ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಬಡವರ ದಲಿತರ ದಮನಿತರ ಹಾಗೂ ರೈತರು ಸೇರಿದಂತೆ ವಿವಿಧ ಸಮುದಾಯಗಳ ಕಲ್ಯಾಣಕ್ಕಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರ ಪ್ರಭುಗಳ ಬಾಗಿಲಿಗೆ ಹೋಗಿ ಆಶೀರ್ವದಿಸುವಂತೆ ಪ್ರಾರ್ಥಿಸುತ್ತಿದ್ದೇನೆ ಇತರೆ ಪಕ್ಷಗಳು ತಿಪ್ಪರಾ ಲಾಗ ಹಾಕಿದರು ಕೂಡ ಸೇಡಂ ಮತಕ್ಷೇತ್ರದಲ್ಲಿ ಜನತಾ ದಳ ಪಕ್ಷದ ಝಂಡಾ ಹಾರುವುದು ಗ್ಯಾರಂಟಿ ಎಂದು ಜೆಡಿಎಸ್ ಪಕ್ಷದ ವಿಧಾನಸಭಾ ಘೋಷಿತ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ವಿಶ್ವಾಸ ವ್ಯಕ್ತಪಡಿಸಿದರು
ಅವರು ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ಅನುಕೂಲಗಳನ್ನು ಸಾರ್ವಜನಿಕರ ಮನೆ ಬಾಗಿಲುಗಳಿಗೆ ಹೋಗಿ ತಿಳಿಸುತ್ತಾ ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು
ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿ ಭದ್ರತಾ ಯೋಜನೆಯಡಿಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಅನುಷ್ಠಾನ ವೃದ್ಧಾಪ್ಯ ವೇತನಾ ಅಂಗವಿಕಲ ಯೋಜನೆ ಹಾಗೂ ವಿಧವಾ ವೇತನ ಹೆಚ್ಚಳ ಭಾಗ್ಯಲಕ್ಷ್ಮಿ ಯೋಜನೆ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಹಾಗೂ ನಾಡಿನ ಅನ್ನದಾತನ ಸಾಲಮನ್ನಾ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು ದಮನಿತರ ಧ್ವನಿಯಾಗಿದ್ದಾರೆ ಅವರ ಜನಪರ ಸೇವೆಯನ್ನು ಜನರಿಗೆ ತಿಳಿಸುತ್ತಾ ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮುಖಂಡರ ಜೊತೆ ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ನಾನು ಹಾಗೂ ನನ್ನ ಕುಟುಂಬ ವರ್ಗದವರು ಭೇಟಿ ನೀಡುತ್ತಿದ್ದೇವೆಂದರು
ಈಗಾಗಲೇ ಕ್ಷೇತ್ರದ್ಯಂತ 133 ಹಳ್ಳಿಗಳು ಹಾಗೂ 58 ತಾಂಡಗಳಲ್ಲಿ ಸಂಚರಿಸಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆ ನಾನು ಮುಖಂಡರ ಜೊತೆ ಕ್ಷೇತ್ರದಲ್ಲಿ ಬೀಡು ಬಿಟ್ಟು ಜನರ ನೂರಾರು ಸಮಸ್ಯೆಗಳನ್ನು ಆಲಿಸಿದ್ದೇನೆ ಕೆಲವು ಸ್ಥಳದಲ್ಲೇ ನೀಗಿಸಿದರೆ ಕೆಲವು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿದ್ದೇನೆ ಸೇಡಂ ಕ್ಷೇತ್ರದ ಬಡ ಜನರ ಹಾಗೂ ರೈತರ ನಾಡಿ ಬಡಿತ ಅರಿತ್ತಿದ್ದೇನೆ ಈ ಬಾರಿ ಜನರ ಒಲವು ಜೆಡಿಎಸ್ ನತ್ತ ಇದೆ ಎಂದು ಬಾಲರಾಜ್ ತಿಳಿಸಿದರು
ಕ್ಷೇತ್ರದಲ್ಲಿ ಕಾಂಗ್ರೇಸ್ ಹಾಗೂ ಬಿಜೆಪಿ ಮುಖಂಡರು ಡೋಂಗಿ ರಾಜಕಾರಣ ಮಾಡುತ್ತಾ ಅಲೆಯುತ್ತಿದ್ದಾರೆ ಈಗಾಗಲೇ ಇವರ ಆಟ ಕ್ಷೇತ್ರದ ಜನ ಅರೆತ್ತಿದ್ದಾರೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಇವರ ಬಣ್ಣದ ಮಾತುಗಳಿಗೆ ಮತದಾರರು ಮರಳಾಗುವುದು ಕನ್ನಡಿಯೊಳಗಿನ ಗಂಟಷ್ಟೆ ಸತ್ಯವೆಂದರು ಬಾಲರಾಜ್ ವ್ಯಂಗ್ಯವಾಡಿದರು
ಬಿಜೆಪಿ ಹಿಂದುಳಿದ ದಲಿತ ಹಾಗೂ ಅಲ್ಪಸಂಖ್ಯಾತರ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ ನಾಡಿನ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ 4% ಮೀಸಲಾತಿ ಕಸಿದುಕೊಂಡು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದೆ ಆದರೆ ಕಾಂಗ್ರೇಸ್ ಯಾವುದೇ ಪ್ರತಿಕೃಯೆ ನೀಡದೆ ಓಟಿಗಾಗಿ ಗಪ್ಪಚುಪ್ ಕುಳಿತಿದೆ ಆದರೆ ಮುಸ್ಲಿಂ ಸಮುದಾಯಕ್ಕೆ ಆದ ಜಾತಿ ಮೀಸಲಾತಿ ಅನ್ಯಾಯದ ವಿರುದ್ಧ ಕೇವಲ ಜೆಡಿಎಸ್ ಪಕ್ಷದವರು ಮಾತ್ರ ಧ್ವನಿ ಎತ್ತಿದ್ದಾರೆಂದು ಕೈ ಹಾಗೂ ಕಮಲ ಪಕ್ಷಗಳ ವಿರುದ್ಧ ಗುತ್ತೇದಾರ ಗುಡುಗಿದರು
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಈ ನಾಡಿನ ಜನರ ಉದ್ಧಾರಕ್ಕಾಗಿ ತಮ್ಮ ಜೀವ ಮುಡುಪಾಗಿಟ್ಟಿದ್ದಾರೆ ನಾನು ಕೂಡ ನನ್ನ ಉಸಿರಿರುವರೆಗೂ ಸೇಡಂ ಕ್ಷೇತ್ರದ ಜನರ ನೋವು ನಲಿವುಗಳಲ್ಲಿ ಭಾಗಿಯಾಗಿ ಜನರ ಜೊತೆಯಿರುವೆ ಈ ಬಾರಿ ಮತದಾರ ದೇವರು ನನಗೊಂದು ಅವಕಾಶ ಮಾಡಿಕೊಟ್ಟರೇ ಕ್ಷೇತ್ರದ ಚಿತ್ರಣವೇ ಬದಲಾಯಿಸಿ ಬಿಡುವೆ ಎಂದು ಬಾಲರಾಜ್ ಪರೋಕ್ಷವಾಗಿ ಮತಯಾಚನೆ ಮಾಡಿದರು
ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಗನ್ನಾಥರೆಡ್ಡಿ ಗೋಟೂರ ಮುಖಂಡರಾದ ಪಂಡಿತ ಹೂಗಾರ ಮೋಯಿನ್ ಮೋಮಿನ್ ಗುರುನಾಥ ರೆಡ್ಡಿ ಮಹ್ಮದ ಶರೀಫ್ ಕೊಹೀರ್ ಸಿದ್ಧಯ್ಯಾ ಕಪೂರ ಲಾಡ್ಲೆಸಾಬ್ ತಾಂಡೂರ ಮಹಾದೇವ ಅಬಕಾರಿ ಸೇರಿದಂತೆ ನೂರಾರು ಜನ ಮುಖಂಡರು ಗುತ್ತೇದಾರ ಜೊತೆಗಿದ್ದರು.
Be the first to comment