ಬೆಂಗಳೂರು : ವಿಧಾನ ಮಂಡಲದ 150 ನೇ ಅಧಿವೇಶನದಲ್ಲಿ ದಿನಾಂಕ 04-07-2023 ರಂದು ವಿಧಾನ ಪರಿಷತ್ತಿನಲ್ಲಿ ವಿಧಾನ ಪರಿಷತ್ತ ಸದಸ್ಯರಾದ ಡಾ. ತಳವಾರ ಸಾಬಣ್ಣಾ ಅವರು ಬೆಳಗಾವಿಯ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಿರ್ಮಾಣವಾದರು ಬಳಕೆಯಾಗದಿರುವ ಕುರಿತು ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನಿಸಿದರು.
ಬೆಳಗಾವಿ ನಗರದಲ್ಲಿ ಜನರ ಅನುಕೂಲಕ್ಕಾಗಿ ಮಹಾನಗರ ಪಾಲಿಕೆ ನಿರ್ಮಿಸಿದ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ಗೆ ತಗುಲಿದ ವೆಚ್ಚ ಎಷ್ಟು? ಮತ್ತು ನಗರದ ಮಧ್ಯೆ ನಿರ್ಮಿಸಿದ ಈ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ಜನರ ಬಳಕೆಗೆ ಒದಗಿಸಲಾಗಿದೆಯೆ? ಜನರ ತೆರಿಗೆಯಿಂದ ನಿರ್ಮಿಸಿದ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ವರ್ಷಗಳಾದರೂ ಬಳಕೆ ಮಾಡದಿರಲು ಕಾರಣಗಳೇನು? ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬಹುದೆ ಎಂದು ಪ್ರಶ್ನಿಸಿದರು .
ಇದಕ್ಕೆ ಲಿಖಿತವಾಗಿ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬಿ ಎಸ್ ಸುರೇಶ್ ರವರು ಬೆಳಗಾವಿ ನಗರದ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ಖರ್ಚು ವೆಚ್ಚದ ಲಿಖಿತ ಮಾಹಿತಿ ಅನುಭಂದದಲ್ಲಿ ಒದಗಿಸಿ.ಜನರ ಬಳಕೆಗೆ ಇನ್ನೂ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ಒದಗಿಸಲಾಗಿಲ್ಲ. ಸದರಿ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಲ್ಲಿ ಈಜುಕೊಳ ನಿರ್ಮಾಣ ಬ್ಯಾಡಮಿಂಟನ್ ಕೋರ್ಟ,ಜಿಮ್ ಕಟ್ಟಡ, ಕಲ್ಚರ್ ಹೌಸ್,ಟೇಬಲ್ ಟೆನ್ನಿಸ್ ಕೋರ್ಟ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
1)ಈಜುಕೊಳ ನಿರ್ಮಾಣ ಕಾಮಗಾರಿಗೆ ದಿನಾಂಕ 02-11-2016 ರಂದು ಕಾರ್ಯದೇಶ ನೀಡಲಾಗಿದ್ದು.15-09-2018ರಂದು ಪೂರ್ಣಗೊಂಡಿರುತ್ತದೆ.
2) ಬ್ಯಾಡಮಿಂಟನ್ ಕೋಟ್ ಕಾಮಗಾರಿಗೆ ದಿನಾಂಕ 15-03-2017 ರಂದು ಕಾರ್ಯದೆಶ ನೀಡಲಾಗಿದ್ದು. ದಿನಾಂಕ 29-08-2018 ರಂದು ಪೂರ್ಣ ಗೊಂಡಿರುತ್ತದೆ.
3)ಸ್ಪೋಟ್ರ್ಸ್ ಕಾಂಪ್ಲೆಕ್ಸ್ ಹಾಗೂ ಜಿಮ್ ಕಟ್ಟಡ ನಿರ್ಮಾಣ ಕಾಮಗಾರಿಗೆ ದಿನಾಂಕ 19-11-2017 ರಂದು ಕಾರ್ಯಾದೇಶ ನೀಡಲಾಗಿದ್ದು,ದಿನಾಂಕ 18-12-2018 ರಂದು ಕಾಮಗಾರಿ ಪೂರ್ಣಗೊಂಡಿದೆ.
4) ಕ್ಲಬ್ ಹೌಸ್ ನಿರ್ಮಾಣ ಕಾಮಗಾರಿಗೆ ದಿನಾಂಕ 04-12-2017 ರಂದು ಕಾಮಗಾರಿಗೆ ಕಾರ್ಯದೇಶ್ ನೀಡಲಾಗಿದ್ದು.ದಿನಾಂಕ 12-12-2018 ರಂದು ಕಾಮಗಾರಿ ಪೂರ್ಣಗೊಂಡಿದೆ.
5)ಟೇಬಲ್ ಟೆನ್ನಿಸ್ ಕೋರ್ಟ್ ನಿರ್ಮಾಣ ಕಾಮಗಾರಿಗೆ ದಿನಾಂಕ 14-01-2020ರಂದು ಕಾರ್ಯದೆಶ್ ನೀಡಲಾಗಿದ್ದು, ದಿನಾಂಕ 12-04-2020 ರಂದು ಕಾಮಗಾರಿ ಪೂರ್ಣಗೊಂಡಿರುತ್ತದೆ.
ಸದರಿ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ಕಾಮಗಾರಿಗಳು ಕೆಲಸಗಳು 2020 ನೇ ಸಾಲಿನಲ್ಲಿ ಮುಕ್ತಾಯಗೊಂಡಿದ್ದರು.2020 ನೆ ಸಾಲಿನ ಮಾರ್ಚ್ ತಿಂಗಳಿನಿಂದ ಕೋವಿಡ್ 19 ಸಾಂಕ್ರಾಮಿಕ ರೋಗ ಪ್ರಾರಂಭವಾದ ಕಾರಣ ಸಾರ್ವಜನಿಕರ ಹಿತ ದೃಷ್ಟಿಯಿಂದ ಮತ್ತು ಈಜುಕೊಳಕ್ಕೆ ನೀರಿನ ಕೊರತೆ ಇರುವ ಕಾರಣ ಸ್ಪೋಟ್ರ್ಸ್ ಕಾಂಪ್ಲೆಕ್ಸನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಿರುವುದಿಲ್ಲ.
ತದನಂತರ ಸಾರ್ವಜನಿಕರ ಉಪಯೋಗಕ್ಕೆ ಈಜುಕೊಳ ವಾರ್ಷಿಕ ನಿರ್ವಹಣೆ ಕುರಿತು ದಿನಾಂಕ -29-03-2022ರಂದು ಟೆಂಡರ್ ಕರೆಯಲಾಗಿದ್ದು.ಅದರಲ್ಲಿ ಮೇ ಪ್ರಾಯಿಡ್ ಎಜುಕೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ ಸಂಘ ಇವರಿಗೆ ದಿನಾಂಕ 24-12-2022 ರಂದು ಒಪ್ಪಿಗೆ ಪತ್ರ ನೀಡಲಾಗಿರುತ್ತದೆ.ಆದರೆ ಸದರಿ ಗುತ್ತಿಗೆದಾರರು ಭದ್ರತಾ ಠೇವಣಿ ಒದಗಿಸದೆ ಇರುವುದರಿಂದ ಪರಿಷತ್ ಸಭೆಯ ಅನುಮೋದನೆ ಪಡೆದು ಸದರಿ ಕಾಮಗಾರಿಗೆ ಮರು ಟೆಂಡರ್ ಕರೆಯಲು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಲಿಖಿತವಾಗಿ ಉತ್ತರಿಸಿದರು.
Be the first to comment