ಬಗರ್ ಹುಕುಂ ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮರಣಾಂತಿಕ ಹಲ್ಲೆ ಹಲವು ರೈತರಿಗೆ ಗಂಭೀರ ಗಾಯ.

ತುಮಕೂರು – ಬಗರ್ ಹುಕುಂ ಜಮೀನಿನಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾರಣಾಂತಿಕ ಹಲ್ಲೆ ಮಾಡಿ ಕ್ರೌರ್ಯ ಮೆರೆದಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಬಳಿಯ ಗಂಗಯ್ಯನ ಪಾಳ್ಯದಲ್ಲಿ ನಡೆದಿದೆ.

 

ಘಟನೆಯ ಹಿನ್ನೆಲೆ.

ಕಳೆದ 8 ವರ್ಷಗಳಿಂದ ಬಗರ್ ಹುಕುಂ ಜಮೀನಿನಲ್ಲಿ ಹಲವು ರೈತರು ಸಾಗುವಳಿ ಮಾಡುತ್ತಿದ್ದು ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಸಂಬಂಧಿಸಿದಂತೆ ರೈತರು ಹಾಗೂ ಅರಣ್ಯ ಇಲಾಖೆಯ ನಡುವೆ ಜಟಾಪಟಿ ನಡೆಯುತ್ತಿದ್ದು ಇತ್ತೀಚೆಗೆ ರೈತರು ಹಾಗೂ ಅರಣ್ಯ ಇಲಾಖೆಯ ಗಲಾಟೆ ಕಳೆದೊಂದು ವಾರದಿಂದ ನಡೆಯುತ್ತಿದ್ದು ಇಂದು ಏಕಾಏಕಿ ರೈತರ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ರೌಡಿಗಳಂತೆ ವರ್ತಿಸಿ ಮಾರಣಾಂತಿಕ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿದೆ.

 

ಇನ್ನು ಘಟನೆಗೆ ಸಂಬಂಧಿಸಿದಂತೆ ಕಳೆದ ವಾರ ರೈತರು ಹಾಗೂ ಅರಣ್ಯ ಇಲಾಖೆಯ ಕೆಲಸ ಸಿಬ್ಬಂದಿಗಳ ನಡುವೆ ಮಾತುಕತೆ ನಡೆದು ಸಂಧಾನವಾಗಿತ್ತು ಎನ್ನಲಾಗಿದೆ. ಆದರೆ ಇಂದು ರೈತರು ಜಮೀನಿನಲ್ಲಿ ಇದ್ದ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಏಕಾಏಕಿ ಜೆಸಿಬಿ ಮೂಲಕ ಟ್ರೆಂಚ್ ತೆಗೆಯಲು ಬಂದಾಗ ಅದನ್ನು ತಡೆಯಲು ಹೋದ ರೈತರ ಮೇಲೆ ಸುಮಾರು ನೂರಕ್ಕೂ ಹೆಚ್ಚು ಸಿಬ್ಬಂದಿಇಂದ ದೊಣ್ಣೆಗಳಿಂದ ರೈತರು ,ಮಹಿಳೆಯರು ಎಂದು ನೋಡದೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ರೈತರ ಮೇಲೆ ಮರಣಾಂತಿಕ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ರೈತರಾದ ದೊಡ್ಡ ನಂಜಯ್ಯ, ಚೇತನ್, ವಿವೇಕ್, ಹಾಲಪ್ಪ ,ಪುಟ್ಟಯ್ಯ ಸೇರಿದಂತೆ ಹಲವರಿಗೆ ತೀವ್ರತರ ಗಾಯಗಳಾಗಿದ್ದು ಇದರ ನಡುವೆ 20 ಹಕ್ಕು ಹೆಚ್ಚು ರೈತರು ಗಾಯಗೊಂಡಿದ್ದಾರೆ.

