ಜೇವರ್ಗಿ, ದಿನಾಂಕ 10.05.2023 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೇವರ್ಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಸ್ವತಂತ್ರವಾಗಿ ಮತ್ತು ಶರತ್ತ ಬದ್ಧವಾಗಿ ಬೆಂಬಲ ನೀಡುವುದಾಗಿ ಪಟ್ಟಣದಲ್ಲಿ ಮೋಹಿನುದ್ದೀನ್ ಇನಾಮ್ದಾರ್ ತಿಳಿಸಿದರು.
8 ವರ್ಷಗಳಿಂದ ಜೇವರ್ಗಿ ಮತ್ತು ಯಡ್ರಾಮಿ ತಾಲೂಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಶಿಕ್ಷಣಕ್ಕೆ ನ್ಯಾಯ ಪರವಾಗಿ ಹೋರಾಟಗಳು ಚಳುವಳಿಗಳು ಸಾಮಾಜಿಕ ಸೇವೆ ಮಾಡುತ್ತಾ ಬಂದಿದ್ದೇನೆ.
ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ನಮ್ಮ ಸಮಾಜದ ಒಳಿತಿಗಾಗಿ ಕೋಮುವಾದಿ ಬಿಜೆಪಿ ಪಕ್ಷವನ್ನು ಪೋಲಿಸುವ ಸಲುವಾಗಿ ಮುಖಂಡರೆಲ್ಲರೂ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸೋಣ ಎಂದು ಸರ್ವಾನುಮತದಿಂದ ನಿರ್ಣಯಿಸಲಾಗಿದ್ದು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವುದಾಗಿ ತಿಳಿಸಿದರು.
ಷರತ್ತು ಬದ್ಧ ಬೇಡಿಕೆಗಳು 1.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಪುರಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು
2. ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಸರ್ಕಾರಿ ವಸತಿ ಶಾಲೆಗಳ ಅಭಿವೃದ್ಧಿಗೆ ಕಾಳಜಿ ವಹಿಸಬೇಕು.
3. ಅಲ್ಪಸಂಖ್ಯಾತರಿಗೆ ಸಂಬಂಧಪಟ್ಟಂತೆ ದರ್ಗಾ ಆಶೂರ್ ಖಾನ್ ಮಸೀದಿ ಈದ್ಗಾ ಮತ್ತು ಕಬ್ರ್ ಸ್ಥಾನಗಳ ಕಾಂಪೌಂಡ್ ವಾಲ್ಗಳು ಮಾಡುವುದಕ್ಕೆ ಅಭಿವೃದ್ಧಿ ಮಾಡಲು ದುರಸ್ತಿ ಮಾಡಲು ವಕ್ಪಬೋರ್ಡ್ ನಿಂದ ಹೆಚ್ಚಿನ ಅನುದಾನ ಕೊಡಬೇಕು.
4. ಅಲ್ಪಸಂಖ್ಯಾತರ ಯಾವುದೇ ಕಾರ್ಯಾಲಯದಲ್ಲಿ ಯಾವುದೇ ಕೆಲಸಗಳು ಇದ್ದರೆ ಕಾನೂನು ರೀತಿಯಲ್ಲಿ ಸಹಕಾರ ಮಾಡಬೇಕು.
5. ಕಾಂಗ್ರೆಸ್ ಸರ್ಕಾರ ಬಂದಲ್ಲಿ ಜೇವರ್ಗಿ ಮತ್ತು ಯಡ್ರಾಮಿಯಿಂದ ನಿಗಮ ಮಂಡಳಿಗಳಲ್ಲಿ ಅಲ್ಪಸಂಖ್ಯಾತರಿಗೆ ಒಂದು ಸ್ಥಾನ ಕೊಡಬೇಕು.
6. ಅಮಾಯಕರ ಮೇಲೆ ಆದಂತ ಸುಳ್ಳು ಪ್ರಕರಣಗಳು ಮತ್ತು ರೌಡಿಶೀಟರಗಳು ಹಿಂಪಡೆಯಬೇಕು
ನಮ್ಮ ಶರತ್ತುಗಳಿಗೆ ಡಾಕ್ಟರ್ ಅಜಯ್ ಸಿಂಗ್ ಅವರು ಒಪ್ಪಿಕೊಂಡಿರುತ್ತಾರೆ ಆದ್ದರಿಂದ ನಾವು ಸ್ವತಂತ್ರವಾಗಿ ಶರತ್ ಬದ್ಧವಾಗಿ ಪಕ್ಷದಲ್ಲಿ ಸೇರ್ಪಡೆಯಾಗದೆ ಕೇವಲ ಚುನಾವಣೆ ನಿಮಿತ್ತವಾಗಿ ಬೆಂಬಲ ನೀಡುವುದಾಗಿ ತಿಳಿಸಿದರು.
ಒಂದು ವೇಳೆ ಚುನಾವಣೆ ಮುಗಿದ ನಂತರ ಡಾಕ್ಟರ್ ಅಜಯ್ ಸಿಂಗ್ ರವರು ನಮ್ಮ ಸಮುದಾಯವನ್ನು ಕಡೆಗಣಿಸಿದರೆ ಬೆಂಬಲಿಗರ ಮತ್ತು ಅಭಿಮಾನಿಗಳ ಜೊತೆಗೂಡಿ ಹೋರಾಟ ಮಾಡುವುದಾಗಿ ಮೋಹಿನುದ್ದಿನ್ ನಾಮ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
Be the first to comment