ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಎಸ ಪಿ ಕಚೇರಿಯ ಕೆಲ ಸಿಬ್ಬಂದಿಯೇ ಅಕ್ರಮ ಮರಳು ಮಾರಟ ಮಾಡಲು ಕಾರಣ ಎಂದು ಸಾರ್ವಜನಿಕರು ಮಾತಾಡಿಕೋಳುತ್ತಿರುವುದು ತಾಲ್ಲೂಕಿನಾದ್ಯಂತ ಕಾಣಬಹುದು
ಯಾದಗಿರಿ :ಚುನಾವಣೆ ನೀತಿ ಸಂಹಿತೆ ಜಾರಿ ಇದ್ದರೂ ಯಾದಗಿರಿ ಜಿಲ್ಲೆಯ ಸುರಪುರ & ಹುಣಸಗಿಯಲ್ಲಿ ಆಕ್ರಮ ಮರಳು ಸಾಗಾಟ
ಚೆಕ್ ಪೋಸ್ಟ್ ನಲ್ಲಿ ಮರಳು ಹೊತ್ತ ಘನ Over Load) ವಾಹನಗಳು ಹಾದು ಹೋದರು ಜಾಣ ಕುರುಡರಂತೆ ವರ್ತಿಸುತ್ತಿರುವ ಪೋಲಿಸ್ ಇಲಾಖೆ, ಕಂದಾಯ, ಇಲಾಖೆ ಪಿ ಡಬ್ಲ್ಯೂ ಡಿ ಅಧಿಕಾರಿಗಳು.
ಸುರಪುರ & ಹುಣಸಗಿಯಲ್ಲಿ ಆಕ್ರಮ ಮರಳು ಸಾಗಾಟ ಸಾರ್ವಜನಿಕರ ಗಂಭೀರ ಆರೋಪ.
ಯಾದಗಿರಿ ಜಿಲ್ಲೆಯ ಸುರಪುರ & ಹುಣಸಗಿ ತಾಲ್ಲೂಕಿನಲ್ಲಿ ಹಾಡು ಹಗಲೇ ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಗಳಲ್ಲಿ ಅಕ್ರಮ ಮರಳು ಸಾಗಾಟ
ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಆಗ್ರಹ.
ಹೌದು ರಾಜ್ಯದಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಯಾದಗಿರಿ ಜಿಲ್ಲೆಯ ಸುರಪುರ & ಹುಣಸಗಿ ತಾಲೂಕಿನ ಮಾಳನೂರ ಹಾಗೂ ಇತರೆ ಕಡೆ ಆಕ್ರಮವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ.
ಎಂದು ಸುರಪುರ & ಹುಣಸಗಿ ತಾಲೂಕಿನ ಸಾರ್ವಜನಿಕರ ಆರೋಪವಾಗಿದೆ.
ಅದೇ ರಸ್ತೆಯಲ್ಲಿ ಎತ್ತುಗಳನ್ನು ಇಡಿದುಕೊಂಡು ಹೋಗುತ್ತಿದ್ದ ರೈತನನ್ನು ಯಾರು ಇಲ್ಲಿ ಉಸುಗು ಹಾಕಿದ್ದಾರೆ ಅವರ ಹೆಸರು ಏನು ಎಂದು ಕೇಳಿದರೆ ನನ್ನ ಇಡಿ ಕುಟುಂಬದ ಮೇಲೆ ಲಾರಿ ಹತ್ತಿಸಬೇಕು ಅಂದುಕೊಂಯೇನಪ್ಪ ಅವರ ಹೆಸರು ಹೇಳಿದರೆ ನನ್ನ ಜೀವ ಸಹಿತ ಉಳಿಸುತ್ತಾರಾ! ಸಿಪಿಆಯ್,ಪಿಎಸ ಆಯ್ ಇದೆ ರಸ್ತೆಯಲ್ಲಿ ನಿತ್ಯ ಬರುತ್ತಾರೆ ಎಲೆಕ್ಷನಲ್ಲಿ ಪೋಲಿಸರು ಇದೆ ರಸ್ತೆಯಲ್ಲಿ ಅಡ್ಯಾಡುತ್ತಾರೆ ಯಾಕ್ ತಗಿಸಿಲ್ಲ ಅವರು ಇದರಲ್ಲಿ ಶಾಮೀಲ್ ಅದರಾ ಉಸುಗು ಮಾರುವವರ ಬಗ್ಗೆ ಹೇಳಿದರ ನಮ್ಮ ಹೆಸರು ಗೊತ್ತಾತ್ತು ಎಂದರ ನಮ್ಮ ಮ್ಯಾಲ ಪೋಲಿಸರ ಸುಳ್ಳು ಕೇಸ ದಾಖಲಿಸುತ್ತಾರ ನಿವು ನಿಮ್ಮ ಚಾನಲ್ ನಲ್ಲಿ ಬರಿಯಿರಿ ನಿಮ್ಮನ್ನು ಯಾವುದಾದರೂ ಕೇಸನಲ್ಲಿ ಹಾಕಿ ಮಾಡತ್ತಾರಪ್ಪ. ನನ್ನ ಪೋಟೋ ತೆಗಿ ಬ್ಯಾಡರಪ್ಪ ನಾವು ದುಡಿದುಕೊಂಡ ತಿನ್ನುವವರು ಎಂದು ರೈತ
ಹೆಸರು ಹೇಳದೆ ಹೊರಟು ಹೋದಅಕ್ರಮ ಮಾಡುವವರು ಬೀಹಾರ,ಉತ್ತರ ಪ್ರದೇಶ ಗುಂಡಾಗಳ ರೀತಿಯಲ್ಲಿ ಇದ್ದಾರೆ ಪತ್ರಕರ್ತರು ಬರೆಯಬೇಕಾದರೆ ಜೀವದ ಅಂಗು ತೋರೆದು ಬರೆಯಬೇಕಾಗಿದೆ ಕಾರಣ ಕೆಲ ಪೋಲಿಸರೆ ಮುಂದೆ ನಿಂತು ಅಕ್ರಮ ಉಸಿಕು ಸಾಗಾಟ ಮಾಡಿಸುವ ಪ್ರಮುಖರಾಗಿದ್ದಾರೆ. ಎಲ್ಲ ಪೋಲಿಸರ ಪೋನ ಗಳನ್ನು ತನಿಖೆಗೆ ಒಳಪಡಿಸಿದರೆ ನಿಜವಾದ ಸತ್ಯ ಹೊರ ಬರುತ್ತದೆ. ಅಕ್ರಮ ಉಸುಕು ಮಾರಾಟ ಮಾಡುತ್ತಿರವವ ಬೆಂಬಲಕ್ಕೆ ನಿಂತ ಪೋಲಿಸ ಯಾರು ಎಂಬುವುದು ಗೊತ್ತಾಗುತ್ತದೆ ಪೋಲಿಸ ಇಲಾಖೆಯ ಗೌರವ ಉಳಿಯ ಬೇಕೆಂದರೆ ಉನ್ನತ ಮಟ್ಟದ ತನಿಖೆ ಹಾಗಬೇಕಿದೆ.
ನಂತರ ಮಾತನಾಡಿದ ಅವರು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರು ಸುರಪುರ ತಾಲೂಕಿನ ಶೆಳ್ಳಗಿ, & ಹುಣಸಗಿ ತಾಲ್ಲೂಕಿನ ಮಾಳನೂರ ಚೆಕ್ ಪೋಸ್ಟ್ ಹತ್ತಿರ ಆಕ್ರಮವಾಗಿ ಮರಳು ದಾಸ್ತಾನು ಮಾಡಿ ರಾತ್ರೋ ರಾತ್ರಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಸಾಗಾಟ ಮಾಡುತ್ತಿದ್ದಾರೆ. ಚೆಕ್ ಪೋಸ್ಟ್ ನಲ್ಲಿಯೇ ಹಾದು ಹೋದರು ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನವಹಿಸುತ್ತಿರುವುದು ವಿಪರ್ಯಾಸವೇ ಸರಿ.
ಈ ಕೂಡಲೇ ಗಣಿ & ಭೂ ವಿಜ್ಞಾನ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮಾಧ್ಯಮ ಮೂಲಕ ಸಾರ್ವಜನಿಕರು ಆಗ್ರಹಿಸಿದರು.
Be the first to comment