ಕೊಟ್ಟೂರು; ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ದಿನಾಂಕ 29 ಮಾರ್ಚ್ 2023 ರಂದು “ಪಕ್ಷಿಗಳನ್ನು ಸಂರಕ್ಷಿಸಿ” (ಸೇವ್ ಬರ್ಡ್ ) ತಾಪಮಾನ ಹೆಚ್ಚಾಗುತ್ತಿರುವದರಿಂದ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ಸಹಾಯವಾಗುವ ಉದ್ದೇಶದಿಂದ ಕಾಲೇಜಿನ ಆವರಣದಲ್ಲಿ ಮಣ್ಣಿನಿಂದ ತಯಾರಿಸಿದ ಮಡಿಕೆಯ ಮುಚ್ಚಳದಲ್ಲಿ ನೀರು ಹಾಕುವ ಮುಖಾಂತರ “ಪಕ್ಷಿಗಳನ್ನು ಸಂರಕ್ಷಣೆ ಮಾಡಿ,” ಅಭಿಯಾನವನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ. ಸಿದ್ದರಾಮ ಕಲ್ಮಠ ಮತ್ತು ಪ್ರಾಚಾರ್ಯರಾದ ಪ್ರೊ. ಶಾಂತಮೂರ್ತಿ ಬಿ. ಕುಲಕರ್ಣಿ ರವರು ಚಾಲನೆಯನ್ನು ಮಾಡಿದರು.
ಜೀವಸಂಕುಲದಲ್ಲಿ ಪಕ್ಷಿಗಳ ಪಾತ್ರ ಬಹುಮುಖ್ಯವಾತದ್ದು. ಮನುಷ್ಯನ ಅತಿಯಾದ ಸ್ವಾರ್ಥ ಮತ್ತು ಅವೈಜ್ಞಾನಿಕವಾಗಿ ಬೆಳೆಯುತ್ತಿರುವ ನಗರೀಕರಣ, ಅರಣ್ಯನಾಶ, ಜನಸಂಖ್ಯಾ ಸ್ಫೋಟ, ಕೈಗಾರಿಕರಣ ಮುಂತಾದ ಕಾರಣಗಳಿಂದ ಪ್ರಾಣಿ ಮತ್ತು ಪಕ್ಷಿಗಳ ಸಂಕುಲ ನಾಶದ ಅಂಚಿನಲ್ಲಿದೆ.
ಕೆಲವು ಪ್ರಭೇದಗಳು ಕಣ್ಮರೆಯಾಗಿದ್ದು ತುಂಬಾ ಬೇಸರದ ಸಂಗತಿಯಾಗಿದ್ದು ಪ್ರಭೇದಗಳ “ಸಂರಕ್ಷಣೆ ನಮ್ಮೆಲ್ಲರ ಹೊಣೆ” ಆಗಿದ್ದು, ನಮ್ಮ ನಮ್ಮ ಮನೆ, ಹಾಸ್ಟೆಲ್, ಶಾಲಾ ಕಾಲೇಜು ಮತ್ತು ಕಚೇರಿಗಳ ಆವರಣದಲ್ಲಿ ಈ ರೀತಿಯಾದ ಪಕ್ಷಿಗಳ ನೀರುಣಿಸುವ ಸಣ್ಣ ಪ್ರಯತ್ನದಿಂದ ಪರಿಸರ ಸಂರಕ್ಷಣೆಯಲ್ಲಿ ನಮ್ಮನ್ನು ನಾವು ತೊಡಗಿಸುವ ಮುಖಾಂತರ ಬೇರೆಯವರಿಗೆ ಪ್ರೇರಣೆಯಾಗಬಹುದು.
ಇಂಥ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವ ಸಂಕುಲದ ಬಗ್ಗೆ ಮಾಹಿತಿ ಮತ್ತು ಜಾಗೃತಿಯನ್ನು ಪಕ್ಷಿಗಳಿಗೋಸ್ಕರ ನೀರುಣಿಸುವ ಅಭಿಯಾನವನ್ನು ಚಾಲನೆಗೊಳಿಸಲಾಯಿತು.
ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ರೀತಿಯ ಪರಿಕರಗಳನ್ನು ಅಳವಡಿಸುವ ಮುಖಾಂತರ ಜನಸಾಮಾನ್ಯರಲ್ಲಿ ಕೂಡ ಪಕ್ಷಿ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶ ವಾಗಿರುತ್ತದೆ ಎಂದು ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪೃಥ್ವಿರಾಜ್ ಸಿ. ಬೆಡ್ಜರ್ಗಿ ಮತ್ತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವಿಕುಮಾರ್ ವಿವರಿಸಿದರು.
Be the first to comment