ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯ : ಹನುಮಂತಪ್ಪ ವೆಂಕಟಾಪುರ

ಮಸ್ಕಿ, ತಾಲೂಕಿನ ಮೆದಿಕಿನಾಳ ಗ್ರಾಮದ ಮೂರನೇ ವಾರ್ಡಿನಲ್ಲಿ ಬರುವಂತಹ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಗಳನ್ನೂ ಒದಗಿಸುವಂತೆ ಪತ್ರಿಕಾ ಹೇಳಿಕೆ ಮೂಲಕ ದಲಿತ ಸಂಘರ್ಷ ಸಮಿತಿಯ ರಾಯಚೂರು ಜಿಲ್ಲಾ ಸಂಚಾಲಕರಾದ ಹನುಮಂತಪ್ಪ ವೆಂಕಟಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಮೂರನೇ ವಾರ್ಡಿನಲ್ಲಿ ಬರುವಂತಹ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಡಾ! ಬಿ ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ 2018-19 ರ ಸಾಲಿನಲ್ಲಿ ಡಾ! ಬಿ ಆರ್ ಅಂಬೇಡ್ಕರ್ ಭವನ ನಿರ್ಮಾಣದ ಕಾರ್ಯ ಆರಂಭವಾಗಿದ್ದು ಸುಮಾರು 12 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಕಾರ್ಯವು ಅರ್ಧಕ್ಕೆ ನಿಲ್ಲಿಸಲಾಗಿದೆ. ಪ್ರತಿಯೊಂದು ಭವನಗಳ ನಿರ್ಮಾಣವು 12 ತಿಂಗಳಲ್ಲಿ ಮುಕ್ತಾಯವಾಗಬೇಕೆಂದು ಸೂಚನೆಗಳಿದ್ದರೂ ಐದು ವರ್ಷಗಳು ಕಳೆದರೂ ಕಟ್ಟಡದ ನಿರ್ಮಾಣವು ನೆನೆಗುದಿಗೆ ಬಿದ್ದಿರುತ್ತದೆ. ಕಾರಣ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳ ನಿರ್ಲಕ್ಷತನವೇ ಇದಕ್ಕೆ ಮೂಲ ಕಾರಣವಾಗಿರುತ್ತದೆ. ಗ್ರಾಮದ ಮುಖ್ಯಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಇಲಾಖೆ ಅಥವಾ ಅಧಿಕಾರಿಗಳಿಂದ ಸ್ಪಂದಿಸುತ್ತಿಲ್ಲ ಆದ್ದರಿಂದ ಇದು ಇಲಾಖೆ ಮತ್ತು ಅಧಿಕಾರಿಗಳ ನಿರ್ಲಕ್ಷ ಮತ್ತು ಬೇಜವಾಬ್ದಾರಿತನದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಕಂಡುಬರುತ್ತದೆ. 2018 ನೇ ಸಾಲಿನ T S P ಯೋಜನೆ ಅಡಿಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಿದ್ದು ಶೌಚಾಲಯಕ್ಕೆ ಸೂಕ್ತ ನೀರಿನ ಸೌಲಭ್ಯ ಮತ್ತು ಇತರೆ ಸೌಲಭ್ಯಗಳು ಪೂರೈಕೆ ಮಾಡಿರುವುದಿಲ್ಲ. 12 ಲಕ್ಷಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಶೌಚಾಲಯದಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ಉಪಯೋಗವಾಗದೆ ಇರುವುದು ವಿಪರ್ಯಾಸದ ಸಂಗತಿ ಎಂದರೇ ತಪ್ಪಾಗುವುದಿಲ್ಲ. ಮೆದಿಕಿನಾಳ ಗ್ರಾಮದ ಮೂರನೇ ವಾರ್ಡಿನಲ್ಲಿ ಚರಂಡಿಗಳ ಅವ್ಯವಸ್ಥೆ ಈ ಗ್ರಾಮದಲ್ಲಿ ಕ್ರಮೇಣವಾಗಿ ಚರಂಡಿಗಳ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯವು ಸರಿಯಾಗಿರುವುದಿಲ್ಲ ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿರುವುದು ರಸ್ತೆಯುದ್ಧಕ್ಕೂ ಚರಂಡಿ ನೀರು ಹರಿಯುತ್ತಿರುವುದು ಇದು ಅಧಿಕಾರಿಗಳ ಗಮನಕ್ಕೆ ಬಂದರೂ ನಿರ್ಲಕ್ಷಿಸುತ್ತಿರುವುದು ಅವರ ಕಾರ್ಯಕ್ಕೆ ಶೋಭೆ ತರುವಂತಹದ್ದಲ್ಲಾ. ಹಾಗೆಯೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಮೂಲಭೂತ ಕೊರತೆಗಳಾದ ಕಾಂಪೌಂಡ್ ನಿರ್ಮಾಣ, ಗ್ರಂಥಾಲಯ, ಆಟದ ಸಾಮಗ್ರಿಗಳು ಕಟ್ಟಡದ ದುರಸ್ತಿ ಇನ್ನಿತರ ಸಮಸ್ಯೆಗಳು ಇರುತ್ತವೆ. 3 ನೇ ವಾರ್ಡಿನ ಮಕ್ಕಳ ಭವಿಷ್ಯದ ಜೊತೆ ಅಧಿಕಾರಿಗಳು ಆಟ ಆಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಪತ್ರಿಕಾ ಹೇಳಿಕೆ ಮೂಲಕ ದಲಿತ ಸಂಘರ್ಷ ಸಮಿತಿಯ ರಾಯಚೂರು ಜಿಲ್ಲಾ ಸಂಚಾಲಕರಾದ ಹನುಮಂತಪ್ಪ ವೆಂಕಟಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಹೇಳಿಕೆ 1

