CHETAN KANDULIನಮ್ಮದು ವಿಜಯಪುರ ಜಿಲ್ಲೆಯ ಅಥರ್ಗಾ. ತಂದೆ-ತಾಯಿ ರಾಯಚೂರಿನಲ್ಲಿದ್ದಾರೆ. ನಾನೂ ಪ್ರಾಥಮಿಕ, ಪ್ರೌಢ, ಪಿಯುಸಿ ವ್ಯಾಸಂಗ ಅಲ್ಲಿಯೇ ಮಾಡಿದ್ದೇನೆ. ರಜೆಗೆ ಊರಿಗೆ ಬಂದಾಗ ದೊಡ್ಡಪ್ಪಂದಿರು ಲಿಂಬೆ ಕೃಷಿ ಮಾಡುವುದನ್ನು ನೋಡಿ, ನಾನೂ ಭಾಗಿಯಾಗುತ್ತಿದ್ದೆ. ಹಣ್ಣು ಬೆಳೆಗಾರ ರೈತರಿಗೆ ನಾನು ನೆರವಾಗಬೇಕು, ಅದರಲ್ಲೂ ಲಿಂಬೆ ಕೃಷಿಗೆ ಹೆಚ್ಚು ಉತ್ತೇಜನ ಸಿಗುವಂತಾಗಬೇಕು ಎಂಬ ಕನಸಿದೆ. ಅದಕ್ಕಾಗಿ ಹಣ್ಣು ವಿಜ್ಞಾನದಲ್ಲಿ ಪಿಎಚ್ಡಿ ಮಾಡುತ್ತಿದ್ದೇನೆ. ಸಧ್ಯ ಎಂಎಸ್ಸಿಯಲ್ಲಿ ಆರು ಚಿನ್ನದ ಪದಕ ಬಂದಿದ್ದು, ಇದಕ್ಕೆ ನನ್ನ ತಂದೆ-ತಾಯಿ ಸಹಕಾರ ಹಾಗೂ ನನ್ನ ಇಬ್ಬರು ದೊಡ್ಡಪ್ಪಂದಿರು ಪ್ರೇರಣೆ.
ಬಾಗಲಕೋಟೆ :ವ್ಯಾಸಂಗಕ್ಕೆ ತಂದೆ-ತಾಯಿಯ ಪೂರ್ಣ ಸಹಕಾರ ಇದ್ದು ಕೃಷಿ ಬಗ್ಗೆ ಹೆಚ್ಚಿನ ಒಲವು ಇದೆ. ಹೊಲದಲ್ಲಿ ದೊಡ್ಡಪ್ಪಂದಿರು ಬೆವರು ಸುರಿಸಿ ದುಡಿಯುತ್ತಿದ್ದ ತೋಟಗಾರಿಕೆ ಕೃಷಿಗೆ ಮನಸೋತವಳು. ರೈತರಿಗೆ ಕಡಿಮೆ ದುಡಿಮೆಯಲ್ಲಿ ಹೆಚ್ಚು ಆದಾಯ ಬರಬೇಕೆಂಬ ಕನಸು ಕಂಡವಳು.ಎಂಎಸ್ಸಿ ತೋಟಗಾರಿಕೆ ಕೃಷಿ ವ್ಯಾಸಂಗದ ಶ್ರಮಕ್ಕೆ ಅವಳಿಗೆ ಈಗ ಬರೋಬ್ಬರಿ ಆರು ಚಿನ್ನದ ಪದಕಗಳ ಗರಿ.ಅವಳೆ ಅನುಷಾ.
ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಹಣ್ಣಿನ ಕೃಷಿ ಹೆಚ್ಚು. ಚಿಕ್ಕವಳಿದ್ದಾಗಿನಿಂದಲೂ ಲಿಂಬೆ ಕೃಷಿ ನೋಡುತ್ತ ಬಂದಿರುವ ಅನುಷಾ, ಬೆಂಗಳೂರಿನ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ಜೆಆರ್‌ಎಫ್ ಪ್ರವೇಶ ಪರೀಕ್ಷೆಯಲ್ಲಿ 76ನೇ ರ್ಯಾಂಕ್ ನೊಂದಿಗೆ, ಎಂಎಸ್ಸಿ ಹಣ್ಣು ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ. ಎಂಎಸ್ಸಿ ಪ್ರವೇಶ ಪರೀಕ್ಷೆಯಲ್ಲೂ ರಾಜ್ಯಕ್ಕೆ 11ನೇ ರ್ಯಾಂಕ್, ರಾಷ್ಟ್ರೀಯ ಎಸ್‌ಆರ್‌ಎಫ್ ಪ್ರವೇಶ ಪರೀಕ್ಷೆಯಲ್ಲಿ 10ನೇ ರ್ಯಾಂಕ್, ಪಿಎಚ್ಡಿ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದು, ಎಂಎಸ್ಸಿ ಹಣ್ಣು ವಿಜ್ಞಾನದಲ್ಲಿ ಇಡೀ ತೋಟಗಾರಿಕೆ ವಿವಿಗೆ ಮೊದಲ ಸ್ಥಾನ ಪಡೆದು, 6 ಚಿನ್ನದ ಪಡೆದ ಮುಡಿಗೇರಿಸಿಕೊಂಡಿದ್ದಾರೆ.
Be the first to comment