಗೆ ಮಕ್ಕಳಾಗಿಲ್ಲ ಎಂದರೇ ಒಂದು ಮರ ಸುತ್ತು ಹಾಕಿ ನಿಮಗೆ ಮಕ್ಕಳಾಗುತ್ತದೆ ಎನ್ನುವರು. ಒಬ್ಬ ವಿದ್ಯಾರ್ಥಿ ಒಂದು ಬಾರಿ ಕ್ಷೀನಿದರೆ ಮತ್ತೊಂದು ಬಾರಿ ಕ್ಷಿನಿ ಎಂದು ಒತ್ತಾಯ ಮಾಡುತ್ತೇವೆ. ದೇವರಲ್ಲಿದ್ದಾನೆ ಎಂಬ ಮಾತು? ಎಂಬುದಕ್ಕೆ ನಾನು ಎಂಬುದು ಎಂದು ಬಿಡುತ್ತೇವೋ ಆಗ ನಾವು ದೇವರನ್ನು ಕಾಣಬಹುದು.ಆಂಧ್ರ ಪ್ರದೇಶದ ಒಂದು ಗ್ರಾಮದಲ್ಲಿ ಇಬ್ಬರು ದಂಪತಿಗಳು ರಾಸಾಯನಿಕ ಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ PhD ಸಂಶೋದನೆ ಮುಗಿಸಿದವರಾಗಿದ್ದರು ಒಬ್ಬ ಜೋತಿಷಿ ಹೇಳಿದರಂತೆ ನಿಮ್ಮ ಹೊಟ್ಟೆಯಲ್ಲಿ ಇರುವ ಮಗುವನ್ನು ಕೊಲ್ಲಿದರೆ ನಿಮಗೆ ದೇವರ ಪತ್ಯಕ್ಷ ಆಗುತ್ತೇ (ದರ್ಶನ) ಎಂಬ ಮೂಡನಂಬಿಕೆಯನ್ನು ಆ ಸಂಶೋಧನಾ ಮುಗಿಸಿದ ದಂಪತಿಗಳು ಮೌಢ್ಯ ಆಚರಣೆ ಮಾಡಿದ್ದಾರೆ.

ಮೌಢ್ಯ ಆಚರಣೆ ಮಾಡುವ ವ್ಯಕ್ತಿಗೆ ದಂಡ ಸಹಿತ ಶಿಕ್ಷೆ ಕೋರ್ಟ್ ವಿಧಿಸುತ್ತದೆ.ಆದ್ದರಿಂದ ತಾವೆಲ್ಲ ಶಿಕ್ಷಣವಂತರು ಈ ರೀತಿಯ ಮೌಢ್ಯಗಳಿಗೆ ಒಳಗಾಗದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಂತೆ ಜೀವಿಸಿ ತಂದೆ ತಾಯಿಗೆ ಹೆಮ್ಮೆಯ ಮಕ್ಕಳಾಗಿ ಜೀವಿಸಿ ಎಂದು ಮಹಾಂತೇಶ್ ಮಸ್ಕಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರು ರಾಯಚೂರು ತಿಳಿಸಿದರು.

 

ಕಾರ್ಯಕ್ರಮದ ಹೂಗುಚ್ಚ ಇರುವಂತಹ ಸುಂದರವಾದ ನೆನಪನ್ನು ಬಿಟ್ಟು ಹೋಗಿ ಎಂದು ಮಹಾಂತೇಶ್ ಮಸ್ಕಿ ಕಸಾಪ ಅಧ್ಯಕ್ಷರು ರಾಯಚೂರು ಇವರು ಎಳೆ ಎಳೆಯಾಗಿ ಮೂಢ ನಂಬಿಕೆ ಬಗ್ಗೆ ಸ್ವ-ವಿವರವಾಗಿ ವಿವರಿಸಿದರು.

 

ನಂತರ ಸಾಮಾಜಿಕ ಮೂಢನಂಬಿಕೆಯ ಬಗ್ಗೆ ಉದಾಹರಣೆ ನೀಡುತ್ತಾ ಗುಲ್ಬರ್ಗಾ ಜಿಲ್ಲೆಯ ಒಂದು ತಾಂಡ ದಲ್ಲಿ ನಿಧಿಗಾಗಿ ಒಬ್ಬ ಮಹಿಳೆಯ ಚರ್ಮವನ್ನು ಸುಲಿದು ನೈವೇದ್ಯವಾಗಿ ಇರಿಸಲಾಗಿತ್ತು ಈ ರೀತಿ ಮಾಡುವುದರಿಂದ ಮಹಿಳೆಯ ಸಾವಾಯಿತು ವಿನಹ ಯಾವುದೇ ನಿಧಿ ಸಿಗದೆ ನಿರಾಶೆಗೊಂಡ ಪ್ರಸಂಗ ನಡೆದಿದೆ. ಇಂತಹ ಅನೇಕ ಬಗೆಯ ಮೂಢ ನಂಬಿಕೆಗೆ ದೂರುವ ಸಂದರ್ಭದಲ್ಲಿ ನಾವು ಜಾಗರೂಕರಾಗಿ ಇರುವುದು ಒಳಿತು ಎಂದು ಇಂದಿನ ಕಾರ್ಯಕ್ರಮದ ಮೂಢನಂಬಿಕೆ ವಿಷಯದ ಕುರಿತು ದೇವಾನಾಂ ಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಸ್ಕಿಯ ಪ್ರಾಂಶುಪಾಲರಾದ ಡಾ.ರಾಮಣ್ಣ ಎ ತುಂಬಾ ಅಚ್ಚುಕಟ್ಟಾಗಿ ಮಾತನಾಡಿದರು.