 

ಇನ್ನು ಗಾಯಗೊಂಡ ರೈತರನ್ನ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು ಹಲವು ರೈತರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಇನ್ನು ಘಟನೆಯ ಬಗ್ಗೆ ಮಾಹಿತಿ ನೀಡಿರುವ ರೈತ ಮುಖಂಡ ದೊಡ್ಡನಂಜಯ ಅರಣ್ಯ ಇಲಾಖೆಯ ಅಧಿಕಾರಿಗಳಾದ ದುಗ್ಗಯ್ಯ ಹಾಗೂ ಮಹಮ್ಮದ್ ರಬ್ಬಾನಿ ಅವರ ಕುಮ್ಮಕ್ಕಿನಿಂದ ಇಂದು ಘಟನೆ ನಡೆದಿದ್ದು ನನ್ನನ್ನ ಅಪಹರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ನನ್ನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿ ಕ್ರೌರ್ಯ ಮೆರೆದಿದ್ದಾರೆ ಎಂದಿದ್ದಾರೆ.

 

ಘಟನೆಯ ಬಗ್ಗೆ ಮಾಹಿತಿ ಪಡೆಯಲು ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಅರಣ್ಯ ಇಲಾಖೆ ಅಧಿಕಾರಿ ದುಗ್ಗಯ್ಯ ಘಟನೆಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದು ಮಾಧ್ಯಮದವರು ತೆರಳಿ ಕೂಡಲ ಆಸ್ಪತ್ರೆಗೆ ದಾಖಲಾದ ರೈತರ ಮೇಲು ಸಹ ಆಸ್ಪತ್ರೆಯ ವಾರ್ಡ್ನಲ್ಲಿ ರೈತರ ಮೇಲೆ ನಿಂದಿಸಲು ಮುಂದಾದ ಘಟನೆಗೂ ಸಹ ಸಾಕ್ಷಿಯಾಗಿದೆ.

 

ಅರಣ್ಯ ಇಲಾಖೆಯ ಅಧಿಕಾರಿ ದುಗ್ಗಯ್ಯ ರವರ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದು ಕಳೆದ ಒಂದು ವಾರದ ಹಿಂದೆ ರೈತ ಮುಖಂಡರು ಒಬ್ಬರನ್ನ ಅಪಹರಿಸಿ ಕೆ.ಬಿ ಕ್ರಾಸ್ ಬಳಿಯ ಅರಣ್ಯದ ಬಳಿ ಬಿಟ್ಟು ಹೋದ ಆರೋಪ ಸಹ ಕೇಳಿ ಬಂದಿದ್ದು ಇನ್ನೂ ಆ ಘಟನೆ ಮಾಸುವ ಮುನ್ನವೇ ರೈತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಎಷ್ಟು ಸರಿ ಎನ್ನುವುದು ಪ್ರಗತಿಪರ ಸಂಘಟನೆಗಳ ಪ್ರಶ್ನೆ.

 

ಅದೇನೇ ಇರಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸರ್ಕಾರಿ ಜಾಗವನ್ನು ರಕ್ಷಿಸಬೇಕಾಗಿದ್ದು ರಕ್ಷಿಸುವ ನೆಪದಲ್ಲಿ ರಕ್ಷಣೆ ನೀಡಬೇಕಾದ ಪೊಲೀಸರನ್ನು ಹೊರತುಪಡಿಸಿ ತಾವೇ ಗೂಂಡಾಗಳಂತೆ ವರ್ತಿಸಿ ರೈತರ ಮೇಲೆ ಹಲ್ಲೆ ಮಾಡಿರುವುದು ನಿಜಕ್ಕೂ ಖಂಡನೀಯ.

 

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಬಗ್ಗೆ ಕ್ರಮ ತೆಗೆದುಕೊಳ್ಳುವರೇ ಕಾದು ನೋಡಬೇಕಿದೆ.

 

Be the first to comment

Leave a Reply

Your email address will not be published.


*