ವಿದ್ಯಾರ್ಥಿಗಳಿಗೆ ‘ಹೆಬ್ಬುಲಿ’ ಹೇರ್ ಸ್ಟೈಲ್ ಮಾಡದಂತೆ ಸಲೂನ್ ಮಾಲೀಕರಿಗೆ ಪತ್ರ ಬರೆದ ಮುಖ್ಯೋಪಾಧ್ಯಾಯರು

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

CHETAN KENDULI

ಶಾಲೆಯ ಗಂಡುಮಕ್ಕಳು ಹೆಬ್ಬುಲಿಯಂತಹ ಹೇರ್ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಕಲಿಕೆಗೆ ಆಸಕ್ತಿತೋರಿಸುತ್ತಿಲ್ಲ.‌ ಆದ್ದರಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ‌ ವಿನಂತಿಸುತ್ತೇನೆ‌

-ಕುಲಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ.

ಬಾಗಲಕೋಟೆ:ವಿದ್ಯಾರ್ಥಿಗಳ “ಹೆಬ್ಬುಲಿ” ಕಟಿಂಗ್ ಸೇರಿದಂತೆ ವಿಚಿತ್ರ ಹೇರ್ ಸ್ಟೈಲ್ ಗೆ ಬೇಸತ್ತ ಮುಖ್ಯ ಶಿಕ್ಷಕರೊಬ್ಬರು ಅಂತಹ ಕಟಿಂಗ್ ಮಾಡದಂತೆ ಸಲೂನ್ ಮಾಲೀಕರಿಗೆ ಪತ್ರ ಬರೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಕುಲಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಾಜಿ ನಾಯಕ ಎಂಬ ಮುಖ್ಯ ಶಿಕ್ಷಕರು ಹೀಗೆ ಕುಲಹಳ್ಳಿ ಗ್ರಾಮದ ಸಲೂನ್ ಅಂಗಡಿಗಳಿಗೆ ಪತ್ರ ಬರೆದಿದ್ದಾರೆ.

ನಮ್ಮ ಶಾಲೆಯ ಗಂಡುಮಕ್ಕಳು ಹೆಬ್ಬುಲಿಯಂತಹ ಹೇರ್ ಕಟಿಂಗ್ ಮಾಡಿಸಿಕೊಂಡು ಬರುತ್ತಿದ್ದಾರೆ. ತಲೆಯ ಒಂದು ಬದಿ ಕೂದಲು ಬಿಟ್ಟು, ಇನ್ನೊಂದು ಬದಿ ಕೂದಲು ಉಳಿಸಿಕೊಂಡು ಕಟಿಂಗ್ ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ‌. ಇದರಿಂದ ವಿದ್ಯಾರ್ಥಿಗಳು ಕಲಿಕೆಗೆ ಆಸಕ್ತಿ ತೋರಿಸುತ್ತಿಲ್ಲ.‌ ಶೈಕ್ಷಣಿಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿಲ್ಲ. ಆದ್ದರಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ‌ ವಿನಂತಿಸುತ್ತೇನೆ‌. ಒಂದು ವೇಳೆ ವಿದ್ಯಾರ್ಥಿಗಳು “ಹೆಬ್ಬುಲಿ” ಹೇರ್ ಕಟಿಂಗ್ ಮಾಡಲು ಒತ್ತಾಯ ಮಾಡಿದರೆ… ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಪಾಲಕರ ಗಮನಕ್ಕೆ ತನ್ನಿ ಎಂದು ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಮುಖ್ಯ ಶಿಕ್ಷಕ ಉಲ್ಲೇಖಿಸಿದ್ದಾರೆ.

Be the first to comment

Leave a Reply

Your email address will not be published.


*