ಜಾಧವ ಕುಟುಂಬದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ-ಸುಭಾಶ ರಾಠೋಡ*

ಕಲಬುರ್ಗಿ ಸಂಸದ ಡಾಃಉಮೇಶ ಜಾಧವ ಸ್ಥಳಿಯ ಶಾಸಕ ಡಾಃಅವಿನಾಶ ಜಾಧವ ಅವರ ದುರಾಡಳಿತಕ್ಕೆ ಚಿಂಚೋಳಿ ಮತಕ್ಷೇತ್ರದ ಜನ ಬೇಸತ್ತಿದ್ದಾರೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಇವರ ದುರಾಡಳಿತಕ್ಕೆ ಜನ ಅಂಕಿತ ಹಾಕಲಿದ್ದಾರೆಂದು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸುಭಾಶ ರಾಠೋಡ ಅಪ್ಪ ಮಗನ ವಿರುದ್ಧ ಕಿಡಿಕಾರಿದರು

 

ಅವರು ತಾಲೂಕಿನ ಐನೋಳಿ ಗ್ರಾಮದಲ್ಲಿ ಕರೆದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಬಿಜೆಪಿ ಡಬಲ್ ಇಂಜಿನ್ ಸರಕಾರ ಹಾಗೂ ಕಲಬುರ್ಗಿ ಸಂಸದ ಮತ್ತು ಸ್ಥಳಿಯ ಶಾಸಕರ ವಿರುದ್ಧ ಹರಿಹಾಯ್ದರು

 

ಅವರು ಮಾತನಾಡುತ್ತಾ ಮಾತೆತ್ತಿದರೆ ಸುಭಾಶ ರಾಠೋಡ ಹೊರಗಿನವರು ಎಂದು ಆಪಾದಿಸುತ್ತಾರೆ ಹಾಗಾದರೆ ಮಾಜಿ ಶಾಸಕ ವೈಜನಾಥ ಪಾಟೀಲ ಸುನೀಲ ವಲ್ಯಾಪೂರ ಮುಖಂಡ ರಮೇಶ ಯಾಕಾಪೂರ ಚಿಂಚೋಳಿ ಮತಕ್ಷೇತ್ರದವರೇ ಎಂದು ವಿಪಕ್ಷಗಳ ಮುಖಂಡರಿಗೆ ಮರು ಪ್ರಶ್ನೆ ಹಾಕಿದರು

 

ಸುಭಾಶ ರಾಠೋಡ ಚಿಂಚೋಳಿ ಮತಕ್ಷೇತ್ರದಲ್ಲಿ ಸುಮಾರು 25 ವರ್ಷಗಳಿಗಿಂತ ಅಧಿಕ ದಿನಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಕುಂಚಾವರಂ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಮಕ್ಕಳ ಮಾರಾಟ ಪ್ರಕರಣದ ವೇಳೆಯಲ್ಲಿ ನೀವು ಎಲ್ಲಿದ್ದೀರಿ ? ಎಂದು ಅಪ್ಪ ಮಗನಿಗೆ ರಾಠೋಡ ಖಾರವಾಗಿ ಪ್ರಶ್ನಿಸಿದರು

 

ಹಿಂದಿನ ಕಾಂಗ್ರೇಸ್ ಸರಕಾರದಲ್ಲಿ ಮಂಜೂರಾದ ಕೋಟ್ಯಾಂತರ ರೂ.ಗಳ ಅನುದಾನದ ಕಾಮಗಾರಿಗಳನ್ನು ಮೊನ್ನೆ ನೀವು ಉದ್ಘಾಟನೆ ಮಾಡಿದ್ದೀರಿ ಕ್ಷೇತ್ರಕ್ಕೆ ನೀವು ತಂದ ಅನುದಾನ ಹಾಗೂ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವಂತೆ ರಾಠೋಡ ಪ್ರಶ್ನಿಸಿದರು

 

ಚಿಂಚೋಳಿ ನಗರದಲ್ಲಿ ಪ್ರತಿಷ್ಠಾಪನೆಗೊಂಡ ದಾರ್ಶನಿಕರ ಪ್ರತಿಮೆಗಳು ಖಾಸಗಿ ಸಂಸ್ಥೆ ನಡೆಸುತ್ತಿರುವ ಇಥೆನಾಲ್ ಕಾರ್ಖಾನೆ ರಟಕಲ್ ರೇವಗ್ಗಿ ಮಂದಿರದ ಲಿಂಗ ಪ್ರತಿಷ್ಠಾಪನೆ ನಿಮ್ಮ ಅಭಿವೃದ್ಧಿಯೆಂದು ನೀವು ಭಾವಿಸಿದರೆ ನಿಮ್ಮಂತಹ ಅವಿವೇಕಿಗಳು ಜಗತ್ತಿನಲ್ಲಿ ಮತ್ತೊಬ್ಬರಿಲ್ಲವೆಂದು ಜಾಧವ ಕುಟುಂಬದ ವಿರುದ್ಧ ರಾಠೋಡ ವ್ಯಂಗ್ಯವಾಡಿದರು

 

ನೀವು ನಿತ್ಯ ನಮ್ಮ ಪಕ್ಷದ ಅನೇಕ ಜನ ಮುಖಂಡರಿಗೆ ಆಮಿಷವೊಡ್ಡಿ ನಿಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದೀರಿ ಆದರೆ ಕಾಂಗ್ರೇಸ್ಸಿಗರು ಗಟ್ಟಿ ಕಾಳುಗಳೇ ಹೊರತು ಪೊಳ್ಳುಗಳಿಲ್ಲ ಎಂದು ಪಕ್ಷದ ಕಾರ್ಯಕರ್ತರ ವಿಶ್ವಾಸ ಹೆಚ್ಚಿಸಿ ಸಂಸದರ ವಿರುದ್ಧ ರಾಠೋಡ ಘರ್ಜಿಸಿದರು

 

ಈ ಬಾರಿ ನೀವು ಎಷ್ಟೆ ಹಣ ಹೆಂಡ ಹಂಚಿದರು ಜನ ನಿಮ್ಮ ಆಮಿಷಗಳಿಗೆ ಬಲಿಯಾಗುವುದಿಲ್ಲ ಕ್ಷೇತ್ರದ ಎಲ್ಲಾ ತಾಂಡಗಳ ಹಾಗೂ ಗ್ರಾಮಗಳ ಮತದಾರರು ನಿಮಗೆ ಸೋಲಿನ ರುಚಿಯುಣಿಸಲು ಕಾತುರದಿಂದ ಕಾಯುತ್ತಿದ್ದಾರೆ ನೀವು ಎಷ್ಟೆ ತಿಪ್ಪರಾ ಲಾಗ ಹಾಕಿದರು ನಿಮ್ಮ ಮಗನ ಸೋಲು ನಿಶ್ಚಿತವೆಂದು ಸುಭಾಶ ವಿಶ್ವಾಸ ವ್ಯಕ್ತಪಡಿಸಿದರು

 

ಈ ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಸವರಾಜ ಮಲಿ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಅವುಟಿ ಮುಖಂಡರಾದ ದೀಪಕನಾಗ ಪುಣ್ಯಶೆಟ್ಟಿ ಮಧುಸೂಧನ ರೆಡ್ಡಿ ಕಲ್ಲೂರ ಲಕ್ಷ್ಮಿದೇವಿ ಕೊರವಿ ವೀರಶೆಟ್ಟಿ ಪಾಟೀಲ ಸೇರಿದಂತೆ ಇತರರಿದ್ದರು.

Be the first to comment

Leave a Reply

Your email address will not be published.


*