ಚಿಂಚೋಳಿ:ಮುಸ್ಲಿಂ ಮೀಸಲಾತಿ ರದ್ದು ಮುಖಂಡರ ಖಂಡನೆ*

ಚಿಂಚೋಳಿ :ರಾಜ್ಯ ಸರಕಾರ ಏಕಾಏಕಿ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದುಪಡಿಸಿದ್ದು ಖಂಡನಿಯ ಕೂಡಲೇ ಯಥಾವತ್ತಾಗಿ ಕಾಪಾಡಬೇಕು ಇಲ್ಲವಾದಲ್ಲಿ ರಾಜ್ಯದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ತಾಲೂಕಾ ಮುಸ್ಲಿಂ ಅಭಿವೃದ್ಧಿ ಸಮಿತಿಯ ತಾಲೂಕಾಧ್ಯಕ್ಷ ಮಸ್ತಾನ ಅಲಿ ಪಟ್ಟೇದಾರ ಸರಕಾರಕ್ಕೆ ಆಗ್ರಹಿಸಿದ್ದಾರೆ

 

ಅವರು ಚಂದಾಪೂರಿನ ಸರಕಾರಿ ವಿಶ್ರಾಂತಿ ಗೃಹದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸರಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾ ಮಾತನಾಡಿದರು

 

ನಮ್ಮ ಸಮಾಜ ಶೈಕ್ಷಣಿಕ ಆರ್ಥಿಕ ಹಾಗೂ ರಾಜಕೀಯವಾಗಿ ಸಂಪೂರ್ಣ ಹಿಂದುಳಿದೆ ಈ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಹಿಂದಿನ ಸರಕಾರ 4% ಮೀಸಲಾತಿ ನೀಡಿತ್ತು ಹೆಚ್ಚಿನ ಮೀಸಲಾತಿಗಾಗಿ ನ್ಯಾ.ಸಾಚಾರ್ ನೇತೃತ್ವದಲ್ಲಿ ಕಮೇಟಿ ರಚನೆ ಮಾಡಿತ್ತು ನಾವು 7% ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವು ಆದರೆ ಬಿಜೆಪಿ ನೇತೃತ್ವದ ಸರಕಾರ ರಾತೋರಾತ್ರಿ ನಮ್ಮ ಸಮುದಾಯದ ಮೀಸಲಾತಿ ಹೆಚ್ಚಿಸುವುದನ್ನು ಬಿಟ್ಟು ರದ್ದು ಮಾಡಿದ ಉದ್ದೇಶವೇನು ಎಂದು ಪಟ್ಟೇದಾರ ಪ್ರಶ್ನಿಸಿದರು

 

ಪುರಸಭೆಯ ಹಿರಿಯ ಸದಸ್ಯ ಅಬ್ದುಲ್ ಬಾಸೀತ ಮಾತನಾಡಿ ಸರಕಾರ ವಿವಿಧ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸಿರುವುದು ಸ್ವಾಗತಾರ್ಹ ಆದರೆ ನಮ್ಮ ಸಮಾಜದ ಮೀಸಲಾತಿ ರದ್ದುಪಡಿಸಿರುವುದು ಖಂಡನೀಯ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಕಷ್ಟಗಳನ್ನು ನಾವು ಅನುಭವಿಸಿದ್ದೇವೆ ಈಗ ಸಹಿಸಲು ಸಾಧ್ಯವಿಲ್ಲವೆಂದು ಸರಕಾರದ ಕ್ರಮವನ್ನು ಖಂಡಿಸಿದರು

 

ಹಿಂದಿನ ಸರಕಾರ ನಮ್ಮ ಸಮುದಾಯಕ್ಕೆ ಮೀಸಲಿಟ್ಟ ಶಾದಿಭಾಗ್ಯ ಹಾಗೂ ವಿವಿಧ ಯೋಜನೆಗಳನ್ನು ರದ್ದುಪಡಿಸಿದರು ನಾವು ಚಕಾರ ಎತ್ತಿಲ್ಲ ಆದರೆ ನಮ್ಮ ಮೀಸಲಾತಿವೆಂಬ ಬೆಂಕಿಗೆ ಕೈಹಾಕಿ ದೊಡ್ಡ ತಪ್ಪು ಮಾಡಿ ಸಮಸ್ಯೆ ಮೈಮೇಲೆ ಎಳೆದುಕೊಂಡಿದೆ ಎಂದು ಅವರು ಸರಕಾರದ ವಿರುದ್ಧ ಹರಿಹಾಯ್ದರು

 

ಮುಖಂಡ ಮಹೇಮೂದ ಪಟೇಲ ಸಾಸರಗಾಂವ್ ಮಾತನಾಡಿ ಚುನಾವಣೆ ಸಮಯದಲ್ಲಿ ಮೀಸಲಾತಿ ರದ್ದು ಮಾಡಿರುವ ಸರಕಾರದ ಹಿಂದಿನ ಮರ್ಮವೇನು ? ನಮ್ಮ ಸಮುದಾಯದ ವಿರುದ್ಧ ಸರಕಾರ ಪಿತೂರಿ ಮಾಡಿ ನಮ್ಮ ಸಮುದಾಯದ ತೇಜೋವಧೆ ಮಾಡಲು ಹೊರಟಿದೆ ನಾವು ಮತ್ತೆ ಮೀಸಲಾತಿ ಪಡೆಯುವವರೆಗೂ ಸುಮ್ಮನಿರುವುದಿಲ್ಲವೆಂದು ಸರಕಾರಕ್ಕೆ ಎಚ್ಚರ ನೀಡಿದರು

 

ರಾಜ್ಯದಲ್ಲಿ ಮುಸ್ಲಿಂ ಸಮಾಜದ ಮುಖಂಡರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಲಾಗುತ್ತಿದೆ ಹಿಜಾಬ್ ಜಟಕಾ ಅಜಾಂ ಸೇರಿದಂತೆ ಇತರೆ ಸಮಸ್ಯೆಗಳನ್ನು ಶೃಷ್ಟಿ ಮಾಡಿ ನಮ್ಮವರನ್ನು ತುಳಿಯಲು ಪ್ರಯತ್ನಿಸಿತು ಆದರೆ ರಾಜ್ಯದ ಜನ ಇವರ ಆಟಕ್ಕೆ ಮರಳಾಗಲ್ಲಿಲ್ಲ ಆದರೆ ಮುಸ್ಲಿಂ ಸಮಾಜದವರ ಮೀಸಲಾತಿ ಮತ್ತೆ ಪಡೆಯುವವರೆಗೂ ನಾವು ನಿಶ್ಚಿಂತೆಯಿಂದ ಇರುವುದಿಲ್ಲ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆಂದು ಅವರು ಎಚ್ಚರಿಕೆ ನೀಡಿದರು

 

ಈ ಸಂದರ್ಭದಲ್ಲಿ ಮುಖಂಡರಾದ ಸೈಯದ ಶಬ್ಬೀರ ಅನ್ವರ್ ಖತೀಬ್ ಮಸೂದ ಸೌದಾಗರ್ ಮತೀನ ಸೌದಾಗರ್ ಮಹ್ಮದ ಹಾದಿ ಖಲೀಲ ಪಟೇಲ ಅಯೂಬಖಾನ್ ಶೇಖ್ ಫರೀದ ಮೊಯೀನ್ ಮೊಮೀನ್ ಶೇಖ್ ಮುಖ್ತಾರ ನುಮಾನ ಪಟೇಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*