ಕೊಪ್ಪಳ: ಸಂಘಟನೆಕರಾರು, ಮಾಹಿತಿ ಹಕ್ಕು ಹೋರಾಟಗಾರರು ಬಗ್ಗೆ ಅವಹೇಳನಕಾರಿ ಮಾತನಾಡಿದ ಕಾರಟಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಧಿಕಾರಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಭಾರತಿಯ ಪ್ರಜಾ ಸೇನೆ ಜಿಲ್ಲಾಧ್ಯಕ್ಷ ಪಂಪಾಪತಿ ಸಿದ್ದಾಪುರ ತಿಳಿಸಿದ್ದಾರೆ,
ಸಂಘಟನೆಕರಾರು ಮಾಹಿತಿ ಹಕ್ಕು ಹೋರಾಟಗಾರರು ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಾರೆ. ಕರ್ತವ್ಯದಲ್ಲಿದ್ದಾಗ ಕಚೇರಿಗೆ ಬಂದು ಕಿರಿ ಕಿರಿ ಉಂಟು ಮಾಡುತ್ತಿದ್ದಾರೆಂದು ಅವರಿಗೆ ಮಾಡಲು ಕೆಲಸವಿಲ್ಲ ಎಂದು ಇ ಓ ನರಸಪ್ಪ ಹೇಳಿಕೆ ನೀಡಿದ್ದಾರೆ,
ಅವರ ಹೇಳಿಕೆ ಕುರಿತು ಭಾರತಿಯ ಪ್ರಜಾ ಸೇನೆಯ ಜಿಲ್ಲಾಧ್ಯಕ್ಷ ಪಂಪಾಪತಿ ಪ್ರಶ್ನೆಸಿದ್ದಾರೆ.ಹಾಗಾದರೆ ಭ್ರಷ್ಟಚಾರದ ಬಗ್ಗೆ ಮಾಹಿತಿ ಕೇಳಲು ಬಾರದು ಎಂದು ಯಾವುದಾದರು ಕಾನೂನು ಇದಿಯಾ ಎಂದು ಪ್ರಶ್ನೆಸಿದ್ದಾರೆ,
ಕಾರಟಗಿ ನೂತನ ತಾಲೂಕು ಆಗಿ ಆಡಳಿತ ಘೋಷಣೆ ಆಗಿದ್ದರಿಂದ ಅಭಿವೃದ್ಧಿ ಪಡಿಸಲು ಚುನಾಯಿತ ಜನ ಪ್ರತಿನಿಧಿಗಳು ಸ್ಥಳೀಯ ಸಂಘ, ಸಂಸ್ಥೆಗಳು ಸಹಕಾರ ಅಗತ್ಯವಿರುತ್ತದೆ, ಯಾವಾಬ್ಬ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದರೆ ಅದನ್ನು ಸರಿ ಪಡಿಸುವ ಕೆಲಸ ಸಂಘಟನೆ, ಹೋರಾಟಗಾರರುಗಿದೆ ಅದನ್ನು ಕೆಲ ಅಧಿಕಾರಿಗಳು ಗಮನದಲ್ಲಿರಲಿ ಎಂದು ತಿಳಿಸಿದ್ದಾರೆ,
ಕಾರಟಗಿ ತಾಲೂಕಿನಲ್ಲಿ 13 ಗ್ರಾಮ ಪಂಚಾಯತಿಯಲ್ಲಿ ಕೆಲ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಸಂಬಂಧ ಪಟ್ಟಕೆಲ ಅಧಿಕಾರಿಗಳಿಗೆ ಮಾಹಿತಿ ಕೇಳಲು ಹೋದರೆ ತಮ್ಮ ಭ್ರಷ್ಟಾಚಾರದ ಬಗ್ಗೆ ಮರೆ ಮಾಚಲು ಹಣದ ಬೇಡಿಕೆ ಇಡುತ್ತಾನೆ ಎಂದು ಹೇಳಿ ದಾರಿ ತಪ್ಪಿಸುವ ಕೆಲಸ ಕೆಲ ಭ್ರಷ್ಟ ಅಧಿಕಾರಿಗಳು ಮಾಡುತ್ತಿದ್ದಾರೆ,ಸರ್ಕಾರದ ಅನುದಾನ ಸರಿಯಾಗಿ ಅಭಿವೃದ್ಧಿ ಕೆಲಸಕ್ಕೆ ಉಪಯೋಗಿಸಿದರೆ ಯಾವ ಮಾಹಿತಿಯು ಕೇಳುವುದಿಲ್ಲಾ, ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿಯನ್ನು ಮಾಡದೆ, ಗ್ರಾಮ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತರದೆ ಸರ್ಕಾರ ಹಣವನ್ನು ಎತ್ತುವಳಿ ಮಾಡಿದರೆ, ಮಾಹಿತಿ ಹಕ್ಕು ನಲ್ಲಿ ಹೋರಾಟಗಾರರು ಮಾಹಿತಿ ಕೇಳುತ್ತಾರೆ ತಪ್ಪೇನಿದೆ,
ಗ್ರಾಮ ಪಂಚಾಯತಿಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ಸರಿ ಪಡಿಸುವ ಕೆಲಸ ಅವರು ಮಾಡಬೇಕು ಅದನ್ನು ಬಿಟ್ಟು ಸಂಘಟನೆಕಾರರ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡಿದ ಇ ಓ ನರಸಪ್ಪ ಇವರನ್ನು ಈ ಕೂಡಲೇ ಅಮಾನತ್ತು ಮಾಡಬೇಕೆಂದು ಅಗ್ರಹಿಸಿದ್ದಾರೆ,
ಮಾಹಿತಿ ಬಗ್ಗೆ ಸಂಘಟನೆಕಾರರಿಗೆ, ಮಾಹಿತಿ ಹಕ್ಕು ಹೋರಾಟಗಾರರಿಗೆ ಸಂಬಂಧ ಪಟ್ಟ ಕೆಲ ಭ್ರಷ್ಟ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದವರ ವಿರುದ್ದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಇದೆ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ,
Be the first to comment