ರಾಯಚೂರ :- ದಿನಾಂಕ 14/06/2023 ರಂದು ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ, ನೀಲವಂಜಿ ಗ್ರಾಮದ ಹೊಲದಲ್ಲಿ ಬೋರ್ವೆಲ್ ಹಾಕಿ ಬೋರ್ವೆಲ್ ವಾಹನದ ಪಕ್ಕದಲ್ಲಿ ಮಲಗಿಕೊಂಡಿದ್ದ, ಮೂರು ಜನ ಕಾರ್ಮಿಕರಾದ, ವಿಷ್ಣು, ಬಲರಾಮ್, ಹಾಗೂ ಶಿವರಾಂ ಎಂಬುವರ ಮೇಲೆ, ಜೆಸಿಬಿ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.
ಸದರಿ ಮೃತ ದೇಹಗಳನ್ನು ಪಿಎಂಇ ಮಾಡುವ ಕುರಿತು ಆಸ್ಪತ್ರೆಗೆ ರವಾನಿಸಿದ್ದು, ಅಪಘಾತ ಪಡಿಸಿದ ಜೆಸಿಬಿಯನ್ನು ಪೊಲೀಸ್ ಠಾಣೆಗೆ ತಂದಿದ್ದು ಇರುತ್ತದೆ. ಉಮಾ ಬೋರ್ವೆಲ್ಸ್ ಎಂಬ ಹೆಸರಿನ ಏಜೆನ್ಸಿಯು ಸಿರವಾರದಲ್ಲಿದ್ದು, ಅದರ ಮಾಲೀಕ ಆಂಧ್ರಪ್ರದೇಶದ ರಾಜು ಎಂಬುದಾಗಿ ಬೋರ್ವೆಲ್ ಕೊರೆಸುವ ಏಜೆಂಟ್ ರಾಘವೇಂದ್ರ ಎಂಬುದಾಗಿ ತಿಳಿದು ಬಂದಿದೆ.
Be the first to comment