 

ನಂತರ ಖ್ಯಾತ ವೈದ್ಯರಾದ ಡಾಕ್ಟರ್. ಶಿವಶರಣಪ್ಪ ಇತ್ಲಿ ರವರು ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮದ ಬಗ್ಗೆ ಎಡಗೈ ಮತ್ತು ಬಲಗೈ ಎಂಬ ಭೇದ ಭಾವ ಎನ್ನದೇ ಎರಡು ಕೈಗಳು ಸಮಾನತೆಯ ಬಗ್ಗೆ ತರ್ಕ ಬದ್ದವಾಗಿ ಚರ್ಚಿಸಿ ಯಾವ ಕೈ ಶ್ರೇಷ್ಠವಲ್ಲ ಯಾವ ಕೈ ಕನಿಷ್ಠವಲ್ಲ , ಹಾಗೆಯೇ ಪ್ರಾಣಿ ಬಲಿ, ಕಲ್ಲು ದೇವರ ಪೂಜೆ ಮಾಡುವುದು ಎನ್ನುವಂತಹದನ್ನು ಶಿಬಿರಾರ್ಥಿಗಳ ಜೊತೆ ಚರ್ಚಿಸಿ ಮೂಢ ನಂಬಿಕೆ ಮತ್ತು ಶಿಸ್ತಿನಬಗ್ಗೆ ಎಲ್ಲರ ಮನಮುಟ್ಟುವಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಸಿದರು.

 

 

ಪೂಜೆ ಮಾಡುವ ಸಂದರ್ಭದಲ್ಲಿ ಬೆಕ್ಕು ಬೀಸುವ ಕಲ್ಲಿಗೆ ಕಟ್ಟಿದರೆ ಮಾತ್ರ ನಾವು ಮಾಡುವ ಪೂಜೆ ಪರಿಪೂರ್ಣ ಎಂಬಷ್ಟರ ಮಟ್ಟಿಗೆ ಮೂಢ ನಂಬಿಕೆ ಭಕ್ತಿಯನ್ನು ನಾವು ಹೊಂದಿದ್ದೇವೆ ಅದನ್ನು ಬಿಡಬೇಕು. ನಾವೆಲ್ಲ ವಿದ್ಯಾವಂತರು ನಾಲ್ಕಾರು ವಿಷಯದ ಬಗ್ಗೆ ಅರಿತವರಾಗಿ ಮೂಢ ನಂಬಿಕೆ ಪಾಲನೆ ಕಾನೂನು ಬಾಹಿರ ಎಂದು ವೀರೇಶ್ ಇತಿಹಾಸ ಸಹಾಯಕ ಪ್ರಾಧ್ಯಾಪಕರು ಮೌಢ್ಯ ಆಚರಣೆ ಬಗ್ಗೆ ತಿಳಿ ಹೇಳಿದರು.

 

ಕಾರ್ಯಕ್ರಮದ ಕೊನೆಯಲ್ಲಿ ಆಥಿತಿಗಳಾಗಿ ಆಗಮಿಸಿದ್ದ ಮಹಾಂತೇಶ್ ಮಸ್ಕಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರು ರಾಯಚೂರು ಮತ್ತು ಮಸ್ಕಿ ತಾಲೂಕಾ ಪತ್ರಕರ್ತರಾದ ಗ್ಯಾನಪ್ಪ ದೊಡ್ಡಮನಿ ಇವರನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಉಡುಗೊರೆ ನೀಡಿ ಸನ್ಮಾನಿಸಿ ಗೌರವಿಸಿದರು.

 

ಇಂದಿನ ಕಾರ್ಯಕ್ರಮವನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ತಂಡವು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.

 

 

ಇದೇ ಸಂದರ್ಭದಲ್ಲ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಕುಂತಲಾ ಗೋಪಾಲ ಪೂಜಾರಿ ಗ್ರಾಮ ಪಂಚಾಯಿತಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲ ಡಾ.ರಾಮಣ್ಣ ಎ. ಖ್ಯಾತ ವೈದ್ಯರಾದ ಡಾ. ಶಿವಶರಣಪ್ಪ ಇತ್ಲಿ,ಗ್ಯಾನಪ್ಪ ದೊಡ್ಡಮನಿ ವರದಿಗಾರರು,

ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಸಾವಿತ್ರಿ, ಶಿಬಿರಾಧಿಕಾರಿ ಶಿವಗ್ಯಾನಪ್ಪ , ಸಹಾಯಕ ಶಿಬಿರಾಧಿಕಾರಿ ಪ್ರಭುದೇವ ಸಾಲಿಮಠ, ಉಪನ್ಯಾಸಕರಾದ ಡಾ. ವಿಶ್ವನಾಥ, ವೀರನಗೌಡ, ಗ್ರಂಥಪಾಲಕ ಹುಸೇನಪ್ಪ, ದೈಹಿಕ ನಿರ್ದೇಶಕರಾದ ಸೈಯದ್ ಅಲಿ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*