ಲಿಂಗಸುಗೂರ ಪಟ್ಟಣದ ಮೆಟ್ರಿಕ ನಂತರದ ಪದವಿ ವಸತಿ ನಿಲಯಗಳ ಸಮಸ್ಯೆ ಡಾ. ಬಿ. ಆರ್. ಅಂಬೇಡ್ಕರ ಮೆಟ್ರಿಕ ನಂತರದ ವಸತಿ ನಿಲಯ(ಪದವಿ) ವಸತಿ ನಿಲಯದಲ್ಲಿ ವಾರ್ಡನ ದರ್ಬಾರು ಮೂಲಭೂತ ಸೌಕರ್ಯ ಇಲ್ಲದೆ ವಸತಿ ನಿಲಯದ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು ಇಲ್ಲದಂತೆ.ಪರದಾಡುವಂತಾಗಿದೆ ಲಿಂಗಸುಗೂರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಳೆದ ಎರಡು ವರ್ಷದಿಂದ ತಾಲೂಕಿನಲ್ಲಿ ಖಾಯಂ ಸಮಾಜ ಕಲ್ಯಾಣ ಅಧಿಕಾರಿಳಿಲ್ಲದೆ ರಾಯಚೂರನಿಂದ ಮೂರು ಇಲಾಖೆ ನೋಡುವ ಅಧಿಕಾರಿ ಪ್ರಭಾರಿಯಾಗಿರುವ ಕಾರಣ ತಾಲೂಕಿನ ಹಲವಾರು ವಸತಿ ನಿಲಯಗಳ ಅನೇಕ ಸಮಸ್ಯೆಗಳಿದ್ದು ವಾರ್ಡನಗಳ ದರ್ಬಾರ ನಡೆಯುತ್ತಿದ್ದು ವಸತಿ ನಿಲಯದ ವಿದ್ಯಾರ್ಥಿಗಳು ನೋವುಅನುಭವಿಸುವಂತಾಗಿದೆ
ಇಲಾಖೆಗೆ ಬ೦ದ ಸರಕಾರದ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳದ ವಾರ್ಡನಗಳು ಕರ್ತವ್ಯ ಲೋಪ ಎಸಗುತ್ತಿದ್ದು ವಸತಿ ನಿಲಯದ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದ್ದಾರೆ. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸರಿಯಾಗಿ ಸಮಯಕ್ಕೆ ಉಪಹಾರ ಊಟ ಕೊಡುತ್ತಿಲ್ಲಾ ಎಂದು ಎಸ್.ಎಫ್.ಐ. ಸಂಘಟನೆ ನೇತೃತ್ವದಲ್ಲಿ ಬೃಹತ ಪ್ರತಿಭಟನೆಯನ್ನು ವಸತಿ ನಿಲಯದ ನೂರಾರು ವಿದ್ಯಾರ್ಥಿನಿಯರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಸತಿ ನಿಲಯದಲ್ಲಿ.
ಕನಿಷ್ಠ ಅಗತ್ಯ ಮೂಲಭೂತ ಸೌಕರ್ಯಗಳ ಇಲ್ಲದೆ ಹಂದಿ ಗೂಡಾಗಿದ್ದು, ವಸತಿ ನಿಲಯದಲ್ಲಿ ಊಟದ ಮೇನು ಫಲಕ ಹಾಕದೆ ಸರಿಯಾದ ಸಮಯಕ್ಕೆ ಉಟ ನೀಡುತ್ತಿಲ್ಲಾ ಸ್ವಚ್ಛತೆ ಸೌಕರ್ಯಗಳ ಬಗ್ಗೆ ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ವೇದ ಅಶ್ವಿನಿ, ಅನು, ರಂಗಮ್ಮ, ಪ್ರಿಯಾಂಕ ಅವಮಾನ ಮಾಡಿ ಮಾನಸಿಕವಾಗಿ ಕುಗ್ಗಿಸುವ ಕೆಲಸ ನಡೆಸಿದರು ಇಲಾಖೆ ಅಧಿಕಾರಿಗಳು ಕಣ್ಣ ಮುಚ್ಚಿ ಕುಳಿತಿದ್ದಾರೆ.
ವಸತಿನಿಲಯಗಳಲ್ಲಿ ಸ್ನಾನ ಗ್ರಹ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಾ ಕಾರಣ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಕೂಡಲೆ ವ್ಯವಸ್ಥೆ ಮಾಡುವಂತೆ ಎಸ್ ಎಫ್ ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರ ನಾಯಕತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಜರುಗಿತು. ಮುಖಂಡ ಪವನ ಕಮದಾಳ, ಬಸ್ಸಮ್ಮ ಉಷಾ, ಲಕ್ಷ್ಮೀ ಮಹಾದೇವಿ ರಾಜೇಶ್ವರಿ ಯಲ್ಲಮ್ಮ, ಸುನಿತಾ ಶರಣಮ್ಮ ವಸತಿ ನಿಲಯದ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Be the first to comment