ವಾರ್ಡಿನಲ್ಲಿ ಅಂಗನವಾಡಿ ಕೊರತೆ,
ಬೀದಿದೀಪಗಳ ಕೊರತೆ,ಶುದ್ಧ ಕುಡಿಯುವ ನೀರಿನ ಘಟಕದ ಕೊರತೆ,ಬಸ್ ನಿಲ್ದಾಣದ ಕೊರತೆ,
ಸೋಲಾರ್ ದೀಪಗಳ ಅಳವಡಿಕೆ ಸೇರಿದಂತೆ
ಮೆದಿಕಿನಾಳ ಗ್ರಾಮದ ಮೂರನೇ ವಾರ್ಡಿನಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಶಾಸಕರು, ಸಂಬಂದಿಸಿದ ಇಲಾಖೆ ಮತ್ತು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ತಿಳಿಯುತ್ತದೆ. ಈಗಲಾದರೂ ಈ ಸಮಸ್ಯೆ ಕುರಿತು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆ ಸರ್ಪಡಿಸುವಂತೆ ಪತ್ರಿಕಾ ಹೇಳಿಕೆ ಮೂಲಕ ದಲಿತ ಸಂಘರ್ಷ ಸಮಿತಿಯ ರಾಯಚೂರು ಜಿಲ್ಲಾ ಸಂಚಾಲಕರಾದ ಹನುಮಂತಪ್ಪ ವೆಂಕಟಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೇಳಿಕೆ 2

ಗ್ರಾಮದ ವಿವಿಧ ಮೂಲಭೂತ ಸೌಕರ್ಯಗಳ ಕುರಿತು ಹಾಗೂ ಸಂಸ್ಥೆಯ ಬಗ್ಗೆ ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಹಾರಿಕೆಯ ಉತ್ತರ ನೀಡುತ್ತಾರೆ.ಆದ್ದರಿಂದ ಸಂಭಂದಪಟ್ಟ ಮೇಲಧಿಕಾರಿಗಳು ಮೂಲಭೂತ ಸೌಕರ್ಯ ಹಾಗೂ ಸಮಸ್ಯೆ ಸರಿಪಡಿಸಬೇಕೆಂದು ವಿನಂತಿಸುತ್ತೇನೆ.

Be the first to comment

Leave a Reply

Your email address will not be published.


*