ಲಿಂಗಸೂಗೂರು ವಿಧಾನಸಭಾ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗೃತೆ ಕ್ರಮವಾಗಿ ಪಟ್ಟಣದಲ್ಲಿ ಜಿಲ್ಲಾ ಉಪ ಪೋಲಿಸ್ ವರಿಷ್ಟಾ ಅಧಿಕಾಗಳು ಹಾಗು ಡಿ. ವಾಯ್. ಎಸ್. ಪಿ. ಲಿಂಗಸೂಗೂರು ಮತ್ತು ಸಿ ಪಿ ಐ. ಹಾಗೂ ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್ ಪಡೆ ಮತ್ತು ಪೊಲೀಸರಿಂದ ಲಿಂಗಸುಗೂರ ಪಟ್ಟಣದಲ್ಲಿ ಇದೆ ಮೊದಲ ಬಾರಿಗೆ ಪೋಲಿಸ್ ಪಥ ಸಂಚಲನ ನಡೆಸಿ ಸಾರ್ವಜನಿಕ ರ ಗಮನ ಸೆಳೆದರು.
ಪೋಲಿಸ್ ಠಾಣೆಯ ಆವರಣದಿಂದ ಪೋಲಿಸ್ ಪಥ ಸಂಚಲನ ಚಾಲನೆ ಗೊಂಡು ಗಡಿಯಾರ ಚೌಕ ಬಸ್‍ಸ್ಟಾಂಡ್ಸರ್ಕಲ್ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು ಪಿ ಐ ಸೇರಿದಂತೆ ಪೋಲಿಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಸಿಪಿಐ ಮಾತನಾಡಿ, ಪಥ ಸಂಚಲನದ ಮೂಲಕ ಜನರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡುವ ಯತ್ನ ನಮ್ಮದಾಗಿದೆ. ಪೋಲಿಸ್ ಪರೇಡ್‍ನಿಂದ ಸಾಮಾನ್ಯ ಜನರಲ್ಲಿ ಉತ್ಸಾಹ ಬರುವುದರ ಜೊತೆಗೆ ನಮ್ಮೊಂದಿಗೆ ಪೋಲಿಸರು ಇದ್ದಾರೆ ಎಂಬ ಭಾವನೆ ಮೂಡುತ್ತದೆ. ಇದರ ಮೂಲಕ ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಜನರು ಆಸಕ್ತಿವಹಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಅವಿನಾಶ ಸಿಂದೆ. ಉಪ ಚುನಾವಣಾಧಿಕಾರಿಗಳಾದ ಡಿ.ಎಸ್.ಜಮಾದಾರ. ಇನ್ನು ಹಲವಾರು ಇಲಾಖೆಯ ಅಧಿಕಾರಿಗಳು ಇದ್ದರು
Be the first to comment