ಸುಪ್ರೀಂ ಕೋರ್ಟ್ ಆದೇಶ ಹಾಗು ಪಿಟಿಸಿ – ಕಾಯ್ದೆ ವಿರುದ್ದದ ತೀರ್ಪು ಕುರಿತು ತಿದ್ದುಪಡಿ ಕಾಯಿದೆಯನ್ನು ಕಂಡಿಸುತ್ತೀವೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅದ್ಯಕ್ಷ ಡಾ.ಎನ್.ಮೂರ್ತಿ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು .
ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅವರು ತಿಳಿಸಿದ್ದಾರೆ ಮೀಸಲಾತಿ ಅನ್ನುವುದು , ಗಾಂದೀಜೀ ಅವರು ಮತ್ತು ಅಂಬೇಡ್ಕರ್ ಅವರ ಪೂನಾದಲ್ಲಿ ನಡೆದ ಒಪ್ಪಂದ ಎಂದು , ಮೀಸಲಾತಿಗೆ ಒಳಪಟ್ಟ ಜನಾಂಗ ಶೋಶಣೆ ಯಿಂದ ಅವರು ಬ್ರದುಕು ಕಟ್ಟಿಕೊಳ್ಳಲು ಸರ್ಕಾರದ ನೀತಿ ಎಂದು ಎನ್.ಮೂರ್ತಿ ತಿಳಿಸಿದರು.
ಪರಿಶಿಷ್ಟ ಜಾತಿಗಳು ಶತಮಾನಗಳಿಂದ ಭಾರತದಲ್ಲಿ ತುಳಿತಕ್ಕೆ ಒಳಪಟ್ಟದ್ದರು, ಅವರು ಸಮಾಜದ ಸಮಾನವಾಗಿ ಬದಕಲು , ಪರಿಶಿಷ್ಟರಿಗೆ ಮೂಲಭೂತ ಹಕ್ಕು ಎಂದರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅನ್ಯಾಯವಾಗುತಿದೆ ಹಾಗಾಗಿ ಕ್ರೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ಆಗ್ರಹಿಸಿ ರಾಜ್ಯಾದ್ಯಂತ ಭಾರಿ ಜನಾಂಧೋಲನ ಪ್ರತಿಭಟನಾ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಕ್ಕದ ರಾಜ್ಯ ಆಂದ್ರಪ್ರದೇಶದ ದಲ್ಲಿ ಶೇ 60 ರಷ್ಟು ಮೀಸಲಾತಿ ನೀಡಿದ್ದಾರೆ , ತಮಿಳುನಾಡುನಲ್ಲಿ 70 ರಷ್ಟು ಮೀಸಲಾತಿ ನೀಡಿದ್ದಾರೆ ಕರ್ನಾಟಕ ದಲ್ಲಿ ಏಕೆ ನೀಡಬಾರದೆಂದು ಸರ್ಕಾರವನ್ನು ಡಿಮಾಂಡ್ ಮಾಡಿದರು.
ಮಾರ್ಚ 3 ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ರಾಲಿ ಹಮ್ಮಿಕೊಳ್ಳಲಾಗಿದೆ ಎಂದರು
Be the first to comment