ಬಾಬು ಜಗಜೀವನ ರಾಮ ದೇಶ ಕಂಡ ಅಪ್ರತಿಮ ನಾಯಕರಲ್ಲಿ ಒಬ್ಬರು ಇವರು ಭಾರತದ ಉಪ-ಪ್ರಧಾನಿಗಳಾಗಿ ಸೇವೆ ಸಲ್ಲಿಸುವಾಗ ದೇಶ ಅಭಿವೃದ್ಧಿಯ ನೂರಾರು ಕಾರ್ಯಗಳನ್ನು ಮಾಡಿ ಜನರ ಹೃದಯದಲ್ಲಿದ್ದಾರೆ ಇವರಂತಹ ನಾಯಕ ಹುಟ್ಟುವುದುದು ಬಹಳ ವಿರಳವೆಂದು ಕಲಬುರ್ಗಿ ಸಂಸದ ಡಾಃಉಮೇಶ ಜಾಧವ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಅವರು ಪುರಸಭಾ ವ್ಯಾಪ್ತಿಯ ಚಂದಾಪೂರ ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಲಯದಲ್ಲಿ ಹಮ್ಮಿಕೊಂಡ ಬಾಬು ಜಗಜೀವನ ರಾಮ ಅವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಬಾಬೂಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಿದ್ದರು
ದೇಶವು ಆಹಾರದ ಸಮಸ್ಯೆ ಅನುಭವಿಸುವ ಸಮಯದಲ್ಲಿ ಹಸಿರು ಕ್ರಾಂತಿ ಮಾಡಿ ವಿದೇಶಗಳು ಕೂಡ ಭಾರತದತ್ತ ಮುಖ ಮಾಡುವಂತೆ ಬಾಬುಜೀ ಮಾಡಿದ್ದರು ಇವರು ಅಧಿಕಾರದಲ್ಲಿದ್ದಾಗ ಬಡವರ ಶೋಷಿತರ ದಮನಿತರ ಧ್ವನಿಯಾಗಿ ಮಾತನಾಡಿ ಅವರ ಹಿತಕ್ಕಾಗಿ ಚಿಂತಿಸುತ್ತಿದ್ದರೆಂದು ಡಾಃಉಮೇಶ ತಿಳಿಸುತ್ತಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡೆಯುತ್ತಿದ್ದಾರೆಂದು ಬಣ್ಣಿಸಿದರು
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶ್ರೀಮಂತ ಕಟ್ಟಿಮನಿ ಜಗದೀಶಸಿಂಗ್ ಠಾಕೂರ ಜಗನ್ನಾಥ ಜಾಧವ ಕೆ.ಎಮ್.ಬಾರಿ ಶೇಶಾದ್ರಿರಾವ ಕಳಸ್ಕರ ಗೌರಿಶಂಕರ ಉಪ್ಪಿನ ಶಹಾಜಿರಾವ ಶಾದಿಪೂರ ಅಶೋಕ ಚೌಹಾಣ ಶಿವುಕುಮಾರ ಪೋಚಾಲಿ ಗಿರಿರಾಜ ನಾಟಿಕರ್ ಭೀಮರಾವ ರಾಠೋಡ ಉಮೇಶ ಬೆಳಕೇರಿ ಅಭಿಷೇಕ್ ಮಲ್ಕನೊರ್ ನಾರಾಯಣ ಚೌಹಾಣ ಮಾರುತಿ ಬೇಡರ್ ಸೇರಿದಂತೆ ಅನೇಕರು ಹಾಜರಿದ್ದರು.
Be the first to comment