ಜೇವರ್ಗಿ : ಜೇವರ್ಗಿ ನಗರದಲ್ಲಿ ಸುಮಾರು ವರ್ಷದಿಂದ ನಿರ್ಮಾಣ ಮಾಡುತ್ತಿರುವ ಕ್ರೀಡಾಂಗಣ ಮತ್ತು ಸಂತೆ ಮಾರ್ಕೇಟ್ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ನಿರ್ಮಾಣ ಮಾಡಿ ಥರಾತೂರಿಯಲ್ಲಿ ಕಟ್ಟಡಗಳನ್ನು ಚುನಾವಣೆ ಲಾಭಕ್ಕಾಗಿ ಉದ್ಘಾಟನಾ ಮಾಡಿ ಸಾರ್ವಜನಿಕರಿಗೆ ಪ್ರಾಣಕ್ಕೆ ಕುತ್ತು ತಂದಿದ್ದಾರೆ.
ಹೌದು ತಾಲ್ಲೂಕು ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿರ್ಮಾಣ ಆಗಿರುವ ಕ್ರೀಡಾಂಗಣ ಮತ್ತು ಸಂತೆ ಮಾರುಕಟ್ಟೆ ಕಾಮಗಾರಿ ನಿರ್ಮಿತಿ ಕೇಂದ್ರದವರು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ನೀಡಲಾಗಿತ್ತು,ದೂರಿನ್ವ ಉನ್ನತ ಮಟ್ಟದ ತನಿಖೆ ಮಾಡಿ ಈ ಎರಡು ಕಾಮಗಾರಿಗಳನ್ನು ಸ್ವಂತ ಹಣದಲ್ಲಿ ಮರು ನಿರ್ಮಾಣ ಮಾಡಲು ಜಂಟಿ ನಿರ್ದೇಶಕರು,ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರವರು 2018ರಲ್ಲೆ ಆದೇಶಿಸಿದರು ಕೂಡ ಇದಕ್ಕೆ ಬೆಲೆ ಕೊಡದ ಶಾಸಕ ಡಾ.ಅಜಯಸಿಂಗ್ ರವರು ಇನ್ನೂ ಹೆಚ್ಚಿನ ಅನುದಾನವನ್ನು ಕೊಟ್ಟು ಕಳಪೆ ಕಾಮಗಾರಿಗಳನ್ನು ಮುಚ್ಚಲು ಬಣ್ಣ ಬಣ್ಣದ ಕಲರಿಂಗ್ ಮಾಡಿ ಕಾಮಗಾರಿ ಉದ್ಘಾಟನೆ ಮಾಡಿದ್ದಾರೆ.
ಕಳಪೆ ಕಾಮಗಾರಿ ಬಗ್ಗೆ ಪಿಡಿಎ ಕಾಲೇಜು ತಾಂತ್ರಿಕ ರವರು ನೀಡಿರುವ ವರದಿಯ ಪ್ರಕಾರ ಕಟ್ಟಡದ ಬಿಮ್ ಬಲಿಷ್ಠವಾಗಿಲ್ಲ,ಕ್ರಿಡಾಂಗಣ ಕಟ್ಟಡ ಕಾಮಗಾರಿ ಮಾಡಿದ ಎರಡು ತಿಂಗಳಲ್ಲಿ ಬಿಮ್ ಬೆಂಡ್ ಆಗಿವೆ ಕಟ್ಟಡ ಯಾವ ಕ್ಷಣದಲ್ಲಿ ಕೂಡ ಸೀಳಿಕೊಂಡು ಕುಸಿದು ಬೀಳಬಹುದು.ಇಷ್ಟಾದರೂ ಕೂಡ ಕ಼ೇತ್ರದ ಎಂಎಲ್ ಎ ರವರು ಚುನಾವಣೆಯ ಪ್ರಚಾರ ಸಲುವಾಗಿ ಕಟ್ಟಡಗಳನ್ನು ಉದ್ಘಾಟಿಸಿ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತಂದಿದ್ದಾರೆಂದು ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರ ಶ್ರವಣಕುಮಾರ ಡಿ ನಾಯಕ ರವರು ಗಂಭೀರವಾಗಿ ದಾಖಲಾತಿಗಳ ಸಮೇತವಾಗಿ ಆರೋಪಿಸಿದ್ದಾರೆ.
ಸದರಿ ಕಾಮಗಾರಿಗಳ ವಿರುದ್ಧ ಈಗಾಗಲೇ ಲೋಕಾಯುಕ್ತ ಸಂಸ್ಥೆ ದೂರು ದಾಖಲಾಗಿ ತನಿಖೆಯಲ್ಲಿ ಇದ್ದು,ದೂರುದಾರರಾದ ಶ್ರವಣಕುಮಾರ ಡಿ ನಾಯಕ ರವರಿಗೆ ಕಾಮಗಾರಿಗಳು ಯಾವ ಪರಿಸ್ಥಿತಿಯಲ್ಲಿ ಇರುವ ಬಗ್ಗೆ ಫೋಟೋ ಸಮೇತವಾಗಿ ಪ್ರತ್ಯುತ್ತರ ವರದಿ ನೀಡಲು ಪತ್ರ ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಸ್ತುತ ಯಾವ ಹಂತದಲ್ಲಿ ಇರುವ ಬಗ್ಗೆ ವರದಿ ಪತ್ರ ಫೋಟೋಗಳನ್ನು ನೀಡಲಾಗಿದೆಂದು ತಿಳಿಸಿದ್ದಾರೆ.
Be the first to comment