ಸಂಜಿವ ಕುಮಾರ್ ಕಂದಗಲ್ಲ 28 ರಂದು ಮಾಜಿ.ಸಿಎಂ.ಸಿದ್ರಾಮಯ್ಯ ಸಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ.

ಲಿಂಗಸೂಗೂರು ಪಟ್ಟಣದ ಪತ್ರಿಕಾ ಭವನದಲ್ಲಿ ಸಂಜಿವ ಕುಮಾರ್ ಕಂದಗಲ್ಲ ಅವರು ಸುದ್ದಿ ಗೂಷ್ಟಿಯಲ್ಲಿ ಮಾನಾಡಿದ ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ಲಿಂಗಾಯತ ವಿರೋಧಿ ನೀತಿಯಿಂದ ಬಿಜೆಪಿ ಪಕ್ಷಕ್ಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ 28 ರಂದು ಕಾಂಗ್ರೆಸ್ ಪಕ್ಷದ ಮಾಜಿ.ಸಿಎಂ. ಸಿದ್ರಾಮಯ್ಯ ಅವರ ಮುಂದೆ ಲಿಂಗಸುಗೂರ ಹಾಲಿ ಶಾಸಕರಾದ ಡಿ.ಎಸ್ ಹುಲಗೇರಿ ಅವರ ಅಭಿವೃದ್ಧಿ ಕೆಲಸವನ್ನು ಮೆಚ್ಚಿ ಅವರ ಸರಳತೆ ಪ್ರಾಮಾಣಿಕತೆಯನ್ನು ಮೆಚ್ಚಿ ಸಂಜೀವ್ ಕುಮಾರ ಅವರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಲಿಂಗಾಯತ ಸಮಾಜದ ಹಿರಿಯ ಮುಂಖಡರುಗಳು ಬಿಜೆಪಿ ಪಕ್ಷದಲ್ಲಿ ಇದ್ದೆವು ಆದರೆ ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯವಲ್ಲಿ ಪಕ್ಷ ಮುಖ್ಯ ಎಂದು ಕೆಲಸ ಮಾಡಿ ಆದರೆ ಇಂದು ಕೆಲವು ವ್ಯಕ್ತಿಗಳಿಗಾಗಿ ಪಕ್ಷವನ್ನು ಕಟ್ಟಲಾಗುತ್ತಿದೆ ಹಾಗೂ ಇಂದು ರಾಜ್ಯ ಬಿಜೆಪಿ ಮುಖ್ಯ ಕಛೇರಿಯನ್ನು ಕೆಲವು ವ್ಯಕ್ತಿಗಳು ಪಕ್ಷವನ್ನು ನಿಯಂತ್ರಿಸುತ್ತಿದ್ದಾರೆ, ಹಾಗೂ ಬಿಜೆಪಿ ಪಕ್ಷದಲ್ಲಿ ಇಂದು ಕೆಲವು ವ್ಯಕ್ತಿಗಳ ಹಿತಾಸಕ್ತಿಗಾಗಿ ಲಿಂಗಾಯತ: ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಹಾಗು ಮಾಜಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಯಂತಹ ಧೀಮಂತ ನಾಯಕರಿಗೆ ಅವಮಾನ ಮಾಡಲಾಗುತ್ತಿದೆ ಹಾಗೂ ಲಿಂಗಾಯತ ನಾಯಕರಿಗೆ ಅವಮಾನ ಮಾಡಿರುವುದು ನಮ್ಮ ಲಿಂಗಾಯತ ಸಮಾಜದ ಅನೇಕ ಲಿಂಗಾಯತ ಸಮಾಜದ ಮಾಜಿ ಮುಖ್ಯಮಂತ್ರಿಗಳು ಮಂತ್ರಿಗಳು ಹಾಗೂ ಶಾಸಕರಿಗೆ ಟಿಕೇಟನ್ನು ವಂಚಿಸಿ ಕೆಲವು ಕೆಲವು ಬಿಜೆಪಿಯ ನಾಯಕರು ಪಕ್ಷವನ್ನು ತಮ್ಮ ಕಪಿ ಮುಷ್ಠಿಯಲ್ಲಿ ಇಟ್ಟುಕೊಂಡು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ದುರುದ್ದೇಶವನ್ನು ಹೊಂದಿದಾರೆ

ರಾಜಕೀಯ ನಾಯಕರನ್ನು ಬಿಜೆಪಿ ಪಾರ್ಟಿಯಲ್ಲಿ ಗೌರವಯುತವಾಗಿ ನಡೆಸಿಕೊಳ್ಳದಿರುವುದು ಬಿಜೆಪಿ ಪಕ್ಷದ ಸಿದ್ಧಾಂತವಾಗಿದೆ. ಇದಕ್ಕೆ ಲಿಂಗಾಯತ ಸಮಾಜದ ನಾಯಕರು ಯುವಕರು ತಾಯಂದಿರು ಹಾಗೂ ಅಕ್ಕ ತಂಗಿಯರು ಕಾಂಗ್ರೆಸ್ ಪಕ್ಷಕ್ಖೆ ಮತ ಚಲಾಯಿಸುವುದರ ಮುಖಾಂತರ ಉತ್ತರ ನೀಡಬೇಕು.

ಇದಲ್ಲದೆ ರಾಜ್ಯದಲ್ಲಿ ಬಹುದೊಡ್ಡ ಸಮಾಜಗಳಾದ ಕುರುಬ ಸಮಾಜದ ನಾಯಕ ಸಮಾಜ, ಪರಿಶಿಷ್ಠ ಜಾತಿ ಹಾಗೂ ಅಲ್ಪಸಂಖ್ಯಾತರು ಈ ಸಮಾಜಗಳಲ್ಲಿರುವ ಮುಖಂಡರುಗಳಾದ ಮಾಜಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರನ್ನು ಸೋಲಿಸುವುದು ಹಾಗೂ ನಾಯಕ ಸಮಾಜದ ಸತೀಶ ಜಾರಕಿಹೊಳಿ ಅವರನ್ನು ಸೋಲಿಸಬೇಕೆಂಬ ಟಾರ್ಗೆಟ್ ಇಟ್ಟುಕೊಂಡಿದ್ದಾರೆ ಅದೇ ರೀತಿ ಪರಿಶಿಷ್ಟ ಜಾತಿಯ ಮುಖಂಡರು ಹಾಗೂ ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಲು ಗುರಿಯಾಗಿಟ್ಟುಕೊಂಡಿರುವುದು ಹಾಗೂ ಅದೇ ರೀತಿ ಲಿಂಗಾಯತ ಸಮಾಜದವರಾದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ್ ಹಾಗೂ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿಯವರನ್ನು ಸೋಲಿಸಲು ಗುರಿಯನ್ನು ಇಟ್ಟು ಕೊಂಡಿರುತ್ತಾರೆ ಇಂತಹ ದ್ವೇಷದ ರಾಜಕೀಯ್ ಮಾಡುವ ಬಿಜೆಪಿ.ಪಕ್ಷಕ್ಕೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು. ಈ ಸಂದರ್ಭದಲ್ಲಿ ಗುರಪ್ಪ ಸಾಹುಕಾರ ಏಕಬಲ್ ಸಾಬ್. ಶಂಕರಗೌಡ ಗುರುರಾಜ. ಬಾಬಾ ಇನ್ನಿತರರು ಇದ್ದರು.

Be the first to comment

Leave a Reply

Your email address will not be published.


*