ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಜಿ. ಪಲ್ಲವಿ ನಿರ್ಧಾರ
ಬೆಂಗಳೂರು, ಏ, 16; ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿರುವ ಕಾಂಗ್ರೆಸ್ ನಾಯಕಿ ಪಲ್ಲವಿ ಜಿ. ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು, ಮಂಗಳವಾರ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಶ್ರೀನಿವಾಸ್ ಕರಿಯಣ್ಣ ಅವರಿಗೆ ಟಿಕೆಟ್ ನೀಡಿದ್ದು, ಜಿ. ಪಲ್ಲವಿ ಅವರಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ಬಂಡೆದ್ದಿರುವ ಅವರು ಬಂಡಾಯ ಎದ್ದಿದ್ದಾರೆ.
ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪ.ಜಾ ಭಲಾಡ್ಯ 4 ಜಾತಿಗಳಿಗೆ ಮಣಿದು ಟಿಕೆಟ್ ನೀಡಿದ್ದು, ಅಲೆಮಾರಿ ( ಕೊರಮ- ಕೊರಚ) ಕುಳುವ ಸಮುದಾಯದವನ್ನು ನಿರ್ಲಕ್ಷಿಸಿದೆ. ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳಿಗೆ 36 ಮೀಸಲು ವಿಧಾನಸಭಾ ಕ್ಷೇತ್ರಗಳಿವೆ. ಅದರಲ್ಲಿ ಹಣಬಲ, ಜನಬಲವುಳ್ಳ 4 ಪ್ರಬಲ ಸಮುದಾಯಗಳಿಗೆ ಮಣಿಹಾಕಿ ಅಲೆಮಾರಿ ಹಾಗೂ ಇತರೆ ಸಮುದಾಯಗಳಿಗೆ ಆದ್ಯತೆ ನೀಡದೇ ವಂಚಿಸಿರುವುದು ಖಂಡನೀಯ ಇದು ಸಮಾಜಿಕ ನ್ಯಾಯದ ಕಗ್ಗೊಲೆ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘ” ಕೊರಮ- ಕೊರಚ-ಕೊರವ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶಿವಾನಂದ ಎಂ ಭಜಂತ್ರಿ ಟೀಕಿಸಿದ್ದಾರೆ.
ಇಂದು ಎಲ್ಲಾ ರಾಜಕೀಯ ಪಕ್ಷಗಳು 36 ಮೀಸಲು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಟ ಒಂದು ಟಿಕೆಟ್ ಸಹ ನೀಡದೇ ಕೊರಮ-ಕೊರಚ ಸಮಾಜವನ್ನು ನಿರ್ಲಕ್ಷಿಸಿ, ರಾಜಕೀಯ ದ್ರೋಹವೆಸಗಿದೆ. ಕಾಂಗ್ರೆಸ್ ನ ಎರಡನೇ ಪಟ್ಟಿಯಲ್ಲಿ ಜಿ. ಪಲ್ಲವಿ ಹೆಸರು ಅಂತಿಮವಾಗಿತ್ತು. ಆದರೆ ಟಿಕೆಟ್ ಪ್ರಕಟವಾಗಿತ್ತು ಆದರೆ ಎಡಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ನೆಪವೊಡ್ಡಿ ಈಗಾಗಲೇ 6 ಬಾರಿ ಸೋತ ಹಾಗೂ ಕಳೆದ ಚುನಾವಣೆಯಲ್ಲಿ 40ಸಾವಿರಕ್ಕೂ ಹೆಚ್ಚು ಮತದ ಅಂತರದಲ್ಲಿ ಹೀನಾಯವಾಗಿ ಸೋತ ಅಭ್ಯರ್ಥಿಗೆ ಮಣೆ ಹಾಕಿದ್ದು
ಕಾಂಗ್ರೇಸ್ ಹೈಕಮಾಂಡ್ ನ ತೀರ್ಮಾನವು ಇಬ್ಬಂದಿತನದಿಂದ ಕೂಡಿದ್ದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದ್ದು ಶೋಷಿತರಲ್ಲೇ ಶೋಷಿತರಾದ ದಮನಿತ ಅಲೆಮಾರಿ ಸಮಾಜಕ್ಕೆ ಕೊನೆಯ ಕ್ಷಣದಲ್ಲಿ ಟಿಕೇಟ್ ತಪ್ಪಿಸಿದ್ದು ಆಘಾತವಾಯಿತು.
ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಕುಳುವ ಸಮಾಜಕ್ಕೆ ಟಿಕೆಟ್ ತಪ್ಪಿಸಿದ ಕಾಂಗ್ರೆಸ್ ಹಾಗೂ ಇತರೆ ಯಾವುದೇ ಪಕ್ಷಗಳು ಕುಳುವ ಟಿಕೆಟ್ ನೀಡದೇ ಕಡೆಗಣಿಸಿರುವುದರಿಂದ ಮುಂದಿನ ಚುನಾವಣೆಯಲ್ಲಿ ಎಲ್ಲಾ ಪಕ್ಷಕ್ಕೂ ತಕ್ಕ ಪಾಠ ಕಲಿಸುತ್ತೇವೆ. ಈ ಸಂಬಂಧವಾಗಿ ರಾಜ್ಯಪ್ರವಾಸ ಕೈಗೊಂಡು ಜನಜಾಗೃತಿ ಕೈಗೊಳ್ಳಲು ಸಂಘವು ನಿರ್ಧರಿಸಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
Be the first to comment