ಸುದ್ದಿ ಸಂಪಾದಕರು :ಸವಿತಾ. ವಿಜಯಪುರ
ಬಿಜೆಪಿ ಪಕ್ಷವು ದೇಶದ್ಯಂತ ಕೋಮುವಾದ ಬಿತ್ತಿ ಒಡೆದಾಳುವ ನೀತಿ ಅನುಸರಿಸುತ್ತಿದೆ ಪ್ರಧಾನಿ ನರೇಂದ್ರ ಮೋದಿ ಸಬಕಾ ಸಾಥ ಸಬಕಾ ವಿಕಾಸ ಎನ್ನುವ ಮಂತ್ರ ಪಠಿಸಿ ದೇಶದ ಜನರನ್ನು ಮರಳು ಮಾಡುವಲ್ಲಿ ತಲ್ಲೀನರಾದರೆ ಕಲಬುರ್ಗಿ ಸಂಸದ ಡಾಃಉಮೇಶ ಜಾಧವ ದ್ವೇಷದ ರಾಜಕಾರಣ ಮಾಡುವುದರಲ್ಲಿ ಬೀಜಿಯಾಗಿದ್ದಾರೆಂದು ಬಿಜೆಪಿ ನಿರ್ಗಮಿತ ಮುಖಂಡ ಬಾಬು ಪವಾರ ಆರೋಪಿಸಿದರು
ಅವರು ಕಲಬುರ್ಗಿ ಜಿಲ್ಲಾ ಕಾಂಗ್ರೇಸ್ ಕಛೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ನಮ್ಮ ಪ್ರತಿನಿಧಿಯ ಜೊತೆ ಮಾತನಾಡುತ್ತಿದ್ದರು
ರಾಜ್ಯ ಬಿಜೆಪಿ ನೇತೃತ್ವದ ಸರಕಾರ ಬಂಜಾರಾ ಸಮುದಾಯದ ಮೀಸಲಾತಿ ಕಿತ್ತುಕೊಂಡರು ಸಂಸದ ಡಾಃಉಮೇಶ ಜಾಧವ ಅಥವಾ ಅವರ ಮಗ ಶಾಸಕ ಡಾಃಅವಿನಾಶ ಆಗಲಿ ತುಟಿ ಬಿಚ್ಚಿಲ್ಲ ಇವರ ಅಸಾಹಯಕತೆಗೆ ಬಂಜಾರಾ ಸಮುದಾಯ ಬೇಸರ ವ್ಯಕ್ತಪಡಿಸಿ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಸನ್ನದ್ಧವಾಗಿದೆ ಎಂದು ಪವಾರ ಅಪ್ಪ ಮಗನ ವಿರುದ್ಧ ಹರಿಹಾಯ್ದರು
ಕೆಲವು ತಿಂಗಳುಗಳ ಹಿಂದಷ್ಟೆ ನನಗೆ ಹಾಗೂ ನಮ್ಮ ಸಮುದಾಯದ ನಾಯಕರನ್ನು ಪುಸಲಾಯಿಸಿ ಬಿಜೆಪಿ ಪಕ್ಷಕ್ಕೆ ಕರೆದುಕೊಂಡು ಹೋದರು ನಾವು ಬಿಜೆಪಿ ಸೇರಿದ ಬಳಿಕ ನಮಗೆ ಮೂಲೆಗುಂಪು ಮಾಡಿ ನಮ್ಮ ರಾಜಕೀಯ ಅಂತ್ಯಕ್ಕೆ ಹುನ್ನಾರ ಮಾಡಿದರು ಎಂದು ಸಂಸದರ ವಿರುದ್ಧ ಪವಾರ ಗಂಭೀರ ಆರೋಪ ಮಾಡಿದರು
ಸಂಸದ ಡಾಃಉಮೇಶ ಹಾಗೂ ಅವರ ಮಗ ಡಾಃಅವಿನಾಶ ಅವರಿಗೆ ಸಮಾಜ ಉನ್ನತ ಸ್ಥಾನಕ್ಕೆ ಏರುವಂತೆ ಆಶೀರ್ವಾದ ಮಾಡಿದರು ಕೂಡ ಅವರಿಗೆ ಸಮಾಜದ ಬಗ್ಗೆ ಕಿಂಚತ್ತು ಕಳಕಳಿಯಿಲ್ಲ ಇವರಿಬ್ಬರೂ ಸಮುದಾಯದ ಹಿತ ಎಂದಿಗೂ ಬಯಸಿದವರಲ್ಲ ಇವರು ತಮ್ಮ ಮತ್ತು ಕುಟುಂಬದ ಹಿತ ಕಾಪಾಡುವಲ್ಲಿ ತಲ್ಲೀನರಾಗಿದ್ದಾರೆ ಇವರ ಒಡೆದಾಳುವ ನೀತಿಯನ್ನು ಖಂಡಿಸಿ ನಾನು ಮತ್ತು ಸಮುದಾಯದ ಅನೇಕ ಮುಖಂಡರು ಬಿಜೆಪಿ ತೊರೆದು ಇಂದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ ಎಂದರು
ವಿಧಾನಸಭಾ ಚುನಾವಣೆ ಸಮೀಪಿಸಿರುವುದರಿಂದ ಗೆಲುವಿಗಾಗಿ ಇವರಿಬ್ಬರೂ ಕ್ಷೇತ್ರದ ವಿವಿಧ ತಾಂಡಗಳಲ್ಲಿ ಹಗಲಿರಳೆನ್ನದೇ ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆದಾಡಿ ಜನರ ಸಮಸ್ಯೆ ನೀಗಿಸುವ ನಾಟಕವಾಡಿ ಮತದಾರರನ್ನು ಮರಳು ಮಾಡಲು ಪ್ರಯತ್ನಿಸುತ್ತಾರೆ ಇವರ ನಾಟಕ ಎಲ್ಲಾ ತಾಂಡಗಳ ನಿವಾಸಿಗಳು ಬಲ್ಲಿದ್ದಾರೆ ಇನ್ನೂ ಮುಂದೆ ಇವರ ನಾಟಕಕ್ಕೆ ಸಮುದಾಯ ಪೂರ್ಣ ವಿರಾಮ ಹಾಕಲಿದೆ ಎಂದು ಬಾಬು ಪವಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
Be the first to comment